28.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇದು
ವಿಸ್ಮೃತಿಯ ಆಟವಾಗಿದೆ, ನೀವು ಪದೇ-ಪದೇ ತಂದೆಯನ್ನು ಮರೆತು ಹೋಗುತ್ತೀರಿ, ನಿಶ್ಚಯ ಬುದ್ಧಿಯವರಾಗಿ
ಆಗ ಈ ಆಟದಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ”
ಪ್ರಶ್ನೆ:
ಅಂತಿಮ ಸಮಯವನ್ನು
ನೋಡುತ್ತಾ ನೀವು ಮಕ್ಕಳ ಕರ್ತವ್ಯವೇನಾಗಿದೆ?
ಉತ್ತರ:
ನಿಮ್ಮ
ಕರ್ತವ್ಯವಾಗಿದೆ - ತಮ್ಮ ವಿದ್ಯೆಯಲ್ಲಿ ಚೆನ್ನಾಗಿ ತೊಡಗುವುದು, ಅನ್ಯ ಮಾತುಗಳಲ್ಲಿ ಹೋಗಬಾರದಾಗಿದೆ.
ತಂದೆಯು ನಿಮ್ಮನ್ನು ತಮ್ಮ ನಯನಗಳ ಮೇಲೆ ಕೂರಿಸಿಕೊಂಡು ಕೊರಳಿನ ಹಾರವನ್ನಾಗಿ ಮಾಡಿಕೊಂಡು ಜೊತೆ
ಕರೆದುಕೊಂಡು ಹೋಗುತ್ತಾರೆ ಬಾಕಿ ಎಲ್ಲರೂ ತಮ್ಮ-ತಮ್ಮ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಂಡು
ಹೋಗಲೇಬೇಕಾಗಿದೆ. ತಂದೆಯು ಎಲ್ಲರನ್ನೂ ತಮ್ಮ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ.
ಗೀತೆ:
ದೂರ
ದೇಶದಲ್ಲಿರುವವರು.................
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ವಿಶೇಷವಾಗಿ ಭಾರತ ಮತ್ತು ಇಡೀ
ಪ್ರಪಂಚದಲ್ಲಿರುವವರೆಲ್ಲರೂ ವಿಶ್ವ ಶಾಂತಿಯನ್ನು ಬಯಸುತ್ತಾರೆ. ಈಗ ಇದನ್ನು ತಿಳಿದುಕೊಳ್ಳಬೇಕು -
ಅವಶ್ಯವಾಗಿ ವಿಶ್ವದ ಮಾಲೀಕನೇ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತಾರೆ. ವಿಶ್ವದಲ್ಲಿ
ಶಾಂತಿಯನ್ನು ಸ್ಥಾಪಿಸಿ ಎಂದು ಪರಮಪಿತ ಪರಮಾತ್ಮನನ್ನೇ ಕರೆಯಬೇಕು ಆದರೆ ಯಾರನ್ನು ಕರೆಯಬೇಕೆಂಬುದೂ
ಸಹ ಪಾಪ ಅವರಿಗೆ ಗೊತ್ತಿಲ್ಲ. ಇಡೀ ವಿಶ್ವದ ಮಾತಲ್ಲವೆ. ಇಡೀ ವಿಶ್ವದಲ್ಲಿ ಶಾಂತಿ ಬೇಕೆಂದು
ಹೇಳುತ್ತಾರೆ ಆದರೆ ಶಾಂತಿಧಾಮವೇ ಬೇರೆಯಾಗಿದೆ ಎಲ್ಲಿ ತಂದೆ ಮತ್ತು ತಾವಾತ್ಮಗಳಿರುತ್ತೀರಿ. ಇದನ್ನೂ
ಸಹ ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ಈಗ ಈ ಪ್ರಪಂಚದಲ್ಲಂತೂ ಅನೇಕ ಮನುಷ್ಯರು, ಅನೇಕ ಧರ್ಮಗಳಿವೆ.
ಎಲ್ಲವೂ ಸೇರಿ ಒಂದು ಧರ್ಮವಾದರೆ ಶಾಂತಿ ಸ್ಥಾಪನೆಯಾಗುವುದು ಆದರೆ ಎಲ್ಲಾ ಧರ್ಮಗಳು ಸೇರಿ ಒಂದಾಗಲು
ಸಾಧ್ಯವಿಲ್ಲ. ತ್ರಿಮೂರ್ತಿಯ ಮಹಿಮೆಯೂ ಇದೆ, ಬಹಳಷ್ಟು ಮಂದಿ ಚಿತ್ರವನ್ನಿಟ್ಟುಕೊಳ್ಳುತ್ತಾರೆ.
ಬ್ರಹ್ಮಾನ ಮೂಲಕ ಸ್ಥಾಪನೆಯೆಂಬುದೂ ತಿಳಿದಿದೆ ಆದರೆ ಯಾವುದರ ಸ್ಥಾಪನೆ? ಕೇವಲ ಶಾಂತಿ
ಸ್ಥಾಪನೆಯಲ್ಲ, ಶಾಂತಿ ಮತ್ತು ಸುಖ ಎರಡರ ಸ್ಥಾಪನೆಯಾಗುತ್ತದೆ. ಈ ಭಾರತದಲ್ಲಿಯೇ 5000 ವರ್ಷಗಳ
ಮೊದಲು ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಉಳಿದೆಲ್ಲಾ ಜೀವಾತ್ಮರು ತಮ್ಮ ಮನೆಯಲ್ಲಿದ್ದರು. ಈಗ
ಒಂದು ಧರ್ಮ, ಒಂದು ರಾಜ್ಯ, ಒಂದು ಭಾಷೆಯು ಬೇಕೆಂದು ಬಯಸುತ್ತಾರೆ. ಈಗ ತಂದೆಯು ಶಾಂತಿ, ಸುಖ,
ಸಂಪತ್ತಿನ ಸ್ಥಾಪನೆ ಮಾಡುತ್ತಿದ್ದಾರೆಂಬುದು ನೀವು ಮಕ್ಕಳಿಗೆ ತಿಳಿದಿದೆ. ಅವಶ್ಯವಾಗಿ ಇಲ್ಲಿಯೇ
ಒಂದು ರಾಜ್ಯದ ಸ್ಥಾಪನೆಯಾಗುತ್ತದೆಯಲ್ಲವೆ. ಇದೇನು ಹೊಸ ಮಾತಲ್ಲ. ಅನೇಕ ಬಾರಿ ಒಂದು ರಾಜ್ಯದ
ಸ್ಥಾಪನೆಯಾಗಿದೆ ನಂತರ ಅನೇಕ ಧರ್ಮಗಳ ವೃದ್ಧಿಯಾಗುತ್ತಾ-ಆಗುತ್ತಾ ವೃಕ್ಷವು ದೊಡ್ಡದಾದಾಗ ಮತ್ತೆ
ತಂದೆಯೂ ಬರಬೇಕಾಗುತ್ತದೆ. ಆತ್ಮವೇ ಕೇಳುತ್ತದೆ, ಓದುತ್ತದೆ, ಆತ್ಮದಲ್ಲಿಯೇ ಸಂಸ್ಕಾರವಿದೆ.
ನಾವಾತ್ಮಗಳು ಭಿನ್ನ-ಭಿನ್ನ ಶರೀರಗಳನ್ನು ಧಾರಣೆ ಮಾಡುತ್ತೇವೆ. ಮಕ್ಕಳಿಗೆ ಈ ನಿಶ್ಚಯ
ಬುದ್ಧಿಯಾಗುವುದರಲ್ಲಿಯೇ ಬಹಳ ಪರಿಶ್ರಮವಾಗುತ್ತದೆ. ಬಾಬಾ, ಪದೇ-ಪದೇ ಮರೆತು ಹೋಗುತ್ತೇವೆಂದು
ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಮರೆಸುವ ಆಟವಾಗಿದೆ, ಇದರಲ್ಲಿ ನೀವು ಹೇಗೆ
ಸಿಕ್ಕಿ ಹಾಕಿಕೊಂಡಿದ್ದೀರಿ? ಮತ್ತೆ ನಮ್ಮ ಮನೆ ಅಥವಾ ರಾಜಧಾನಿಗೂ ಹೇಗೆ ಹೋಗಬೇಕೆಂಬುದು ಗೊತ್ತೇ
ಇಲ್ಲ. ಈಗ ತಂದೆಯು ತಿಳಿಸಿದ್ದಾರೆ - ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ, ಆತ್ಮವು ಎಷ್ಟು ಕಲ್ಲು
ಬುದ್ಧಿಯಾಗಿ ಬಿಡುತ್ತದೆ! ಕಲ್ಲು ಬುದ್ಧಿ ಮತ್ತು ಪಾರಸ ಬುದ್ಧಿಯ ಗಾಯನವು ಭಾರತದಲ್ಲಿಯೇ ಇದೆ.
ಕಲ್ಲು ಬುದ್ಧಿಯ ರಾಜರು ಮತ್ತು ಪಾರಸ ಬುದ್ಧಿಯನ್ನು ಹೊಂದಿದ ರಾಜರು ಇಲ್ಲಿಯೇ ಇರುತ್ತಾರೆ. ಪಾರಸ
ನಾಥನ ಮಂದಿರವೂ ಇದೆ, ನಾವಾತ್ಮಗಳು ಎಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ನೀವೀಗ
ತಿಳಿದುಕೊಂಡಿದ್ದೀರಿ, ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ. ಇದಕ್ಕೆ ಮುಳ್ಳಿನ ಕಾಡೆಂದು
ಹೇಳುತ್ತಾರೆ. ಇಡೀ ಪ್ರಪಂಚವೇ ಮುಳ್ಳಿನ ಕಾಡಾಗಿದೆ. ಹೂದೋಟಕ್ಕೆ ಬೆಂಕಿ ಬಿದ್ದಿತೆಂಬ ಮಾತನ್ನು
ಎಂದೂ ಹೇಳುವುದಿಲ್ಲ. ಯಾವಾಗಲೂ ಕಾಡಿಗೆ ಬೆಂಕಿ ಬೀಳುತ್ತದೆ. ಇದೂ ಸಹ ಕಾಡಾಗಿದೆ. ಇದಕ್ಕೆ
ಅವಶ್ಯವಾಗಿ ಬೆಂಕಿ ಬೀಳುವುದು. ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ. ವಾಸ್ತವದಲ್ಲಿ ಇಡೀ
ಪ್ರಪಂಚಕ್ಕೆ ಬಿದುರಿನ ಕಾಡೆಂದು ಹೇಳಲಾಗುವುದು. ಈಗ ನೀವು ಮಕ್ಕಳು ತಂದೆಯನ್ನು ಅರಿತುಕೊಂಡಿದ್ದೀರಿ,
ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ ತಿನ್ನುವೆನು.....
ಎಂದು ಏನೆಲ್ಲವನ್ನೂ ಹಾಡುತ್ತಿದ್ದಿರೋ ಅದೆಲ್ಲವೂ ಈಗ ನಡೆಯುತ್ತಿದೆ. ಭಗವಾನುವಾಚ - ಅವಶ್ಯವಾಗಿ
ಮಕ್ಕಳ ಪ್ರತಿಯೇ ಇರಬೇಕಲ್ಲವೆ. ನೀವು ತಿಳಿದುಕೊಂಡಿದ್ದೀರಿ - ನಮಗೆ ಭಗವಂತನೇ ಓದಿಸುತ್ತಾರೆ, ಆ
ಭಗವಂತ ಯಾರು? ನಿರಾಕಾರ ಶಿವನಿಗೇ ಭಗವಂತನೆಂದು ಹೇಳುವರು. ಭಗವಂತ ಶಿವನ ಪೂಜೆಯೂ ಸಹ ಇಲ್ಲಿಯೇ
ಆಗುತ್ತದೆ. ಸತ್ಯಯುಗದಲ್ಲಿ ಪೂಜೆಯಿರುವುದಿಲ್ಲ. ನೆನಪೂ ಸಹ ಮಾಡುವುದಿಲ್ಲ. ಭಕ್ತರಿಗೆ ಸತ್ಯಯುಗೀ
ರಾಜಧಾನಿಯ ಫಲವು ಸಿಗುತ್ತದೆ. ನಾವು ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡಿದ್ದೇವೆ ಆದ್ದರಿಂದ ನಾವೇ
ಮೊಟ್ಟ ಮೊದಲು ತಂದೆಯ ಬಳಿ ಬಂದಿದ್ದೇವೆ. ಮತ್ತೆ ನಾವೇ ರಾಜಧಾನಿಯಲ್ಲಿ ಬರುತ್ತೇವೆಂದು ನೀವು
ತಿಳಿದುಕೊಂಡಿದ್ದೀರಿ ಅಂದಮೇಲೆ ಮಕ್ಕಳು ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಪೂರ್ಣ
ಪುರುಷಾರ್ಥ ಮಾಡಬೇಕಾಗಿದೆ. ನಾವೀಗ ಬಹು ಬೇಗನೆ ಹೊಸ ಮನೆಗೆ ಹೋಗಬೇಕೆಂದು ಮಕ್ಕಳಿಗೆ
ಮನಸ್ಸಾಗುತ್ತದೆ. ಆರಂಭದಲ್ಲಿಯೇ ಹೊಸ ಮನೆಯಿರುವುದು ನಂತರ ಹಳೆಯದಾಗುತ್ತಾ ಹೋಗುತ್ತದೆ, ಮನೆಯಲ್ಲಿ
ಮಕ್ಕಳ ವೃದ್ಧಿಯಾಗುತ್ತಾ ಹೋಗುತ್ತದೆ. ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೆಲ್ಲರೂ ಹಳೆಯ ಮನೆಯಲ್ಲಿ
ಬರುತ್ತಾರಲ್ಲವೆ. ಇದು ನಮ್ಮ ತಾತನ ಮನೆಯಾಗಿದೆ, ಮುತ್ತಾತನ ಮನೆಯಾಗಿದೆ ಎಂದು ಹೇಳುತ್ತಾರೆ.
ಕೊನೆಯಲ್ಲಿ ಬರುವವರೂ ಅನೇಕರಿರುತ್ತಾರಲ್ಲವೆ. ಎಷ್ಟು ತೀವ್ರ ಪುರುಷಾರ್ಥ ಮಾಡುತ್ತೀರೋ ಅಷ್ಟು
ಮೊದಲಿಗೆ ಹೊಸ ಮನೆಯಲ್ಲಿ ಬರುತ್ತೀರಿ. ಪುರುಷಾರ್ಥದ ಯುಕ್ತಿಯನ್ನು ತಂದೆಯು ಬಹಳ ಸಹಜವಾಗಿ ತಿಳಿಸಿ
ಕೊಡುತ್ತಾರೆ. ಭಕ್ತಿಯಲ್ಲಿಯೂ ಪುರುಷಾರ್ಥ ಮಾಡುತ್ತಾರಲ್ಲವೆ. ಬಹಳ ಭಕ್ತಿ ಮಾಡುವವರ ಹೆಸರು
ಪ್ರಸಿದ್ಧವಾಗುತ್ತದೆ. ಕೆಲವರು ಭಕ್ತರ ಸ್ಟಾಂಪನ್ನು ಮಾಡಿಸುತ್ತಾರೆ. ಜ್ಞಾನದ ಮಾಲೆಯಂತೂ ಯಾರಿಗೂ
ತಿಳಿದಿಲ್ಲ. ಮೊದಲು ಜ್ಞಾನ ನಂತರ ಭಕ್ತಿಯಾಗಿದೆ. ಇದು ನೀವು ಮಕ್ಕಳ ಬುದ್ಧಿಯಲ್ಲಿದೆ. ಅರ್ಧ ಸಮಯ
ಜ್ಞಾನ, ಸತ್ಯ-ತ್ರೇತಾಯುಗವಿರುತ್ತದೆ. ನೀವು ಮಕ್ಕಳೀಗ ಜ್ಞಾನ ಪೂರ್ಣರಾಗುತ್ತಾ ಹೋಗುತ್ತೀರಿ.
ಶಿಕ್ಷಕರು ಯಾವಾಗಲೂ ಜ್ಞಾನ ಪೂರ್ಣರಾಗಿರುತ್ತಾರೆ. ವಿದ್ಯಾರ್ಥಿಗಳಲ್ಲಿ ನಂಬರ್ವಾರ್ ಅಂಕಗಳನ್ನು
ತೆಗೆದುಕೊಳ್ಳುತ್ತಾರೆ. ಇವರು ಬೇಹದ್ದಿನ ಶಿಕ್ಷಕನಾಗಿದ್ದಾರೆ, ನೀವು ಬೇಹದ್ದಿನ
ವಿದ್ಯಾರ್ಥಿಗಳಾಗಿದ್ದೀರಿ. ವಿದ್ಯಾರ್ಥಿಗಳಂತೂ ನಂಬರ್ವಾರ್ ಆಗಿಯೇ ತೇರ್ಗಡೆಯಾಗುತ್ತಾರೆ ಹೇಗೆ
ಕಲ್ಪದ ಮೊದಲೂ ಆಗಿದ್ದರು. ತಂದೆಯು ತಿಳಿಸುತ್ತಾರೆ - ನೀವೇ 84 ಜನ್ಮಗಳನ್ನು ಪಡೆದಿದ್ದೀರಿ, 84
ಜನ್ಮಗಳಲ್ಲಿ 84 ಮಂದಿ ಶಿಕ್ಷಕರಿರುತ್ತಾರೆ. ಪುನರ್ಜನ್ಮವನ್ನು ಅವಶ್ಯವಾಗಿ
ತೆಗೆದುಕೊಳ್ಳಲೇಬೇಕಾಗಿದೆ. ಮೊದಲಿಗೆ ಸತೋಪ್ರಧಾನ ಪ್ರಪಂಚವಿರುತ್ತದೆ ನಂತರ ಹಳೆಯ ತಮೋಪ್ರಧಾನ
ಪ್ರಪಂಚವಾಗುತ್ತದೆ. ಮನುಷ್ಯರೂ ಸಹ ತಮೋಪ್ರಧಾನರಾಗುತ್ತಾರಲ್ಲವೆ. ವೃಕ್ಷವೂ ಸಹ ಮೊದಲು
ಸತೋಪ್ರಧಾನವಾಗಿರುತ್ತದೆ, ಹೊಸ ಎಲೆಗಳು ಬಹಳ ಸುಂದರವಾಗಿರುತ್ತವೆ. ಇದಂತೂ ಬೇಹದ್ದಿನ ವೃಕ್ಷವಾಗಿದೆ,
ಅನೇಕ ಧರ್ಮಗಳಿವೆ. ನಿಮ್ಮ ಬುದ್ಧಿಯು ಈಗ ಬೇಹದ್ದಿನ ಕಡೆ ಹೋಗುವುದು. ಇದು ಎಷ್ಟು ದೊಡ್ಡ
ವೃಕ್ಷವಾಗಿದೆ! ಮೊಟ್ಟ ಮೊದಲಿಗೆ ಆದಿ ಸನಾತನ ದೇವಿ-ದೇವತಾ ಧರ್ಮವೇ ಇರುತ್ತದೆ ನಂತರ ವಿವಿಧ
ಧರ್ಮಗಳು ಬರುತ್ತವೆ. ನೀವೇ ವಿವಿಧ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಅದು ಅವಿನಾಶಿಯಾಗಿದೆ,
ನಿಮಗೆ ತಿಳಿದಿದೆ - ಕಲ್ಪ-ಕಲ್ಪವೂ 84 ಜನ್ಮಗಳ ಚಕ್ರವನ್ನು ಸುತ್ತುತ್ತಿರುತ್ತೇವೆ. 84 ಜನ್ಮಗಳ
ಚಕ್ರದಲ್ಲಿ ನಾವೇ ಬರುತ್ತೇವೆ. ಯಾವುದೇ ಮನುಷ್ಯಾತ್ಮನು 84 ಲಕ್ಷ ಜನ್ಮಗಳನ್ನು
ತೆಗೆದುಕೊಳ್ಳುವುದಿಲ್ಲ. ಹಾಗೆ ತೆಗೆದುಕೊಳ್ಳುವಂತಹ ಪ್ರಾಣಿ, ಪಕ್ಷಿಗಳು ಬಹಳಷ್ಟಿವೆ. ಅವುಗಳ
ಜನ್ಮಗಳನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಮನುಷ್ಯಾತ್ಮರು 84 ಜನ್ಮಗಳನ್ನು ಪಡೆದಿದ್ದಾರೆ. ಹೀಗೆ
ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಸುಸ್ತಾಗಿ ಬಿಟ್ಟಿದ್ದಾರೆ, ದುಃಖಿಯಾಗಿದ್ದಾರೆ.
ಏಣಿಯನ್ನಿಳಿಯುತ್ತಾ ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ತಂದೆಯು ಮತ್ತೆ
ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು
ತಮೋಪ್ರಧಾನ ಶರೀರ, ತಮೋಪ್ರಧಾನ ಪ್ರಪಂಚದಲ್ಲಿ ಬರುತ್ತೇನೆ. ಇಡೀ ವಿಶ್ವದಲ್ಲಿ ಶಾಂತಿ ಹೇಗೆ
ಸ್ಥಾಪನೆಯಾಗಲು ಸಾಧ್ಯ! ಎಂದು ಮನುಷ್ಯರು ಹೇಳುತ್ತಾರೆ ಆದರೆ ವಿಶ್ವದಲ್ಲಿ ಶಾಂತಿಯು ಯಾವಾಗ
ಇತ್ತೆಂದು ತಿಳಿದುಕೊಳ್ಳುವುದಿಲ್ಲ. ನಿಮ್ಮ ಮನೆಯಲ್ಲಿ ಚಿತ್ರಗಳನ್ನಿಟ್ಟಿದ್ದೀರಲ್ಲವೆ. ಇವರ
ರಾಜ್ಯವಿದ್ದಾಗ ಇಡೀ ವಿಶ್ವದಲ್ಲಿ ಶಾಂತಿಯಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಹೊಸ
ಪ್ರಪಂಚಕ್ಕೆ ಸ್ವರ್ಗ, ಸತ್ಯಯುಗವೆಂದು ಕರೆಯಲಾಗುತ್ತದೆ. ಈಗ ಈ ಹಳೆಯ ಪ್ರಪಂಚವು ಬದಲಾಗಲಿದೆ. ಆ
ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇಡೀ ವಿಶ್ವದಲ್ಲಿ ಇವರ ರಾಜ್ಯವಿತ್ತಲ್ಲವೆ. ಲಕ್ಷ್ಮೀ-ನಾರಾಯಣರ
ಮಂದಿರಕ್ಕೆ ಬಹಳ ಮಂದಿ ಹೋಗುತ್ತಾರೆ ಆದರೆ ಇವರೇ ಭಾರತದ ಮಾಲೀಕರಾಗಿದ್ದರು, ಇವರ ರಾಜ್ಯದಲ್ಲಿ
ಅವಶ್ಯವಾಗಿ ಸುಖ-ಶಾಂತಿಯಿತ್ತೆಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ಇದು 5000 ವರ್ಷಗಳ ಮಾತಾಗಿದೆ,
ಆ ಸಮಯದಲ್ಲಿ ಇವರ ರಾಜ್ಯವಿತ್ತು. ಅರ್ಧ ಕಲ್ಪದ ನಂತರ ಹಳೆಯ ಪ್ರಪಂಚವೆಂದು ಹೇಳಲಾಗುತ್ತದೆ
ಆದ್ದರಿಂದ ವ್ಯಾಪಾರಿಗಳು ತಮ್ಮ ಅಂಗಡಿಯ ಮುಂದೆ ಸ್ವಸ್ತಿಕ ಚಿತ್ರವನ್ನು ಬಿಡಿಸುತ್ತಾರೆ. ಅದಕ್ಕೂ
ಅರ್ಥವಿದೆಯಲ್ಲವೆ. ಅದಕ್ಕೆ ಅವರು ಗಣೇಶನೆಂದು ಹೇಳಿ ಬಿಡುತ್ತಾರೆ ಮತ್ತು ಗಣೇಶನನ್ನು ವಿಘ್ನ
ವಿನಾಶಕ, ದೇವತೆಯೆಂದು ತಿಳಿಯುತ್ತಾರೆ. ಸ್ವಸ್ತಿಕ ಚಿತ್ರದಲ್ಲಿ ಪೂರ್ಣ ನಾಲ್ಕು ಭಾಗಗಳಿರುತ್ತವೆ.
ಇದೆಲ್ಲವೂ ಭಕ್ತಿ ಮಾರ್ಗವಾಗಿದೆ. ಈಗ ದೀಪಾವಳಿಯನ್ನಾಚರಿಸುತ್ತಾರೆ. ವಾಸ್ತವದಲ್ಲಿ ಸತ್ಯ-ಸತ್ಯ
ದೀಪಾವಳಿಯು ನೆನಪಿನ ಯಾತ್ರೆಯಾಗಿದೆ. ಇದರಿಂದಲೇ ಆತ್ಮ ಜ್ಯೋತಿಯು 21 ಜನ್ಮಗಳಿಗಾಗಿ
ಜಾಗೃತವಾಗುತ್ತದೆ, ಬಹಳ ಸಂಪಾದನೆಯಾಗುತ್ತದೆ ಅಂದಾಗ ನೀವು ಮಕ್ಕಳು ಬಹಳ ಖುಷಿಯಾಗಿರಬೇಕು. ಈಗ
ನಿಮ್ಮದು ಹೊಸ ಪ್ರಪಂಚಕ್ಕಾಗಿ ಹೊಸ ಖಾತೆಯು ಆರಂಭವಾಗುತ್ತದೆ. 21 ಜನ್ಮಗಳಿಗಾಗಿ ಈಗ ಖಾತೆಯನ್ನು
ಜಮಾ ಮಾಡಿಕೊಳ್ಳಬೇಕಾಗುತ್ತದೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು
ತಿಳಿದು ಕೇಳುತ್ತಿದ್ದೀರಾ? ಆತ್ಮನೆಂದು ತಿಳಿದು ಕೇಳಿದಾಗಲೇ ಖುಷಿಯಿರುವುದು. ತಂದೆಯು ನಮಗೆ
ಓದಿಸುತ್ತಾರೆ, ಭಗವಾನುವಾಚವೂ ಇದೆಯಲ್ಲವೆ. ಭಗವಂತನು ಒಬ್ಬರೇ ಆಗಿರುವರು ಅಂದಮೇಲೆ ಅವರು ಬಂದು
ಶರೀರದ ಆಧಾರವನ್ನು ತೆಗೆದುಕೊಂಡಾಗಲೇ ಭಗವಾನುವಾಚವೆಂದು ಹೇಳಲಾಗುವುದು. ಇದು ಯಾರಿಗೂ ತಿಳಿದಿಲ್ಲ.
ಆದ್ದರಿಂದ ನಮಗೂ ಗೊತ್ತಿಲ್ಲ, ಗೊತ್ತಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಅವರು ಪರಮಪಿತ
ಪರಮಾತ್ಮನಾಗಿದ್ದಾರೆ ಎಂಬುದನ್ನೂ ಹೇಳುತ್ತಾರೆ ಆದರೂ ನಮಗೆ ಗೊತ್ತಿಲ್ಲವೆಂದು ಹೇಳಿ ಬಿಡುತ್ತಾರೆ.
ಶಿವಬಾಬಾ ಎಂದು ಹೇಳುತ್ತಾರೆ, ಬ್ರಹ್ಮಾನಿಗೂ ತಂದೆಯೆಂದು ಹೇಳುತ್ತಾರೆ ಆದರೆ ವಿಷ್ಣುವಿಗೆಂದೂ
ತಂದೆಯೆಂದು ಹೇಳುವುದಿಲ್ಲ. ಪ್ರಜಾಪಿತನು ತಂದೆಯಾದರಲ್ಲವೆ. ನೀವು
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಪ್ರಜಾಪಿತ ಎಂಬ ಹೆಸರು ಇಲ್ಲದೇ ಹೋದರೆ ಇದು
ಅರ್ಥವಾಗುವುದಿಲ್ಲ. ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ಇರುವರೆಂದರೆ ಅವಶ್ಯವಾಗಿ
ಪ್ರಜಾಪಿತನೂ ಇರುವರು ಆದ್ದರಿಂದ ಪ್ರಜಾಪಿತ ಎಂಬ ಶಬ್ಧವನ್ನು ಅವಶ್ಯವಾಗಿ ಬರೆಯಿರಿ ಆಗ ಪ್ರಜಾಪಿತನು
ನಮಗೂ ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ, ಹೊಸ ಸೃಷ್ಟಿಯು ಅವಶ್ಯವಾಗಿ
ಪ್ರಜಾಪಿತನ ಮೂಲಕವೇ ರಚಿಸಲ್ಪಡುತ್ತದೆ. ನಾವಾತ್ಮಗಳು ಸಹೋದರ-ಸಹೋದರರಾಗಿದ್ದೇವೆ ನಂತರ ಶರೀರ ಧಾರಣೆ
ಮಾಡಿ ಸಹೋದರ-ಸಹೋದರಿಯರಾಗಿ ಬಿಡುತ್ತೇವೆ. ತಂದೆಯ ಮಕ್ಕಳಂತೂ ಅವಿನಾಶಿಯಾಗಿದ್ದೀರಿ, ನಂತರ
ಸಾಕಾರದಲ್ಲಿ ಸಹೋದರ-ಸಹೋದರಿಯಾಗುತ್ತೀರಿ ನಂತರ ಪ್ರಜಾಪಿತ ಬ್ರಹ್ಮಾನ ಹೆಸರಿದೆ ಆದರೆ ಪ್ರಜಾಪಿತ
ಬ್ರಹ್ಮಾನನ್ನು ನಾವು ನೆನಪು ಮಾಡುವುದಿಲ್ಲ. ಲೌಕಿಕ ಮತ್ತು ಪಾರಲೌಕಿಕ ತಂದೆಯನ್ನೇ ನೆನಪು
ಮಾಡುತ್ತಾರೆ ಪ್ರಜಾಪಿತ ಬ್ರಹ್ಮಾನನ್ನು ಯಾರೂ ನೆನಪು ಮಾಡುವುದಿಲ್ಲ. ದುಃಖದಲ್ಲಿ ತಂದೆಯ ಸ್ಮರಣೆ
ಮಾಡುತ್ತಾರೆ, ಬ್ರಹ್ಮಾನನ್ನಲ್ಲ. ಹೇ ಭಗವಂತ ಎಂದು ಹೇಳುತ್ತಾರೆಯೇ ಹೊರತು ಹೇ ಬ್ರಹ್ಮಾ ಎಂದು
ಹೇಳುವುದಿಲ್ಲ. ಸುಖದಲ್ಲಿ ಯಾರನ್ನೂ ನೆನಪು ಮಾಡುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ಇದೂ
ಸಹ ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ - ಈ ಸಮಯದಲ್ಲಿ ಮೂವರು ತಂದೆಯರಿದ್ದಾರೆ,
ಭಕ್ತಿಮಾರ್ಗದಲ್ಲಿ ಲೌಕಿಕ ಮತ್ತು ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ
ಕೇವಲ ಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಸಂಗಮಯುಗದಲ್ಲಿ ನೀವು ಮೂವರನ್ನು ನೆನಪು
ಮಾಡುತ್ತೀರಿ. ಲೌಕಿಕ ತಂದೆಯೂ ಇದ್ದಾರೆ ಆದರೆ ಅವರು ಹದ್ದಿನ ತಂದೆಯಾಗಿದ್ದಾರೆ, ಅವರಿಂದ ಹದ್ದಿನ
ಆಸ್ತಿಯು ಸಿಗುತ್ತದೆಯೆಂದು ತಿಳಿಯುತ್ತದೆ. ಈಗ ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ ಅವರಿಂದ
ಬೇಹದ್ದಿನ ಆಸ್ತಿಯು ಸಿಗುತ್ತದೆ. ಇದು ತಿಳಿದುಕೊಳ್ಳುವ ಮಾತಾಗಿದೆ. ಬೇಹದ್ದಿನ ತಂದೆಯು ಈಗ ನಾವು
ಮಕ್ಕಳಿಗೆ ಬೇಹದ್ದಿನ ಸುಖವನ್ನು ಕೊಡಲು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಅವರಿಗೆ ನಾವು
ಮಕ್ಕಳಾದರೆ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೇವೆ. ಇದು ಬ್ರಹ್ಮಾ ತಂದೆಯ ಮೂಲಕ ತಾತನ ಆಸ್ತಿಯು
ಸಿಗುತ್ತದೆ. ನಿಮಗೆ ನಾನು ಆಸ್ತಿಯನ್ನು ಕೊಡುತ್ತೇನೆ, ಓದಿಸುತ್ತೇನೆ, ಜ್ಞಾನವು ನನ್ನ ಬಳಿ ಇದೆ.
ಈ ಜ್ಞಾನವು ಮನುಷ್ಯರಲ್ಲಾಗಲಿ, ದೇವತೆಗಳಲ್ಲಾಗಲಿ ಇರುವುದಿಲ್ಲ, ನನ್ನಲ್ಲಿಯೇ ಇದೆ ಅದನ್ನು ನಾನು
ನೀವು ಮಕ್ಕಳಿಗೆ ತಿಳಿಸುತ್ತೇನೆ. ಇದು ಆತ್ಮಿಕ ಜ್ಞಾನವೆಂದು ತಂದೆಯು ತಿಳಿಸುತ್ತಾರೆ.
ಆತ್ಮಿಕ ತಂದೆಯಿಂದ ನಮಗೆ
ಈ ಪದವಿಯು ಸಿಗುತ್ತದೆಯೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಹೀಗೀಗೆ ವಿಚಾರ ಸಾಗರ ಮಂಥನ
ಮಾಡಬೇಕು. ಮನಜೀತೇ ಜಗಜ್ಜೀತ್ ಎಂಬ ಗಾಯನವಿದೆ. ಮನಸ್ಸಿಗೆ ಸೋಲುವುದೇ ಸೋಲು...... ವಾಸ್ತವದಲ್ಲಿ
ಮಾಯೆಯ ಮೇಲೆ ಜಯ ಗಳಿಸಬೇಕೆಂದು ಹೇಳಬೇಕು ಏಕೆಂದರೆ ಮನಸ್ಸನ್ನು ಜಯಿಸುವ ಮಾತಿಲ್ಲ. ಮನಃಶ್ಯಾಂತಿ
ಹೇಗೆ ಸಿಗುತ್ತದೆಯೆಂದು ಮನುಷ್ಯರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಮನಃಶಾಂತಿ
ಬೇಕೆಂದು ಆತ್ಮವು ಹೇಗೆ ಹೇಳುತ್ತದೆ! ಆತ್ಮವು ಶಾಂತಿಧಾಮದ ನಿವಾಸಿಯಾಗಿದೆ, ಆತ್ಮವು ಈ ಶರೀರದಲ್ಲಿ
ಬಂದಾಗ ಕಾರ್ಯ ಮಾಡತೊಡಗುತ್ತದೆ. ತಂದೆಯು ತಿಳಿಸುತ್ತಾರೆ - ನೀವೀಗ ಸ್ವಧರ್ಮದಲ್ಲಿ ಸ್ಥಿತರಾಗಿ
ತನ್ನನ್ನು ಆತ್ಮನೆಂದು ತಿಳಿಯಿರಿ. ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ಅಂದಮೇಲೆ ಶಾಂತಿಯನ್ನು
ಮತ್ತೆಲ್ಲಿ ಹುಡುಕುವುದು? ಇದರಮೇಲೆ ರಾಣಿಯ ಕಂಠಾಹಾರದ ಒಂದು ಕಥೆಯಿದೆ. ಸನ್ಯಾಸಿಗಳು ಈ
ಉದಾಹರಣೆಯನ್ನು ಕೊಡುತ್ತಾರೆ ಆದರೆ ಮತ್ತೆ ತಾವು ಕಾಡಿಗೆ ಹೋಗಿ ಶಾಂತಿಯನ್ನು ಹುಡುಕುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವಾತ್ಮಗಳ ಧರ್ಮವೇ ಶಾಂತಿಯಾಗಿದೆ. ಶಾಂತಿಧಾಮವು ನಿಮ್ಮ ಮನೆಯಾಗಿದೆ.
ಅಲ್ಲಿಂದ ನೀವು ಪಾತ್ರವನ್ನಭಿನಯಿಸಲು ಬರುತ್ತೀರಿ. ಇಲ್ಲಿ ಶರೀರದಿಂದ ಕರ್ಮ ಮಾಡುತ್ತೀರಿ.
ಶರೀರದಿಂದ ಭಿನ್ನವಾದರೆ ಮತ್ತೆ ಆತ್ಮವು ಶಾಂತವಾಗಿ ಬಿಡುತ್ತದೆ. ಆತ್ಮವು ಹೋಗಿ ಇನ್ನೊಂದು
ಶರೀರವನ್ನು ಪಡೆಯಿತು ಎಂದಮೇಲೆ ಚಿಂತೆಯೇಕೆ ಮಾಡಬೇಕು! ಆತ್ಮವು ಮತ್ತೆ ಬರುವುದಿಲ್ಲ, ಆದರೆ ಮೋಹವು
ಬಹಳ ಸತಾಯಿಸುತ್ತದೆ. ಸತ್ಯಯುಗದಲ್ಲಿ ನಿಮಗೆ ಮೋಹವು ಸತಾಯಿಸುವುದಿಲ್ಲ, ಅಲ್ಲಿ ಪಂಚ
ವಿಕಾರಗಳಿರುವುದೇ ಇಲ್ಲ, ರಾವಣ ರಾಜ್ಯವೇ ಇರುವುದಿಲ್ಲ, ರಾಮ ರಾಜ್ಯವಿರುತ್ತದೆ. ಒಂದುವೇಳೆ
ಯಾವಾಗಲೂ ರಾವಣ ರಾಜ್ಯವಿರುವುದಾದರೆ ಮನುಷ್ಯರು ಸುಸ್ತಾಗಿ ಬಿಡುವರು, ಎಂದೂ ಸುಖ ಕಾಣಲು
ಸಾಧ್ಯವಿಲ್ಲ. ನೀವೀಗ ಆಸ್ತಿಕರು ಮತ್ತು ತ್ರಿಕಾಲದರ್ಶಿಗಳಾಗಿದ್ದೀರಿ. ಮನುಷ್ಯರು ತಂದೆಯನ್ನು
ಅರಿತುಕೊಂಡಿಲ್ಲ ಆದ್ದರಿಂದ ನಾಸ್ತಿಕರೆಂದು ಹೇಳಲಾಗುತ್ತದೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಯಾವ ಶಾಸ್ತ್ರ ಇತ್ಯಾದಿಗಳೆಲ್ಲವೂ ಕಳೆದು ಹೋಯಿತೋ ಇವೆಲ್ಲವೂ
ಭಕ್ತಿಮಾರ್ಗವಾಗಿದೆ. ನೀವೀಗ ಜ್ಞಾನ ಮಾರ್ಗದಲ್ಲಿದ್ದೀರಿ. ತಂದೆಯು ನೀವು ಮಕ್ಕಳನ್ನು ಎಷ್ಟು
ಪ್ರೀತಿಯಿಂದ ನಯನಗಳಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ತಿಳಿಸುತ್ತಾರೆ - ನಾನು
ಕೊರಳಿನ ಹಾರವನ್ನಾಗಿ ಮಾಡಿಕೊಂಡು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಎಲ್ಲರೂ ಕರೆಯುತ್ತಾರೆ.
ಯಾರು ಕಾಮ ಚಿತೆಯನ್ನೇರಿ ಕಪ್ಪಾಗಿ ಬಿಟ್ಟಿದ್ದಾರೆಯೋ ಅವರನ್ನು ಜ್ಞಾನ ಚಿತೆಯ ಮೇಲೆ ಕೂರಿಸಿ
ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಸಿ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ಈಗ ನಿಮ್ಮ ಕೆಲಸವು
ಓದುವುದಾಗಿದೆ. ಅನ್ಯ ಮಾತುಗಳಲ್ಲಿ ಏಕೆ ಹೋಗಬೇಕು? ಹೇಗೆ ಸಾಯುತ್ತಾರೆ, ಏನಾಗುತ್ತದೆ..... ಈ
ಮಾತುಗಳಲ್ಲಿ ನಾವೇಕೆ ಹೋಗಬೇಕು. ಇದು ಅಂತಿಮ ಸಮಯವಾಗಿದೆ, ಎಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿ
ಹಿಂತಿರುಗಿ ಹೋಗುತ್ತಾರೆ. ಈ ಬೇಹದ್ದಿನ ನಾಟಕದ ರಹಸ್ಯವು ನೀವು ಮಕ್ಕಳ ಬುದ್ಧಿಯಲ್ಲಿದೆ
ಮತ್ತ್ಯಾರಿಗೂ ಗೊತ್ತಿಲ್ಲ. ನಾವು ತಂದೆಯ ಬಳಿ ಬೇಹದ್ದಿನ ಆಸ್ತಿಯನ್ನು ಪಡೆಯಲು ಕಲ್ಪ-ಕಲ್ಪವೂ
ಬರುತ್ತೇವೆ, ನಾವು ಜೀವಾತ್ಮರಾಗಿದ್ದೇವೆ ಎಂಬುದು ನಿಮಗೆ ತಿಳಿದಿದೆ. ತಂದೆಯೂ ಸಹ ದೇಹದಲ್ಲಿ ಬಂದು
ಪ್ರವೇಶ ಮಾಡುತ್ತಾರೆ. ತಂದೆಯು ಹೇಳುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ. ಇವರಿಗೂ
(ಬ್ರಹ್ಮಾ) ಸಹ ತಿಳಿಸುತ್ತೇನೆ - ನೀವು ತಮ್ಮ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲ. ಮತ್ತ್ಯಾರೂ ಸಹ
ಮಕ್ಕಳೇ, ದೇಹೀ-ಅಭಿಮಾನಿಯಾಗಿ, ತಂದೆಯನ್ನು ನೆನಪು ಮಾಡಿ - ಈ ರೀತಿ ಹೇಳಲು ಸಾಧ್ಯವಿಲ್ಲ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೆನಪಿನ
ಯಾತ್ರೆಯಲ್ಲಿದ್ದು ನಿತ್ಯವೂ ಸತ್ಯ-ಸತ್ಯ ದೀಪಾವಳಿಯನ್ನು ಆಚರಿಸಬೇಕಾಗಿದೆ. 21 ಜನ್ಮಗಳಿಗಾಗಿ
ತಮ್ಮ ಹೊಸ ಖಾತೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.
2. ಡ್ರಾಮಾದ ರಹಸ್ಯವನ್ನು
ಬುದ್ಧಿಯಲ್ಲಿಟ್ಟುಕೊಂಡು ವಿದ್ಯಾಭ್ಯಾಸದ ವಿನಃ ಮತ್ತ್ಯಾವುದೇ ಮಾತಿನಲ್ಲಿ ಹೋಗಬಾರದು. ಎಲ್ಲಾ
ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.
ವರದಾನ:
ಆತ್ಮೀಯತೆಯ
ಸ್ಥಿತಿಯ ಮುಖಾಂತರ ವ್ಯರ್ಥ ಮಾತುಗಳ ಸಂಗ್ರಹವನ್ನು ಸಮಾಪ್ತಿ ಮಾಡುವಂತಹ ಖುಶಿಯ ಖಜಾನೆಯಿಂದ
ಸಂಪನ್ನ ಭವ.
ಆತ್ಮೀಯತೆಯ ಸ್ಥಿತಿಯ
ಮುಖಾಂತರ ವ್ಯರ್ಥ ಮಾತುಗಳ ಸ್ಟಾಕ್ ಅನ್ನು ಸಮಾಪ್ತಿ ಮಾಡಿ, ಇಲ್ಲದೇ ಹೋದರೆ ಒಬ್ಬರಿನ್ನೊಬ್ಬರ
ಅವಗುಣಗಳನ್ನು ವರ್ಣನೆ ಮಾಡುತ್ತಾ ಖಾಯಿಲೆಯ ಕ್ರಿಮಿಗಳು ವಾಯುಮಂಡಲದಲ್ಲಿ ಹರಡುತ್ತಿರುತ್ತದೆ,
ಇದರಿಂದ ವಾತಾವರಣ ಶಕ್ತಿಶಾಲಿಯಾಗುವುದಿಲ್ಲ. ನಿಮ್ಮ ಬಳಿ ಅನೇಕ ಭಾವನೆಗಳಿಂದ ಅನೇಕ ಆತ್ಮಗಳು
ಬರುತ್ತವೆ ಆದರೆ ನಿಮ್ಮ ಕಡೆಯಿಂದ ಶುಭ ಭಾವನೆಯ ಮಾತುಗಳನ್ನೇ ತೆಗೆದುಕೊಂಡು ಹೋಗಲಿ. ಇದು ಯಾವಾಗ
ಆಗುವುದೆಂದರೆ ಯಾವಾಗ ತಮ್ಮ ಬಳಿ ಖುಶಿಯ ಮಾತುಗಳ ಸ್ಟಾಕ್ ಜಮಾ ಆಗುವುದು. ಒಂದು ವೇಳೆ ಹೃದಯದಲ್ಲಿ
ಯಾರ ಪ್ರತಿಯಾದರೂ ಯಾವುದೆ ವ್ಯರ್ಥ ಮಾತುಗಳಿದ್ದಲ್ಲಿ ಎಲ್ಲಿ ಮಾತುಗಳಿರುತ್ತೆ ಅಲ್ಲಿ ತಂದೆ
ಇರುವುದಿಲ್ಲ, ಪಾಪ ಇರುವುದು.
ಸ್ಲೋಗನ್:
ಸ್ಮತಿಯ ಸ್ವಿಚ್
ಆನ್ ಆದಲ್ಲಿ ಮೂಡ್ ಆಫ್ ಆಗಲು ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಯಾರು ಎಷ್ಟು
ವ್ಯಸ್ತವಾಗಿದ್ದಾರೆ, ಅಷ್ಟೇ ಅವರು ಮಧ್ಯ ಮಧ್ಯದಲ್ಲಿ ಈ ಅಭ್ಯಾಸವನ್ನು ಮಾಡುವುದು ಅವಶ್ಯಕವಾಗಿದೆ,
ನಂತರ ಸೇವೆಯಲ್ಲಿ ಕೆಲವೊಮ್ಮೆ ದಣಿದು ಹೋಗುತ್ತೀರಿ, ಕೆಲವು ಬಾರಿ ಪರಸ್ಪರ ಏರುಪೇರು ಆಗುತ್ತದೆ ಅದು
ಆಗುವುದಿಲ್ಲ. ಒಂದು ಕ್ಷಣದಲ್ಲಿ ಭಿನ್ನ ಆಗುವ ಅಭ್ಯಾಸ ಇರುವುದು ಎಂದರೆ ಯಾವುದೇ ಮಾತು ಬಂದಿತು,
ಒಂದು ಸೆಕೆಂಡಿನಲ್ಲಿ ತಮ್ಮ ಅಭ್ಯಾಸದಿಂದ ಈ ಮಾತುಗಳಿಂದ ದೂರ ಆಗಿ ಹೋಗುವಿರಿ. ಸಂಕಲ್ಪ ಮಾಡಿದಿರಿ
ಹಾಗೂ ಆಗಿ ಬಿಟ್ಟಿರಿ. ಯುದ್ಧ ಮಾಡುವ ಅವಶ್ಯಕತೆ ಇರುವುದಿಲ್ಲ.