28.06.26 Avyakt Bapdada
Kannada
Murli 30.11.2010 Om Shanti Madhuban
“ಪ್ರತಿಯೊಂದು ಗಂಟೆಗೆ
ಮನಸ್ಸಿನ ವ್ಯಾಯಾಮ (ಎಕ್ಸರ್ಸೈಜ್) ಮಾಡಿ ಅದನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ, ಯಾವಾಗ
ಬಾಬಾನೇ ಸಂಸಾರ ಆಗಿದ್ದಾರೆಂದಾಗ ಸಂಸ್ಕಾರವನ್ನೂ ಸಹ ತಂದೆಯ ಸಮಾನ ಮಾಡಿಕೊಳ್ಳಿ”
ಇಂದು ಬಾಪ್ದಾದಾರವರು
ಎಲ್ಲಾ ಮಕ್ಕಳನ್ನು ಒಂದು ದೇಶಿ ಯಾವುದು ವಾಸ್ತವಿಕ ದೇಶ ಆಗಿದೆ, ಒಂದು ದೇಶ ಎಷ್ಟು ಪ್ರಿಯವಾಗಿದೆ
ಎಂದು ಗೊತ್ತಿದೆಯಲ್ಲವೇ. ಬಾಪ್ದಾದಾರವರೂ ಸಹ ಅದೇ ದೇಶದಿಂದ ಎಲ್ಲಾ ಮಕ್ಕಳನ್ನು ಮಿಲನ ಮಾಡಲು
ಬಂದಿದ್ದಾರೆ. ಮಕ್ಕಳಿಗೆ ತಂದೆಯನ್ನು ಮಿಲನ ಮಾಡುವ ಖುಷಿ ಇದೆ ಮತ್ತು ತಂದೆಗೆ ಮಕ್ಕಳನ್ನು ಮಿಲನ
ಮಾಡುವ ಖುಷಿ ಇದೆ. ಇಂದು ಬಾಪ್ದಾದಾ ಎಲ್ಲಾ ಮಕ್ಕಳ ಸ್ವರೂಪಗಳನ್ನು ವಿಶೇಷವಾಗಿ 5 ರೂಪಗಳನ್ನು
ನೋಡುತ್ತಿದ್ದಾರೆ. ಅದರಿಂದ ಪಂಚಮುಖಿ ಎಂದು ಬ್ರಹ್ಮನಿಗೂ ಸಹ ಗಾಯನವಿದೆ, ಅಂದಾಗ ತಮ್ಮ 5
ರೂಪಗಳನ್ನು ತಿಳಿದುಕೊಂಡಿದ್ದೀರಲ್ಲವೇ. ಮೊದಲನೆಯದಾಗಿ ಎಲ್ಲರ ಜ್ಯೋತಿರ್ಬಿಂದು ಸ್ವರೂಪ, ತಮ್ಮ
ಎದುರಿನಲ್ಲಿ ಬಂದಿದೆಯೇ! ಎಷ್ಟು ಹೊಳೆಯುತ್ತಿರುವ ಪ್ರಿಯ ರೂಪವಾಗಿದೆ. ಎರಡನೆಯದಾಗಿ ದೇವತಾ ರೂಪ,
ಆ ರೂಪವೂ ಸಹ ಎಷ್ಟು ಪ್ರಿಯ ಮತ್ತು ನ್ಯಾರ ಆಗಿದೆ. ಮೂರನೆಯ ರೂಪ ಮಧ್ಯದಲ್ಲಿ ಪೂಜ್ಯನೀಯ ರೂಪವಾಗಿದೆ.
ನಾಲ್ಕನೆಯ ರೂಪ ಬ್ರಾಹ್ಮಣ ರೂಪ ಸಂಗಮವಾಸಿ ಆಗಿದೆ, ಅದೂ ಸಹ ಎಷ್ಟು ಮಹಾನ್ ಆಗಿದೆ. ಮತ್ತು
ಐದನೆಯದಾಗಿ ಫರಿಸ್ಥಾರೂಪ, ಈ ಐದು ರೂಪಗಳು ಎಷ್ಟು ಪ್ರಿಯವಾಗಿವೆ. ಬಾಪ್ದಾದಾರವರು ಈ ದಿನ ಮಕ್ಕಳಿಗೆ
ಮನಸ್ಸಿನ ವ್ಯಾಯಾಮ (ಎಕ್ಸರ್ಸೈಜ್) ಕಲಿಸುತ್ತಾರೆ ಏಕೆಂದರೆ ಮನಸ್ಸು ಕೆಲವೊಮ್ಮೆ ತನ್ನ ಕಡೆ
ಎಳೆಯುತ್ತದೆ. ಈ ದಿನ ಬಾಪ್ದಾದಾ ಮನಸ್ಸನ್ನು ಏಕರಸವನ್ನಾಗಿ ಮಾಡಿಕೊಳ್ಳುವ ವ್ಯಾಯಾಮ (ಎಕ್ಸರ್ಸೈಜ್)
ಕಲಿಸುತ್ತಿದ್ದಾರೆ. ಇಡೀ ದಿನದಲ್ಲಿ ಈ 5 ರೂಪಗಳ ವ್ಯಾಯಾಮ (ಎಕ್ಸರ್ಸೈಜ್) ಮಾಡಿ ಮತ್ತು ಅನುಭವ
ಮಾಡಿ. ಯಾವ ರೂಪವನ್ನು ಯೋಚನೆ ಮಾಡುತ್ತೀರೆಂದರೆ ಅದನ್ನು ಮನಸ್ಸಿನಲ್ಲಿ ಅನುಭವ ಮಾಡಿ. ಹೇಗೆ
ಜ್ಯೋತಿರ್ಬಿಂದು ಎಂಡು ಹೇಳುವುದರಿಂದಲೇ ಆ ಹೊಳೆಯುತ್ತಿರುವ ರೂಪ ಎದುರಿನಲ್ಲಿ ಬಂದು ಬಿಡುತ್ತದೆ,
ಈ ರೀತಿ 5 ರೂಪಗಳನ್ನು ಎದುರಿನಲ್ಲಿ ತೆಗೆದುಕೊಂಡು ಬನ್ನಿ ಮತ್ತು ಆ ರೂಪವನ್ನು ಅನುಭವ ಮಾಡಿ.
ಪ್ರತಿಯೊಂದು ಗಂಟೆಯಲ್ಲಿ 5 ಸೆಕೆಂಡ್ ಈ ಡ್ರಿಲ್ನಲ್ಲಿ ಉಪಯೋಗಿಸಿ. ಒಂದುವೇಳೆ ಸೆಕೆಂಡ್
ಇಲ್ಲವೆಂದರೆ 5 ನಿಮಿಷ ತೊಡಗಿಸಿ. ಪ್ರತಿಯೊಂದು ರೂಪ ಎದುರಿನಲ್ಲಿ ತೆಗೆದುಕೊಂಡು ಬನ್ನಿ, ಅನುಭವ
ಮಾಡಿ. ಮನಸ್ಸನ್ನು ಈ ಆತ್ಮಿಕ ವ್ಯಾಯಾಮ (ಎಕ್ಸರ್ಸೈಜ್) ದಲ್ಲಿ ಬಿಜಿ ಮಾಡಿಕೊಳ್ಳಿ ಆಗ ಮನಸ್ಸು
ವ್ಯಾಯಾಮ (ಎಕ್ಸರ್ಸೈಜ್) ದಿಂದ ಚೆನ್ನಾಗಿರುತ್ತದೆ. ಹೇಗೆ ಶಾರೀರಿಕ ವ್ಯಾಯಾಮ (ಎಕ್ಸರ್ಸೈಜ್)
ಶರೀರವನ್ನು ಆರೋಗ್ಯವಾಗಿ ಇಡುತ್ತದೆ, ಅದೇ ರೀತಿ ಈ ವ್ಯಾಯಾಮ (ಎಕ್ಸರ್ಸೈಜ್) ಮನಸ್ಸನ್ನು
ಶಕ್ತಿಶಾಲಿಯನ್ನಾಗಿ ಇಡುತ್ತದೆ. ಒಂದು ಸೆಕೆಂಡಾದರೂ ಮನಸ್ಸಿನಲ್ಲಿ ಆ ರೂಪವನ್ನು ತೆಗೆದುಕೊಂಡು
ಬನ್ನಿ. ಸಹಜ ಎಂದು ತಿಳಿದುಕೊಂಡಿದ್ದೀರೋ ಅಥವಾ ಕಷ್ಟ ಆಗುತ್ತದೋ? ಕಷ್ಟ ಆಗುವುದಿಲ್ಲ ಏಕೆಂದರೆ ಈ
ವ್ಯಾಯಾಮ (ಎಕ್ಸರ್ಸೈಜ್) ತಾವು ಅನೇಕ ಬಾರಿ ಮಾಡಿದ್ದೀರಿ. ಪ್ರತಿಯೊಂದು ಕಲ್ಪದಲ್ಲಿಯೂ ಮಾಡಿದ್ದೀರಿ.
ತಮ್ಮದೇ ರೂಪವನ್ನು ಎದುರಿನಲ್ಲಿ ತೆಗೆದುಕೊಂಡು ಬರುವುದು ಕಷ್ಟ ಆಗುವುದಿಲ್ಲ. ಒಂದೊಂದು ರೂಪದ
ಎದುರಿನಲ್ಲಿ ಬರುತ್ತಿದ್ದಾಗಲೇ ಪ್ರತಿಯೊಂದು ರೂಪದ ವಿಶೇಷತೆಯ ಅನುಭವ ಆಗುತ್ತದೆ. ಕೆಲವೊಮ್ಮೆ
ಕೆಲವು ಮಕ್ಕಳು ಹೇಳುತ್ತಾರೆ - ನಾವು ಈ ರೂಪಗಳ ಅನುಭವ ಮಾಡಲು ಬಯಸುತ್ತೇವೆ ಆದರೆ ಮನಸ್ಸು ಬೇರೆ
ಕಡೆ ಹೊರಟು ಹೋಗಿ ಬಿಡುತ್ತದೆ. ಎಷ್ಟು ಸಮಯ ಮನಸ್ಸು ಎಲ್ಲಿ ಇಡಬೇಕೆಂದು ಬಯಸುತ್ತೀರೋ ಅಷ್ಟು
ಸಮಯಕ್ಕೆ ಬದಲಾಗಿ ವ್ಯರ್ಥ, ಅಯಥಾರ್ಥ ಸಂಕಲ್ಪವೂ ಬಂದು ಬಿಡುತ್ತದೆ. ಕೆಲವೊಮ್ಮೆ ಮನಸ್ಸಿನಲ್ಲಿ
ಹುಡುಗಾಟಿಕೆಯೂ ಬಂದು ಬಿಡುತ್ತದೆ ಅಂದಾಗ ಬಾಪ್ದಾದಾರವರು ಪ್ರತಿಯೊಂದು ಗಂಟೆ 5 ಸೆಕೆಂಡ್ ಅಥವಾ 5
ನಿಮಿಷ ಈ ವ್ಯಾಯಾಮ (ಎಕ್ಸರ್ಸೈಜ್)ದಲ್ಲಿ ಅನುಭವ ಮಾಡಿಸಲು ಬಯಸುತ್ತಾರೆ. 5 ನಿಮಿಷ ಮನಸ್ಸನ್ನು ಈ
ಕಡೆ ನಡೆಸಿ. ನಡೆಯುವುದು ಚೆನ್ನಾಗಿರುತ್ತದೆಯಲ್ಲವೇ! ನಂತರ ತಮ್ಮ ಕಾರ್ಯದಲ್ಲಿ ತತ್ಪರರಾಗಿ
ಏಕೆಂದರೆ ಕಾರ್ಯವಂತೂ ಮಾಡಲೇಬೇಕು. ಕಾರ್ಯ ಇಲ್ಲದೆ ನಡೆಯಲು ಆಗುವುದಿಲ್ಲ. ಯಜ್ಞ ಸೇವೆ, ವಿಶ್ವ
ಸೇವೆಯಂತೂ ಎಲ್ಲರೂ ಮಾಡುತ್ತಿದ್ದೀರಿ ಮತ್ತು ಮಾಡಲೇಬೇಕು. ಈ 5 ನಿಮಿಷದ ವ್ಯಾಯಾಮ (ಎಕ್ಸರ್ಸೈಜ್)
ಮಾಡಿದ ನಂತರ ತಮ್ಮದು ಯಾವ ಕಾರ್ಯಗಳು ಇರುತ್ತದೆ ಅದರಲ್ಲಿ ತತ್ಪರರಾಗಿ. 5ಸೆಕೆಂಡ್ ಅಥವಾ 5 ನಿಮಿಷ
ಕೊಡಲು ಆಗದೆ ಇರುವವರು, ಇಷ್ಟಾದರೂ ಸಮಯ ಸಿಗದೆ ಇರುವವರು ಯಾರಾದರೂ ಇದ್ದಾರೆಯೇ? ಯಾರಾದ್ದರು
ಇದ್ದರೆ ಕೈ ಎತ್ತಿ. ಯಾರಿಗೆ 5 ನಿಮಿಷವೂ ಇಲ್ಲ ಅವರು ಕೈ ಎತ್ತಿ. ಯಾರೂ ಇಲ್ಲ. ಯಾರಾದರೂ
ಇದ್ದಾರೆಯೇ? ಎಲ್ಲರೂ ಮಾಡಬಹುದು. ಅಂದಾಗ ಪದೇ-ಪದೇ ಈ ವ್ಯಾಯಾಮ (ಎಕ್ಸರ್ಸೈಜ್) ಮಾಡಿದರೆ ಕಾರ್ಯ
ಮಾಡುತ್ತಿದ್ದರೂ ಈ ನಶೆ ಇರುತ್ತದೆ ಏಕೆಂದರೆ ತಂದೆಯ ಮಂತ್ರವೂ ಸಹ ಆಗಿದೆ ಮನ್ಮನಾಭವ. ಈ ಮಂತ್ರದ
ಮನಸ್ಸಿನ ಅನುಭವದಿಂದ ಮಾಯಾಜೀತ ಆಗುವುದರಲ್ಲಿ ಮನಸ್ಸು ಯಂತ್ರ ಆಗಿ ಬಿಡುತ್ತದೆ ಏಕೆಂದರೆ
ಬಾಪ್ದಾದಾರವರು ಹೇಳಿದ್ದಾರೆ ಎಷ್ಟು ಸಮಯ ಮುಂದುವರೆಯುತ್ತದೆ ಅದರ ಅನುಸಾರವಾಗಿ ಒಂದು
ಸೆಕೆಂಡಿನಲ್ಲಿ ಸ್ಟಾಪ್ ಮಾಡಬೇಕಾಗುತ್ತದೆ. ಈ ವ್ಯಾಯಾಮ (ಎಕ್ಸರ್ಸೈಜ್) ಮಾಡುವುದರಿಂದ ಮನ್ಮನಾಭವ
ಆಗುವುದರಲ್ಲಿ ಸಹಯೋಗ ಸಿಗುತ್ತದೆ ಏಕೆಂದರೆ ಬಾಪ್ದಾದಾರವರು ನೋಡಿದ್ದಾರೆ, ಯಾರೆಲ್ಲಾ ಭಾಷಣ
ಮಾಡುತ್ತೀರಿ ಅಥವಾ ಯಾರಿಗಾದರೂ ಸಂದೇಶವನ್ನು ಕೊಟ್ಟಾಗ ಏನು ಹೇಳುತ್ತೀರಿ? ನಾವು ವಿಶ್ವವನ್ನು
ಪರಿವರ್ತನೆ ಮಾಡುವವರಾಗಿದ್ದೇವೆ. ವಿಶ್ವವನ್ನು ಪರಿವರ್ತನೆ ಮಾಡಬೇಕೆಂದಾಗ ಮೊದಲು ತಮ್ಮ ಮನಸ್ಸನ್ನು
ಈ ರೀತಿ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ಯಾವ ಸಮಯದಲ್ಲಿ ಯಾವ ಸಂಕಲ್ಪ ಮಾಡಬೇಕೆಂದು ಬಯಸುತ್ತೀರೋ
ಮನಸ್ಸು ಅದೇ ಸಂಕಲ್ಪ ಮಾಡಬಹುದು. ಸೆಕೆಂಡಿನಲ್ಲಿ ಆರ್ಡರ್ ಮಾಡಿ, ಹೇಗೆ ಈ ಶರೀರದ
ಕರ್ಮೇಂದ್ರಿಗಳಿಗೆ ಆರ್ಡರ್ ಮಾಡುತ್ತೀರಿ, ಮೇಲೆ, ಕೆಳಗೆ ಮಾಡಿ ಅಂದಾಗ ಈ ಇಂದ್ರಿಯಗಳು
ಮಾಡುತ್ತವೆಯಲ್ಲವೇ, ಅದೇ ರೀತಿ ಮನಸ್ಸು ವ್ಯರ್ಥ ಮತ್ತು ಅಯಥಾರ್ಥದಿಂದ ಬಚಾವ್ ಆಗಲಿ. ಮನಸ್ಸಿಗೆ
ಮಾಲೀಕರಾಗಬೇಕು. ನನ್ನ ಮನಸ್ಸು ಎಂದು ಹೇಳುತ್ತೀರಲ್ಲವೇ. ನನ್ನ ಮನಸ್ಸು ಇಷ್ಟು ಆರ್ಡರ್ನಲ್ಲಿ
ಇರಬೇಕು, ಅದಕ್ಕೋಸ್ಕರ ಮನಸ್ಸಿನ ವ್ಯಾಯಾಮ (ಎಕ್ಸರ್ಸೈಜ್) ತಿಳಿಸಿದ್ದೇವೆ.
ಪ್ರತಿಯೊಬ್ಬ ಮಗುವು ನಾವು
ಮನ್ಜೀತ, ಜಗತ್ಜೀತರಾಗಬೇಕೆಂದು ಬಯಸುತ್ತಿರುವುದನ್ನು ಬಾಪ್ದಾದಾರವರು ನೋಡಿದ್ದಾರೆ ಅದರಿಂದ
ಬರುವಂತಹ ಸಮಯಕ್ಕಿಂತ ಮೊದಲೇ ಎಲ್ಲಿ ಬೇಕೋ ಅಲ್ಲಿ ಮನಸ್ಸು ಸಹಜವಾಗಿ ಸ್ಥಿರವಾಗುವ ಅಭ್ಯಾಸವನ್ನು
ಮಾಡಿ. ಅಂದಾಗ ಬಾಪ್ದಾದಾರವರು ಈ ದಿನ ಪ್ರತಿಯೊಬ್ಬ ಮಗುವು ಈ ರೀತಿ ಶಕ್ತಿಶಾಲಿ ಆಗಬೇಕು, ಯಾವ-ಯಾವ
ಸಂಕಲ್ಪ ಮಾಡುತ್ತೀರೋ ಅದೇ ಮನಸು-ಬುದ್ಧಿ-ಸಂಸ್ಕಾರ ಆರ್ಡರಿನಲ್ಲಿ ಇರಲಿ. ಯಾರಿಗೆ ಈ ಅಭ್ಯಾಸ
ಇರುತ್ತದೆ ಅವರು ಖಂಡಿತ ಜಗತ್ಜೀತರು ಆಗುತ್ತಾರೆ. ಪರಿವಾರದ ಜೊತೆ, ಬಾಪ್ದಾದಾರವರ ಜೊತೆ
ಪ್ರೀತಿಯಂತೂ ಖಂಡಿತ ಇದ್ದೇ ಇದೆ. ಎಷ್ಟು ಮಕ್ಕಳಿಗೆ ತಂದೆಯ ಜೊತೆ ಪ್ರೀತಿ ಇದೆ, ಅದಕ್ಕಿಂತ ಹೆಚ್ಚು
ತಂದೆಗೆ ಮಕ್ಕಳ ಜೊತೆ ಪ್ರೀತಿ ಇದೆ. ಅಂದಾಗ ಮಕ್ಕಳು ಒಳ್ಳೆಯ ಚಮತ್ಕಾರವನ್ನು ಮಾಡಿದ್ದೀರಿ. ನನ್ನ
ಬಾಬಾ, ನನ್ನ ಬಾಬಾ ಎಂದು ಹೇಳಿ ತನ್ನವರನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ. ಪ್ರತಿಯೊಬ್ಬ ಮಕ್ಕಳು
ನಿಶ್ಚಯದಿಂದ ನನ್ನ ಬಾಬಾ ಎಂದು ಹೇಳುತ್ತಾರೆ ಮತ್ತು ತಂದೆಯೂ ಸಹ ಹೇಳುತ್ತಾರೆ ನನ್ನ ಮಕ್ಕಳು ಎಂದು.
ಈ ನನ್ನ ಎಂಬ ಶಬ್ದ ಕಮಾಲ್ (ಅದ್ಭುತ) ಮಾಡಿದೆ. ಪ್ರತಿಯೊಬ್ಬರ ಹೃದಯದಲ್ಲಿ ನನ್ನ ಬಾಬಾ, ಪ್ರಿಯ
ಬಾಬಾ ಎಂದು ಬಲವಿರುತ್ತದೆ ಮತ್ತು ತಂದೆಯೂ ಸಹ ಪದೇ-ಪದೇ ನನ್ನ ಮಕ್ಕಳು ಎಂದು ಹೇಳುತ್ತಾರೆ. ಯಾವುದೇ
ಮಾಯೆಯ ಯುದ್ಧ ಇರಲಿ ಏಕೆಂದರೆ ಅರ್ಥ ಕಲ್ಪ ಮಾಯೆಯನ್ನು ತನ್ನದನ್ನಾಗಿ ಮಾಡಿಕೊಂಡಿದ್ದೀರಲ್ಲವೇ
ಅಂದಾಗ ಮಾಯೆಗೂ ಸಹ ತಮ್ಮ ಜೊತೆ ಪ್ರೀತಿ ಇರುತ್ತದೆಯಲ್ಲವೇ ಅಂದಾಗ ಪದೇ-ಪದೇ ಬರುವ ಪ್ರಯತ್ನ
ಮಾಡುತ್ತದೆ ಆದರೆ ಯಾರು ಹೃದಯದಿಂದ ನನ್ನ ಬಾಬಾ ಎಂದು ಹೇಳುತ್ತಾರೆ ಅವರಿಗೆ ತಂದೆಯ ಸಹಯೋಗ
ಸಿಗುತ್ತದೆ. ಒಮ್ಮೆ ಹೃದಯದಿಂದ ನನ್ನ ಬಾಬಾ ಎಂದು ಹೇಳಿದರೆ ಸಾವಿರ ಪಟ್ಟು ಶಕ್ತಿಶಾಲಿ ಸಹಯೋಗವನ್ನು
ಕೊಡಲು ತಂದೆ ಬಂಧಿತರಾಗಿದ್ದಾರೆ. ಅನುಭವ ಇದೆಯಲ್ಲವೇ. ಕೇವಲ ಸಮಯದಲ್ಲಿ ಈ ಅನುಭವವನ್ನು
ಪ್ರಾಕ್ಟಿಕಲ್ನಲ್ಲಿ ತೆಗೆದುಕೊಂಡು ಬನ್ನಿ.
ಬಾಪ್ದಾದಾರವರು ಮಕ್ಕಳ
ಒಂದು ವಿಷಯವನ್ನು ನೋಡಿ ಹೃದಯದಲ್ಲಿ ಮಕ್ಕಳ ಮೇಲೆ ಮುಗುಳ್ನಗುತ್ತಾರೆ. ಯಾವ ಮಾತು ಎಂದು
ಗೊತ್ತಾಗಿದೆಯೇ? ಬಾಬಾನೇ ನನ್ನ ಸಂಸಾರ ಆಗಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಬಾಬಾನೇ ನನ್ನ
ಸಂಸಾರ ಎಂದು ಹೇಳುತ್ತೀರಲ್ಲವೇ. ಬಾಬಾನೇ ನನ್ನ ಸಂಸಾರ ಆಗಿದ್ದಾರೆ ಎಂದು ಯಾರು ಹೇಳುತ್ತೀರಿ ಅವರು
ಕೈ ಎತ್ತಿ. ಒಳ್ಳೆಯದು ತಂದೆಯೇ ಸಂಸಾರ ಆಗಿದ್ದಾರಲ್ಲವೇ, ಬೇರೆ ಯಾವುದೇ ಸಂಸಾರ ಇಲ್ಲ ತಾನೇ. ಬೇರೆ
ಸಂಸಾರ ಇಲ್ಲ ಆದರೆ ಬೇರೆ ಯಾವುದಿದೆ? ಸಂಸ್ಕಾರ. ಯಾವಾಗ ತಂದೆಯೇ ನನ್ನ ಸಂಸಾರ ಆಗಿದ್ದಾರೆ ಬೇರೆ
ಯಾವುದೇ ಸಂಸಾರನೇ ಇಲ್ಲ ಅಂದಾಗ ಸಂಸ್ಕಾರ ಹೇಗೆ ಹುಟ್ಟುಕೊಳ್ಳುತ್ತದೆ? ಈಗಿನ ಸಮಯದಲ್ಲಿ ಬಾಪ್ದಾದಾ
ಸಮಯದ ಪ್ರಮಾಣ ಸಂಸ್ಕಾರ ಎಂಬ ಶಬ್ದವನ್ನು ಅಳಿಸಲು ಇಷ್ಟ ಪಡುತ್ತಾರೆ. ಅಳಿಸಲು ಸಾಧ್ಯವೇ? ಅಳಿಸಲು
ಸಾಧ್ಯವೇ? ಸಂಸ್ಕಾರ ವಿಘ್ನ ರೂಪ ಆಗಲು ಸಾಧ್ಯವಿಲ್ಲ, ಈ ದೃಢ ಸಂಕಲ್ಪ ಮಾಡಬಹುದು ಎಂದು ಯಾರು
ತಿಳಿಯುತ್ತಾರೆ, ಅವರು ದೃಢ ಪುರುಷಾರ್ಥದ ಮೂಲಕ ಇಂದೂ ಸಹ ಸಮಾಪ್ತಿ ಮಾಡಲೇಬೇಕು ಎಂಬ ದೃಢ
ಪುರುಷಾರ್ಥ ಮಾಡಬಹುದಲ್ಲವೇ. ಮಾಡೋಣ, ಯೋಚನೆ ಮಾಡೋಣ, ನೋಡೋಣ, ಈ ರೀತಿ ಅಲ್ಲ, ಮಾಡಲೇಬೇಕು.
ಸಂಸ್ಕಾರದ ಕಾರ್ಯವಾಗಿದೆ ಬರುವುದು ಮತ್ತು ಮಕ್ಕಳ ಕಾರ್ಯವಾಗಿದೆ ಸಮಾಪ್ತಿ ಮಾಡುವುದು. ಸಾಹಸ ಇದೆಯೇ?
ಸಾಹಸ ಇದೆಯೇ? ಮೊದಲೂ ಸಹ ಕೈ ಎತ್ತಿದ್ದೀರಿ ಆದರೆ ಚೆಕ್ ಮಾಡಿಕೊಳ್ಳಿ. ಏನು ಸಂಕಲ್ಪ ಮಾಡಿದ್ದೀರೋ
ಅದು ಆಗುತ್ತದೆಯೇ? ತಂದೆ ಹೇಳಿದ್ದಾರೆ, ತಂದೆ ಕಾರ್ಯವಾಗಿದೆ ಲಕ್ಷ್ಯ ನೀಡುವುದು ಮತ್ತು ಮಕ್ಕಳ
ಕಾರ್ಯವಾಗಿದೆ ತಂದೆ ಯಾವುದು ಹೇಳಿದ್ದಾರೆಯೋ ಅದನ್ನು ಮಾಡಲೇಬೆಕು. ಇದರ ಒಂದು ತಾರೀಖನ್ನು ಫಿಕ್ಸ್
ಮಾಡಿ. ಹೇಗೆ ಭಕ್ತರು ಶಿವರಾತ್ರಿಯನ್ನು ಆಚರಣೆ ಮಾಡಲೇಬೇಕು ಎಂದು ದಿನಾಂಕ ಫಿಕ್ಸ್ ಮಾಡಿದ್ದಾರೆ,
ಅಂದಾಗ ಇದರ ದಿನಾಂಕವನ್ನೂ (ಡೇಟ್) ಸಹ ಫಿಕ್ಸ್ ಮಾಡಿ. ಒಳ್ಳೆಯದು. ಎಲ್ಲರದೂ ಒಟ್ಟಿಗೆ
ಆಗಲಿಲ್ಲವೆಂದರೆ ಪ್ರತಿಯೊಬ್ಬರು ತಮಗಾಗಿ ದಿನಾಂಕವನ್ನು ಫಿಕ್ಸ್ ಮಾಡಬಹುದಲ್ಲವೇ, ಮಾಡಬಹುದೆ?
ಮಾಡಬಹುದೆ? ಮಾಡಬಹುದು ಎಂದರೆ ಕೈ ಎತ್ತಿ. ಅಂದಾಗ ಮಾಡಬಹುದು ಎಂದರೆ ಮಾಡಿದ್ದೀರಾ? ಡಬಲ್
ವಿದೇಶಿಯವರು ದಿನಾಂಕವನ್ನು ಫಿಕ್ಸ್ ಮಾಡಿದ್ದೀರಾ? ಎದುರಿನಲ್ಲಿ ಇರುವವರು ಫಿಕ್ಸ್ ಮಾಡಿದ್ದೀರಾ?
ಯಾರು ದಿನಾಂಕವನ್ನು ಫಿಕ್ಸ್ ಮಾಡಿದ್ದೀರಿ ಅದನ್ನು ಬಾಪ್ದಾದಾರವರಿಗೆ ಬರೆದು ಕೊಡಿ. ಬಾಪ್ದಾದಾರವರೂ
ಸಹ ಮಕ್ಕಳಿಗೆ ಪೇಪರ್ ಪಾಸ್ ಆಗುವ ಸಾಹಸವಂತೂ ಕೊಡುತ್ತಾರಲ್ಲವೇ. ನಂತರ ವಾಹ್! ಮಕ್ಕಳೇ ವಾಹ್! ಎಂಬ
ಹಾಡನ್ನು ಹೇಳುತ್ತಾರೆ. ಸಮಾರಂಭವನ್ನು ಆಚರಣೆ ಮಾಡುತ್ತೇವೆ ಯಾರು ಸಂಕಲ್ಪ ಮಾಡಿದ್ದಾರೋ ಮತ್ತು
ಅದರ ಅನುಸಾರವಾಗಿ ಪ್ರಾಕ್ಟಿಕಲ್ ಮಾಡಿದರೆ ಅವರ ಸಮಾರಂಭವನ್ನು ಆಚರಣೆ ಮಾಡುತ್ತೇವೆ ಏಕೆಂದರೆ
ಅಂತರವಂತೂ ಬರುತ್ತಿರುತ್ತದೆಯಲ್ಲವೇ. ಯಾವ ದಿನಾಂಕವನ್ನು ಫಿಕ್ಸ್ ಮಾಡಿದ್ದೀರಿ ಅದರಲ್ಲಿ
ಮುಂದುವರೆಯಲು ಸಮೀಪಕ್ಕೆ ಬರುತ್ತೀರಲ್ಲವೇ. ಅದರಲ್ಲಿ ಅಂತರವಂತೂ ಶುರು ಆಗುತ್ತದೆ. ಯಾರು ದಿನಾಂಕದ
ಅನುಸಾರವಾಗಿ ಸಂಪನ್ನರಾಗುತ್ತಾರೆ ಅವರ ಸಮಾರಂಭವನ್ನು ಬಾಪ್ದಾದಾರವರು ಮಾಡುತ್ತಾರೆ. ಒಳಗೆ ಯಾರು
ಮಾಡುತ್ತಾರೆ, ಅವರನ್ನು ನೋಡುವವರು ವೆರಿಫೈ (ಪರಿಶೀಲನೆ) ಮಾಡುತ್ತಾರೆ ಏಕೆಂದರೆ ಸಂಪರ್ಕದಲ್ಲಂತೂ
ಬರುತ್ತೀರಲ್ಲವೇ. ಸಂಸ್ಕಾರ ಯಾರ ಜೊತೆಯಾದರೂ ಹೊರ ಬರುತ್ತದೆಯಲ್ಲವೇ. ಏಕೆಂದರೆ ಪ್ರತಿಯೊಬ್ಬ
ಮಗುವಿಗೆ ನಾನು ಮಾಸ್ಟರ್ ಸರ್ವಶಕ್ತಿವಂತನಾಗಿದ್ದೇನೆ ಎಂಬ ಶುದ್ಧ ನಶೆ ಇರುವುದನ್ನು ಬಾಪ್ದಾದಾ
ನೋಡಿದ್ದಾರೆ. ಮಾಸ್ಟರ್ ಅಂತೂ ಆಗಿದ್ದೀರಲ್ಲವೇ. ಸರ್ವಶಕ್ತಿವಂತ ಅಂದಮೇಲೆ ಸಂಕಲ್ಪವನ್ನು ಪೂರ್ಣ
ಮಾಡುವುದೂ ಸಹ ಒಂದು ಶಕ್ತಿಯಾಗಿದೆಯಲ್ಲವೇ. ಒಳ್ಳೆಯದು.
ಯಾರು ಇಂದು ಮೊದಲನೇ ಬಾರಿ
ಬಂದಿದ್ದೀರಿ ಅವರು ಎದ್ದು ನಿಲ್ಲಿ. ನೋಡಿ ಎಷ್ಟೊಂದು ಜನ ಬಂದಿದ್ದಾರೆ. ಬಾಪ್ದಾದಾರವರು
ಶುಭಾಶಯಗಳನ್ನು ನೀಡುತ್ತಿದ್ದಾರೆ. ಮಧುಬನಕ್ಕೆ ಬರುವ ಶುಭಾಶಯಗಳು, ಶುಭಾಶಯಗಳು. ಬಾಪ್ದಾದಾರವರು
ಟೂ ಲೇಟ್ ಬೋರ್ಡ್ ಹಾಕುವ ಮೊದಲೇ ತಲುಪಿ ಬಿಟ್ಟಿದ್ದೀರಿ ಎಂದು ತಿಳಿಯುತ್ತಾರೆ ಅದರಿಂದ ಪೂರ್ತಿ
ಪರಿವಾರ ಬಾಪ್ದಾದಾರವರದಂತೂ ಆಗಿದೆ, ಪೂರ್ತಿ ಪರಿವಾರಕ್ಕೆ ತಮ್ಮೆಲ್ಲರ ಮೇಲೆ ಇದೇ ಶುಭ ಆಸೆ ಇದೆ -
ಸದಾ ಡಬಲ್ ಪುರುಷಾರ್ಥ ಮಾಡಿ ಕೊನೆಯಲ್ಲಿ ಬಂದರೂ ಸಹ ಫಸ್ಟಿನಲ್ಲಿ ಹೋಗಬಹುದು. ಸಾಹಸ ಇದೆಯೇ? ಯಾರು
ಈ ದಿನ ಬಂದಿದ್ದಾರೋ ಅವರಲ್ಲಿ ಸಾಹಸವಿದೆಯೇ? ಕೊನೆಯಲ್ಲಿ ಬಂದಿದ್ದರೂ ಫಾಸ್ಟ್ ಆಗಿ ಹೋಗಿ
ಫಸ್ಟಿನಲ್ಲಿ ಬಂದು ಬಿಡಿ, ಫಸ್ಟ್ ನಂಬರಿನಲ್ಲಿ ಬಂದು ಬಿಡಿ. ಒಂದು ಫಸ್ಟ್ ಅಲ್ಲ ಫಸ್ಟ್
ಕ್ಲಾಸಿನಲ್ಲಿ ಫಸ್ಟ್ ಬಂದುಬಿಡಿ. ಆಗುತ್ತದೆಯೇ? ಯಾರು ನಾವು ಫಾಸ್ಟ್ ಹೋಗಿ ಫಸ್ಟ್ ಬರುತ್ತೇವೆ
ಎಂದು ತಿಳಿದಿದ್ದಾರೋ ಅವರು ಕೈ ಎತ್ತಿ. ಒಳ್ಳೆಯದು. ಹಿಂದಿನವರು ಬರಲು ಸಾಧ್ಯ ಆದರೆ ಕೈಯನ್ನು
ಉದ್ದವಾಗಿ ಎತ್ತಿರಿ. ಒಳ್ಳೆಯದು. ಕಡಿಮೆ ಇದ್ದಾರೆ. ಆದರೂ ಸಹ ಪೂರ್ತಿ ಪರಿವಾರ ಮತ್ತು
ಬಾಪ್ದಾದಾರವರು ತಮಗೆ ಸಹಯೋಗವನ್ನು ಕೊಟ್ಟು ಮುಂದುವರೆಸಲು ಬಯಸುತ್ತಾರೆ ಅದರಿಂದ ಯಾವ
ಸೇವಾಕೇಂದ್ರದಿಂದ ಬಂದಿದ್ದಾರೋ ಆ ಸೇವಾಕೇಂದ್ರದಲ್ಲಿ ತಮ್ಮ ವಾಯಿದೆಯನ್ನು ಪದೇ-ಪದೇ ನೆನಪು
ಮಾಡಿಕೊಳ್ಳಬೇಕು. ಆಗುತ್ತದೆಯೇ ಅಸಂಭವ ಇಲ್ಲ, ಸಂಭವ ಆಗುತ್ತದೆ ಆದರೆ ಡಬಲ್ ಅಟೆನ್ಷನ್ ಬೇಕು.
ಲಾಸ್ಟ್ನಲ್ಲಿ ಬಂದು ಫಾಸ್ಟ್ ಆಗಿ ಮುಂದೆ ಹೋಗಿ ತೋರಿಸಿದರೆ ಸೇವಾಕೇಂದ್ರದಲ್ಲಿ ತಮ್ಮ ತೀವ್ರ
ಪುರುಷಾರ್ಥದ ದಿನವನ್ನು ಆಚರಣೆ ಮಾಡುತ್ತೇವೆ, ಕಾರ್ಯಕ್ರಮವನ್ನು ಮಾಡುತ್ತೇವೆ. ಬೇಗ ತಂದೆಯ ಸಮಾನ
ಆಗಿಯೇ ತೋರಿಸುತ್ತೇವೆ ಎಂದು ಪ್ರತಿಯೊಬ್ಬರ ಹೃದಯದಲ್ಲಿ ಉಮಂಗವಂತೂ ಇದೆ. ಬಾಪ್ದಾದಾರವರು ಅಮೃತವೇಳೆ
ಯಾವಾಗ ಮಕ್ಕಳು ತಂದೆಯ ಜೊತೆ ವಾರ್ತಾಲಾಪ ಮಾಡಿದಾಗ ಖುಷಿ ಪಡುತ್ತಾರೆ. ಮತ್ತು ತಂದೆ ಪ್ರತಿಯೊಬ್ಬ
ಮಕ್ಕಳಿಗೆ, ಹಳಬರಾಗಿರಬಹುದು, ಹೊಸಬರು ಆಗಿರಬಹುದು, ಪ್ರತಿಯೊಬ್ಬರಿಗೆ ಹೃದಯದ ಆಶೀರ್ವಾದಗಳನ್ನು
ಕೊಡುತ್ತಾರೆ. ಒಂದು ಹೆಜ್ಜೆ ತಮ್ಮದದರೆ, ಸಾವಿರಾರ ಹೆಜ್ಜೆ ತಂದೆಯ ಸಹಯೋಗದ್ದಾಗಿದೆ ಏಕೆಂದರೆ ಈಗ
ಸಮಯದ ಪರಿವರ್ತನೆ ತೀವ್ರ ಗತಿಯಲ್ಲಿ ಹೋಗುತ್ತಿದೆ. ಒಳ್ಳೆಯದು.
ಸೇವೆಯ ಟರ್ನ್ ದೆಹಲಿ
ಮತ್ತು ಆಗ್ರ ಜೋನ್ದಾಗಿದೆ:-
ದೆಹಲಿಯಲ್ಲಿ ಶುರುವುನಿಂದ ಹೊಸ-ಹೊಸದಾಗಿ ಸೇವೆಯನ್ನು ಮಾಡುತ್ತಾ ಬಂದಿರುವುದನ್ನು ಬಾಪ್ದಾದಾರವರು
ಕೇಳಿದ್ದಾರೆ. ದೆಹಲಿಯವರು ಮಾಡಿದರು ಅಂದಾಗ ಈಗ ಸೇವೆಯ ಯಾವುದಾದರು ಹೊಸ ಸಂಶೋಧನೆ ಕಂಡುಹಿಡಿಯಿರಿ.
ಭಾಷಣ ನಡೆಯುತ್ತಿದೆ, ಕಾರ್ಯಕ್ರಮ ನಡೆಯುತ್ತಿದೆ ಅದೂ ಸಹ ಒಳ್ಳೆಯದು ಏಕೆಂದರೆ ಅದರಿಂದ ವೃದ್ಧಿ
ಆಗುತ್ತದೆ ಮತ್ತು ಸಂಬಂಧದಲ್ಲಿ ಬರುತ್ತಾರೆ. ಯಾವುದು ಈಗ ನಡೆಯುತ್ತಿದೆ ಅದೂ ಸಹ ಒಳ್ಳೆಯದೇ ಆದರೆ
ಈ ಕಾರ್ಯಕ್ರಮಗಳು ಬಹಳ ಸಮಯ ನಡೆದಿದೆ. ಈಗ ಯಾವುದಾದರು ಹೊಸ ಮಾತನ್ನು ತೆಗೆಯಿರಿ ಯಾವುದು ಸೇವೆ
ಮಾಡುವವರಿಗೆ ಅದರಿಂದ ಹೊಸ ಉಮಂಗ-ಉತ್ಸಾಹ ಬರಬೇಕು. ಮಾಡುತ್ತೀರಲ್ಲವೇ. ಒಳ್ಳೆಯದು. ಎಲ್ಲರೂ
ಉತ್ಸಾಹದಲ್ಲಿ ಬಂದು ಎಲ್ಲರನ್ನು ಅದರಲ್ಲಿ ಬಿಜಿ ಮಾಡಿ. ದೊಡ್ಡ ಕಾರ್ಯಕ್ರಮ ಯಾವುದು ಆಗುತ್ತದೆ
ಅದರಲ್ಲಿ ಭಾಷಣ ಮಾಡುವವರು ಬಿಜಿಯಾಗಿರುತ್ತಾರೆ ಆದರೆ ಬೇರೆಯವರು ಕೇವಲ ಜೊತೆ ಕೊಡುತ್ತಾರೆ. ಅದೂ
ಸಹ ಖಂಡಿತ ಆಗಬೇಕು ಆದರೆ ಯಾವುದಾದರೂ ಅಂತಹ ಕಾರ್ಯವನ್ನು ಮಾಡಿ ಯಾವುದರಿಂದ ಪ್ರತಿಯೊಬ್ಬ
ಕ್ವಾಲಿಟಿಯವರು ಸ್ವಯಂ ಮಾಡಿ ಬಿಜಿಯಾಗಿರಲಿ ಏಕೆಂದರೆ ದೆಹಲಿಯೇ ರಾಜಧಾನಿ ಆಗಬೇಕು ಅಂದಾಗ
ದೆಹಲಿಯವರು ಯಾವುದಾದರೂ ಇನ್ವೆನ್ಷನ್ ಮಾಡಬೇಕು. ಸರಿಯೇ? ಸರಿಯೇ? ಎಲ್ಲರೂ ಮಾಡುತ್ತೀರಾ? ಕೈ ಎತ್ತಿ.
ಒಳ್ಳೆಯದು. ಯಾರಾದರೂ ಮಾಡಬಹುದು. ಹೊಸಬರೂ ಸಹ ಮಾಡಬಹುದು. ಒಂದುವೇಳೆ ಬೇರೆ ಯಾರಿಗಾದರೂ ಯಾವುದೇ
ಸಂಕಲ್ಪ ಬಂದರೆ ಅದೂ ಸಹ ಇಲ್ಲಿ ಹೆಡ್ ಆಫೀಸ್ನಲ್ಲಿ, ಮಧುಬನ ಆಫೀಸ್ಗೆ ಬರೆಯಬಹುದು, ಎಲ್ಲರಿಗೆ
ಅವಕಾಶವಿದೆ. ಒಳ್ಳೆಯದು. ದೆಹಲಿಯವರು ಪುರುಷಾರ್ಥದಲ್ಲೂ ಸಹ ನಂಬರ್ವನ್ ತೆಗೆದುಕೊಳ್ಳಲಿ.
ಬಾಪ್ದಾದಾರವರು ಬಹಳ ಸಮಯದಿಂದ ಯಾವುದೇ ಸೇವಾಕೇಂದ್ರ, ದೇಶದ್ದಾಗಿರಲಿ, ವಿದೇಶದ್ದಾಗಿರಲಿ ಅದರ
ಸಂಬಂಧದ ಸೇವಾಕೇಂದ್ರ 6 ತಿಂಗಳು ನಿರ್ವಿಘ್ನ, ಯಾವುದೇ ವಿಘ್ನ ಬರದೆ ನಿರ್ವಿಘ್ನ ಆಗಿರಬೇಕೆಂದು
ಹೇಳಿದ್ದಾರೆ. ಒಂದುವೇಳೆ ನಂಬರ್ವನ್ ಆದರೆ ನಿರ್ವಿಘ್ನ ಭವದ ದಿನವನ್ನು ಆಚರಣೆ ಮಾಡುತ್ತೇವೆ. ಈಗ 6
ತಿಂಗಳು ಎಲ್ಲಿದೆ, 6 ತಿಂಗಳ ಅಭ್ಯಾಸ ಇದ್ದರೆ ಮುಂದೆನೂ ಸಹ ಅಭ್ಯಾಸ ಆಗಿ ಬಿಡುತ್ತದೆ, ಆದರೆ
ಬಹುಮಾನವನ್ನು ಪಡೆದುಕೊಳ್ಳಲಿ 6 ತಿಂಗಳ ಸಮಯವನ್ನು ಕೊಡುತ್ತೇವೆ. ದೆಹಲಿಯವರು ಯಾವ ನಂಬರ್
ತೆಗೆದುಕೊಳ್ಳುತ್ತೀರಿ? ಮೊದಲನೇ ನಂಬರ್ ತೆಗೆದುಕೊಳ್ಳುತ್ತೀರಾ? ಬಾಪ್ದಾದಾರವರಿಗೆ ಖುಷಿ ಇದೆ, ಇಡೀ
ಪರಿವಾರಕ್ಕೂ ಖುಷಿ ಇದೆ. ಸಂತುಷ್ಟತೆಯ ನುಡಿ-ನಡೆ ಇರುವವರಾಗಿದ್ದೀರಿ. ಸೇವೆಯಲ್ಲಿ ಆಗಿರಲಿ, ಯಾವ
ನಿಯಮಗಳಿದೆ ಆ ನಿಯಮಗಳಲ್ಲಿ ಆಗಿರಲಿ. ಬಾಪ್ದಾದಾರವರು ಹೇಳಿದ್ದಾರೆ ಆದರೆ ಇದುವರೆಗೆ ಹೆಸರು ಬರದೆ
ಇರುವುದನ್ನು ನೋಡಿದ್ದಾರೆ. ಜೋನ್ ಇಲ್ಲವೆಂದರೆ ಯಾವುದೆಲ್ಲಾ ದೊಡ್ಡ ಸೇವಾಕೇಂದ್ರ ಇದೆ ಅದರ
ಸಂಬಂಧದ ಸೇವಾಕೇಂದ್ರ ಇಷ್ಟಾದರೂ ಮಾಡಿದರೆ ಬಾಪ್ದಾದಾರವರು ನೋಡುತ್ತೇವೆ. ಈಗ ಬೇಗ-ಬೇಗ ಹೆಜ್ಜೆ
ಮುಂದುವರೆಸಬೇಕು. ಏಕೆ? ಅಚಾನಕ್ ಏನಾದರೂ ಆಗಬಹುದು. ದಿನಾಂಕವನ್ನು ಹೇಳುವುದಿಲ್ಲ. ಒಳ್ಳೆಯದು.
ಆಗ್ರ ಸಬ್ ಜೋನ್:-
ಆಗ್ರಾದವರು ಯಾವುದಾದರು ಅಂತಹ ಸೇವೆ ಅಥವಾ ಕಾರ್ಯವನ್ನು ಮಾಡಬೇಕು ಯಾವುದರಿಂದ ಹೇಗೆ ಸರ್ಕಾರದ
ದೃಷ್ಟಿಯಲ್ಲಿ ಆಗ್ರ ಪ್ರಸಿದ್ಧ ಆಗಿದೆ ಅದೇ ರೀತಿ ಆಗ್ರಾದವರು ಯಾವುದಾದರೂ ಈ ರೀತಿ ಸೇವೆಯನ್ನು
ಹುಡಿಕಿ ಯಾವುದು ಆಲ್ಮೈಟಿ ಸರ್ಕಾರದಲ್ಲೂ ಪ್ರಸಿದ್ಧ ಆಗಲಿ. ಹೇಗೆ ಆಗ್ರದಲ್ಲಿ ತಾಜ್ ಇದೆ ಆ ರೀತಿ
ಏನಾದರೂ ಮಾಡಿ. ಆಸೆ ಇದೆಯೇ? ಆಸೆ ಇದೆ ಅದಕ್ಕಾಗಿ ಶುಭಾಶಯಗಳು. ಏನು ಮಾಡುತ್ತೀರಿ ಮತ್ತು ಎಷ್ಟು
ಸಮಯದಲ್ಲಿ ಮಾಡುತ್ತೀರಿ. (ಮೇಳ ಮಾಡುತ್ತೇವೆ, ಮೆಗಾ ಪ್ರೊಗ್ರಾಂ ಮಾಡುತ್ತೇವೆ) ಮೆಗಾ
ಕಾರ್ಯಕ್ರಮಗಳಂತೂ ಎಲ್ಲರೂ ಮಾಡುತ್ತಿದ್ದಾರೆ, ಆದರೆ ಯಾವುದಾದರೂ ಹೊಸದಾಗಿ ಕಂಡು ಹಿಡಿಯಿರಿ ಯಾವ
ಜೋನ್ ಮಾಡದೆ ಇರುವುದು. ಏಕೆಂದರೆ ಆಗ್ರ ಎಲ್ಲರೂ ನೋಡುವ ಸ್ಥಾನವಾಗಿದೆ. ಹೇಗೆ ಈಗಿನ ಸಮಯದಲ್ಲಿ
ಸರ್ಕಾರದ ತಾಜ್ ಆಗ್ರಾದಲ್ಲಿ ಇದೆಯಲ್ಲವೇ. ಒಂದುವೇಳೆ ಪ್ರಚಾರ ಆದರೆ ಅದರಲ್ಲಿ ಆಗ್ರ ಪ್ರಸಿದ್ಧ
ಆಗಿದೆಯಲ್ಲವೇ. ಈ ರೀತಿ ಯಾವುದಾದರೂ ಕಾರ್ಯವನ್ನು ಮಾಡಿ. ಯೋಚನೆ ಮಾಡಬೇಕು. ಅಮೃತವೇಳೆ
ಕುಳಿತುಕೊಂಡು ಯೋಚನೆ ಮಾಡಿದರೆ ಯಾವುದಾದರೂ ಟ್ಚಿಂಗ್ ಬಂದು ಬಿಡುತ್ತದೆ. ಸರಿಯೇ? ಟೀಚರ್ಸ್ ಕೈ
ಎತ್ತಿ. ಬಹಳ ಇದ್ದೀರಿ ಅಂದಾಗ ಕಮಾಲ್ ಮಾಡಬೇಕು. ಬಾಪ್ದಾದಾರವರು ಮಕ್ಕಳಿಗೆ ಇದನ್ನೇ ಹೇಳುತ್ತಾರೆ
- ಈಗ ಯಾವುದಾದರೂ ನವೀನತೆಯನ್ನು ಮಾಡಿ. ಯಾವುದು ನಡೆಯುತ್ತಿದೆ ಸಮಯನುಸಾರವಾಗಿ ಅದು ನವೀನತೆ ಆಗಿದೆ
ಆದರೆ ಈಗ ಇನ್ನೂ ನವೀನತೆಯನ್ನು ಕಂಡು ಹಿಡಿಯಿರಿ. ಯಾವುದಾದರೂ ಜೋನ್ ಮಾಡಲಿ ಆದರೆ ಹೊಸದಾಗಿ ಮಾಡಿ.
ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಕ್ಕಳು ಪ್ರಿಯವೂ ಆಗಿದ್ದಾರೆ ಮತ್ತು ಬಾಪ್ದಾದಾರವರಿಗೆ
ಪ್ರತಿಯೊಬ್ಬ ಮಕ್ಕಳ ವಿಶೇಷತೆ ಗೊತ್ತಿದೆ. ಪ್ರತಿಯೊಬ್ಬರ ವಿಶೇಷತೆ ಖಂಡಿತ ಇದ್ದೇ ಇರುತ್ತದೆ ಆದರೆ
ಕೆಲವರು ಕಾರ್ಯದಲ್ಲಿ ಉಪಯೋಗಿಸುತ್ತಾರೆ, ಕೆಲವರು ಬಚ್ಚಿಟ್ಟುಕೊಳ್ಳುತ್ತಾರೆ, ಆದ್ದರಿಂದ ತಂದೆ
ಹೇಳುತ್ತಾರೆ - ಪ್ರತಿಯೊಬ್ಬ ಮಕ್ಕಳು ತಂದೆಗೆ ಪ್ರಿಯವಾಗಿದ್ದಾರೆ, ಅಗಲಿ ಹೋಗಿ
ಸಿಕ್ಕಿರುವವರಾಗಿದ್ದಾರೆ ಮತ್ತು ತಂದೆ ಇದನ್ನೇ ಬಯಸುತ್ತಾರೆ ಹಾರುತ್ತಿರಿ ಮತ್ತು ಹಾರಿಸುತ್ತಿರಿ.
ಎಲ್ಲಾ ಕಡೆ ಮಕ್ಕಳು ತಂದೆ
ಹೃದಯದ ಪ್ರೀತಿಪಾತ್ರರಾಗಿದ್ದಾರೆ, ಪ್ರತಿಯೊಬ್ಬ ಮಕ್ಕಳು ನಾವು ತೀವ್ರ ಪುರುಷಾರ್ಥ ಮಾಡಿ
ತಂದೆಯನ್ನು ಪ್ರತ್ಯಕ್ಷ ಮಾಡಬೇಕೆಂದು ಇದೇ ಲಕ್ಷ್ಯವನ್ನು ಪದೇ-ಪದೇ ಸ್ಮೃತಿಯಲ್ಲಿ ತೆಗೆದುಕೊಂಡು
ಬರುತ್ತಾರೆ ಮತ್ತು ತರಬೇಕು. ಯಾವುದರಿಂದ ಎಲ್ಲರ ಹೃದಯ ನನ್ನ ಬಾಬಾ ಬಂದಿದ್ದಾರೆ ಎಂದು ಹೇಳಬೇಕು.
ಇಂತಹ ಉಮಂಗ-ಉತ್ಸಾಹದ ಸಂಕಲ್ಪ ಬಾಪ್ದಾದಾರವರ ಬಳಿ ತಲುಪುತ್ತಿದೆ. ಈ ಉಮಂಗ-ಉತ್ಸಾಹ ಮೆಜಾರಿಟಿಯವರ
ಹೃದಯದಲ್ಲಿ ಬಂದಿದೆ. ಬಾಪ್ದಾದಾರವರ ಇದೇ ಆಸೆ ಇದೆ - ಈಗ ಬೇಗ-ಬೇಗ ಎಲ್ಲರಿಗೆ ಸಂದೇಶವನ್ನು
ತಲುಪಿಸಬೇಕು. ಯಾರೂ ವಂಚಿತರಾಗಬಾರದು. ಯಾವುದಾದರೂ ಆಸ್ತಿಯನ್ನು ತೆಗೆದುಕೊಳ್ಳಲಿ. ಜೀವನ್ಮುಕ್ತಿಯ
ಆಸ್ತಿ ಇಲ್ಲವೆಂದರೂ ಪ್ರೀತಿಯಿಂದ ಮುಕ್ತಿಯ ಆಸ್ತಿಯನ್ನಂತೂ ತೆಗೆದುಕೊಳ್ಳಲಿ ಏಕೆಂದರೆ ತಂದೆ
ಎಲ್ಲರಿಗೂ ಆಸ್ತಿಯನ್ನು ಕೊಡಬೇಕು. ಎಷ್ಟು ಜನರಿಗೆ ಆಸ್ತಿಯನ್ನು ಕೊಡಿಸುತ್ತೀರೋ ಅಷ್ಟೇ ತಮ್ಮ
ರಾಜ್ಯದಲ್ಲಿ ರಾಜ್ಯಾಧಿಕಾರಿ ಆಗುವ ಆಸ್ತಿ ಸಿಗುತ್ತದೆ. ಎಲ್ಲಾ ಕಡೆಯ ಪ್ರತಿಯೊಬ್ಬ ಮಕ್ಕಳಿಗೆ
ಬಾಪ್ದಾದಾರವರ ಬಹಳ-ಬಹಳ ಪ್ರೀತಿ ಮತ್ತು ಆಶೀರ್ವಾದಗಳನ್ನು ಸ್ವೀಕಾರ ಆಗಲಿ. ಒಳ್ಳೆಯದು.
ವರದಾನ:
ತ್ಯಾಗ,
ತಪಸ್ಸಿನ ಮೂಲಕ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವರ ಕಲ್ಯಾಣಕಾರಿ ಭವ.
ಹೇಗೆ ಸ್ಥೂಲ ಅಗ್ನಿಯು
ದೂರದಿಂದಲೇ ತನ್ನ ಅನುಭವ ಮಾಡಿಸುತ್ತದೆಯೋ ಹಾಗೆಯೇ ತಮ್ಮ ತಪಸ್ಸು ಹಾಗೂ ತ್ಯಾಗದ ಹೊಳಪು ದೂರದಿಂದಲೇ
ಸರ್ವರನ್ನು ಆಕರ್ಷಿಸಲಿ. ಸೇವಾಧಾರಿ ಆಗುವುದರ ಜೊತೆ ಜೊತೆಗೆ ತ್ಯಾಗಿ, ತಪಸ್ವಿ ಮೂರ್ತಿಯಾದಾಗ,
ಸೇವೆಯ ಪ್ರತ್ಯಕ್ಷ ಫಲವು ಕಂಡು ಬರುತ್ತದೆ. ತ್ಯಾಗಿ ಎಂದರೆ ಯಾವುದೇ ಹಳೆಯ ಸಂಕಲ್ಪ ಅಥವಾ
ಸಂಸ್ಕಾರವು ಕಾಣಿಸದೇ ಇರುವುದು. ತಪಸ್ವಿ ಅರ್ಥಾತ್ ಬುದ್ಧಿಯ ಸ್ಮೃತಿ ಅಥವಾ ದೃಷ್ಟಿಯಿಂದ ಆತ್ಮಿಕ
ಸ್ವರೂಪವಲ್ಲದೇ ಮತ್ತೇನೂ ಕಾಣಿಸದೇ ಇರುವುದು. ಸಂಕಲ್ಪವೇನು ಉತ್ಪನ್ನವಾಗುತ್ತದೆಯೋ ಅದರಲ್ಲಿ
ಪ್ರತಿಯೊಂದು ಆತ್ಮನ ಕಲ್ಯಾಣವು ಸಮಾವೇಶವಾಗಿದ್ದರೆ ಹೇಳಲಾಗುತ್ತದೆ - ಸರ್ವರ ಕಲ್ಯಾಣಕಾರಿ.
ಸ್ಲೋಗನ್:
ದೇಹ-ಭಾನದಿಂದ
ದೂರವಾಗುವುದಕ್ಕಾಗಿ ಚಿತ್ರ(ದೇಹ)ವನ್ನು ನೋಡದೆ ಚೇತನ (ಸತ್ಯ ಸ್ವರೂಪ) ಹಾಗೂ ಚರಿತ್ರೆಯನ್ನು
ನೋಡಿರಿ.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ನೀವೆಲ್ಲರೂ ಮಾಸ್ಟರ್
ವಿಶ್ವ-ನಿರ್ಮಾತಾ ಆಗಿದ್ದೀರಿ. ಈ ಸ್ಮೃತಿಯಿಂದ ನಿರ್ಮಾನತೆಯ ಗುಣ ಸಹಜವಾಗಿ ಬರುತ್ತದೆ ಮತ್ತು
ಎಲ್ಲಿ ನಿರ್ಮಾನತೆಯ ಅರ್ಥಾತ್ ಸರಳತೆ ಸ್ವಭಾವಿಕ ರೂಪದಲ್ಲಿ ಇರುತ್ತಾರೆ ಅಲ್ಲಿ ಅನ್ಯ ಗುಣಗಳೂ
ಸ್ವತಃವಾಗಿ ಬಂದು ಬಿಡುತ್ತದೆ. ಸದಾ ಈ ಸ್ಮೃತಿ ಸ್ವರೂಪದಲ್ಲಿ ಸ್ಥಿತಿರಾಗಿ ನಂತರ ಪ್ರತಿ ಸಂಕಲ್ಪ
ಅಥವಾ ಕರ್ಮ ಮಾಡಿರಿ. ನಂತರ ಏನೆಲ್ಲಾ ಚಿಕ್ಕ-ಚಿಕ್ಕ ಮಾತುಗಳು ಎದುರಿಸಲು ಬರುತ್ತವೆ, ಅವು ಈ ತರಹ
ಅನುಭವವಾಗುತ್ತವೆ ಹೇಗೆ ವೃದ್ಧರ ಮುಂದೆ ಚಿಕ್ಕ-ಚಿಕ್ಕ ಮಕ್ಕಳು ಬಾಲ್ಯತನದ ಆಟವಾಡುತ್ತಾರೆ. ಅವರಿಗೆ
ಅದರ ಯಾವುದೇ ಪ್ರಭಾವವಾಗುವುದಿಲ್ಲ.