29.03.26    Avyakt Bapdada     Kannada Murli    25.10.2009     Om Shanti     Madhuban


“ಸರ್ವ ಖಜಾನೆಯಿಂದ ಸಂಪನ್ನ ತಮ್ಮ ಚೆಹರೆ ಅಥವಾ ಚಲನೆಯಿಂದ ಅಲೌಕಿಕತೆಯ ಸಾಕ್ಷಾತ್ಕಾರವನ್ನು ಮಾಡಿಸಿ”


ಈ ದಿನ ಸರ್ವ ಖಜಾನೆಗಳ ದಾತ ತನ್ನ ಖಜಾನೆಗೆ ಮಾಲೀಕನಾಗಿರುವ ಮಕ್ಕಳನ್ನು ನೋಡುತ್ತಿದ್ದೇವೆ. ಪ್ರತಿಯೊಬ್ಬ ಮಗು ಸರ್ವ ಖಜಾನೆಯಿಂದ ಸಂಪನ್ನರಾಗಿದ್ದಾರೆ ಏಕೆಂದರೆ ತಂದೆಯು ಎಲ್ಲಾ ಮಕ್ಕಳಿಗೆ ಒಂದೇ ರೀತಿ ಒಂದೇ ಸಮಯದಲ್ಲಿ ಎಲ್ಲಾ ಖಜಾನೆಗಳನ್ನು ನೀಡಿದ್ದೇವೆ ಅಂದಾಗ ಬಾಪ್ದಾದಾ ತನ್ನ ಬಾಲಕರೇ ಮಾಲೀಕರಾಗಿರುವ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ಮಕ್ಕಳು ಕರೆದಿರಿ ಅಂದಾಗ ತಂದೆ ಮಕ್ಕಳ ಸ್ನೇಹದಲ್ಲಿ ತಲುಪಿದೆವು. ಖಜಾನೆಯಂತೂ ಬಹಳಷ್ಟು ಇದೆ. ಎಲ್ಲದಕ್ಕಿಂತ ಮೊದಲನೇ ಖಜಾನೆಯಾಗಿದೆ ಜ್ಞಾನಧನ, ಜ್ಞಾನ ಸಂಪನ್ನ ಮಾಲೀಕರಾಗಿ ಬಿಟ್ಟಿದ್ದೀರಿ. ಮಹಾದಾನಿಯಾಗಿ ಅನ್ಯರಿಗೂ ಸಹ ನೀಡುತ್ತಿರುತ್ತೀರಿ. ಯಾವ ಜ್ಞಾನದ ಖಜಾನೆಯಿಂದ ಯಾವುದೇ ಭಿನ್ನ-ಭಿನ್ನ ಬಂಧನದಲ್ಲಿ ಸಿಲುಕಿರುವ ಆತ್ಮಗಳು ಇರಬಹುದು, ಆ ಎಲ್ಲಾ ಬಂಧನಗಳಿಂದ ಮುಕ್ತರಾಗಿ ಬಿಟ್ಟಿರಿ. ಬಂಧನ ಯುಕ್ತರಿಂದ ಬಂಧನ ಮುಕ್ತರಾದಿರಿ. ಜೊತೆಯಲ್ಲಿ ಯೋಗ ಅರ್ಥಾತ್ ನೆನಪಿನ ಖಜಾನೆ ಇದರಿಂದ ಅನೇಕ ಪ್ರಕಾರದ ಶಕ್ತಿಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ ಹಾಗೆಯೇ ಧಾರಣೆಯ ಮೂಲಕವು ಸರ್ವ ಗುಣಗಳ ಅನುಭೂತಿ ಅರ್ಥಾತ್ ಖಜಾನೆ ಸಿಕ್ಕಿತು. ಜೊತೆಯಲ್ಲಿ ಧಾರಣೆಯ ಶಕ್ತಿಯಿಂದ ಎಲ್ಲರ ಸ್ನೇಹದ ಶಕ್ತಿ ಸರ್ವರಿಗೂ ಪ್ರಿಯರು ಮತ್ತು ಅಲಿಪ್ತರಾಗುವಂತಹ ಶಕ್ತಿಯ ಖಜಾನೆಯನ್ನು ಪ್ರಾಪ್ತಿ ಮಾಡಿಕೊಂಡಿರಿ. ಸರ್ವರ ಸ್ನೇಹದ ಖಜಾನೆಯನ್ನು ಅನುಭವ ಮಾಡಿದಿರಿ. ಜೊತೆಯಲ್ಲಿ ಎಲ್ಲಾ ಬ್ರಾಹ್ಮಣ ಸಂಬಂಧದಿಂದ ಅಪಾರ ಖುಷಿಯ ಖಜಾನೆಯನ್ನು ಅನುಭವ ಮಾಡಿದಿರಿ. ಆದರೆ ಸರ್ವ ಖಜಾನೆಗಳ ಜೊತೆಗೆ ಯಾವುದು ಸಂಗಮಯುಗದ ವಿಶೇಷ ಖಜಾನೆ ಸಮಯದ ಖಜಾನೆಯಾಗಿದೆ. ಯಾವ ಆತ್ಮನಿಗೆ ಸಮಯದ ಖಜಾನೆಯ ಮಹತ್ವವಿದೆ ಅವರು ಸದಾ ಅನೇಕ ಪ್ರಾಪ್ತಿಗಳ ಮಾಲೀಕರಾಗುತ್ತಾರೆ ಏಕೆಂದರೆ ಸಂಗಮಯುಗದ ಸಮಯ ಬಹಳ ಚಿಕ್ಕದು ಆದರೆ ಸಮಯಕ್ಕಿಂತ ಪ್ರಾಪ್ತಿಗಳು ಹೆಚ್ಚಾಗಿದೆ. ಎಲ್ಲದಕ್ಕಿಂತ ಹೆಚ್ಚು ಸಂಗಮಯುಗದ ಶ್ರೇಷ್ಠಾತಿ ಶ್ರೇಷ್ಠ ಪ್ರಾಪ್ತಿ ಎಂದರೆ ಸ್ವಯಂ ಭಗವಂತ ತಂದೆಯ ರೂಪದಲ್ಲಿ, ಶಿಕ್ಷಕನ ರೂಪದಲ್ಲಿ, ಸದ್ಗುರುವಿನ ರೂಪದಲ್ಲಿ ಪ್ರಾಪ್ತಿಯಾಗುತ್ತಾರೆ. ಸಂಗಮಯುಗದಲ್ಲಿ ಚಿಕ್ಕದಾದ ಜನ್ಮದಲ್ಲಿ 21 ಜನ್ಮಗಳ ಪ್ರಾಪ್ತಿ ಯಾವುದರಲ್ಲಿ ತನು-ಮನ-ಧನ-ಜನ ಸರ್ವ ಪ್ರಾಪ್ತಿಗಳಿದೆ ಮತ್ತು ಗ್ಯಾರೆಂಟಿಯಾಗಿದೆ. 21 ಜನ್ಮಗಳು ಪೂರ್ಣ ಅರ್ಧ ಅಲ್ಲ, ಮುಕ್ಕಾಲಲ್ಲ ಆದರೆ ಸಂಪೂರ್ಣ 21 ಜನ್ಮಗಳ ಗ್ಯಾರೆಂಟಿ ಇದೆ. ಅಂದಾಗ ಎಲ್ಲದಕ್ಕಿಂತ ಹೆಚ್ಚು ಮಹತ್ವಪೂರ್ಣವಾಗಿರುವುದು ಸಂಗಮಯುಗದ ಒಂದೊಂದು ಸೆಕೆಂಡ್ ಅನೇಕ ವರ್ಷಗಳಿಗೆ ಸಮಾನವಾಗಿದೆ. ಅಂದಾಗ ಹೇಳಿ, ಎಲ್ಲಾ ಖಜಾನೆಗಳಿಂದ ಸಂಪನ್ನರಾಗಿದ್ದೀರಲ್ಲವೇ? ಸಂಪನ್ನರಲ್ಲವೇ? ಆದ್ದರಿಂದ ಬಾಪ್ದಾದಾ ಸದಾ ಸಮಯದ ಸ್ಮೃತಿಯನ್ನು ತರಿಸುತ್ತಿದ್ದೇವೆ. ಕೆಲವು ಮಕ್ಕಳು 1-2 ನಿಮಿಷಗಳು ಬೇರೆ ಏನಾದರೂ ಯೋಚಿಸಿದರೆ ಕೇವಲ 2 ನಿಮಿಷಗಳಷ್ಟೇಯಲ್ಲವೇ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಸಮಯದ ಎಷ್ಟು ಮಹತ್ವಿಕೆ ಇದೆ ಅದರ ಅನುಸಾರ 2 ನಿಮಿಷಗಳು ಅಲ್ಲ 2 ತಿಂಗಳುಗಳು ಅಲ್ಲ 2 ವರ್ಷಗಳಾಗಿದೆ. ಇಷ್ಟೊಂದು ಸಂಗಮದ ಸಮಯಕ್ಕೆ ಮಹತ್ವವಿದೆ. ಸರ್ವ ಶಕ್ತಿಗಳ, ಸರ್ವ ಗುಣಗಳ, ಪರಮಾತ್ಮನ ಪ್ರೀತಿಯ ಬ್ರಾಹ್ಮಣ ಪರಿವಾರದ ಪ್ರೀತಿಯ ಮತ್ತು ಕಲ್ಪದ ಮೊದಲಿನ ಈಶ್ವರೀಯ ಅಧಿಕಾರವಿದೆ. ಸರ್ವ ಪ್ರಾಪ್ತಿಗಳೆಲ್ಲವೂ ಈ ಚಿಕ್ಕದಾದಂತಹ ಯುಗದಲ್ಲಿ ಇದೆ ಮತ್ತೆ ಯಾವುದೇ ಯುಗದಲ್ಲಿ ಈ ಎಲ್ಲಾ ಪ್ರಾಪ್ತಿಗಳು ಇಲ್ಲ. ರಾಜ್ಯಭಾಗ್ಯವಿರುತ್ತದೆ, ನಿಮ್ಮೆಲ್ಲರ ರಾಜ್ಯವು ಇರುತ್ತದೆ, ಸುಖ-ಶಾಂತಿ ಎಲ್ಲವೂ ಇರುತ್ತದೆ ಆದರೆ ಪರಮಾತ್ಮನ ಮಿಲನದ, ಅತೀಂದ್ರಿಯ ಸುಖದ, ಸರ್ವ ಬ್ರಾಹ್ಮಣ ಪರಿವಾರದ, ಆದಿ-ಮಧ್ಯ-ಅಂತ್ಯದ, ಜ್ಞಾನ, ಅದೆಲ್ಲವೂ ಈ ಸಂಗಮದಲ್ಲೇ ಸಿಕ್ಕಿದೆ. ಪ್ರತಿ ಕಲ್ಪ ಸಿಗುತ್ತಿರುತ್ತದೆ.

ಅಂದಾಗ ಬಾಪ್ದಾದಾ ಖಜಾನೆಗಳ ಜಮಾ ಎಷ್ಟಾಗಿದೆ ಎಂದು ಪ್ರತಿಯೊಬ್ಬ ಮಗುವಿನ ಚೆಹರೆಯಿಂದ ನೋಡುತ್ತೇವೆ. ಖಜಾನೆಯಂತೂ ಸಿಕ್ಕಿದೆ ಆದರೆ ಪ್ರತಿಯೊಬ್ಬರು ಜಮಾದ ಖಾತೆಯನ್ನು ಎಷ್ಟು ಹೆಚ್ಚಿಸಿಕೊಂಡಿದ್ದಾರೆ, ಅದು ಪ್ರತಿಯೊಬ್ಬರ ಚೆಹರೆಯಿಂದ, ಚಲನೆಯಿಂದ ಕಂಡು ಬರುತ್ತದೆ ಮತ್ತು ತಾವೆಲ್ಲರೂ ಸಹ ನಾನು ಎಷ್ಟು ಜಮಾ ಮಾಡಿಕೊಂಡಿದ್ದೇನೆ? ಎಂಬುದು ತಮ್ಮನ್ನು ತಾವು ತಿಳಿದುಕೊಂಡಿದ್ದೀರಿ. ಈಗ ಬಾಪ್ದಾದಾರವರಿಗೆ ಇದೇ ಹೃದಯದ ಆಸೆ ಇದೆ ಖಜಾನೆಯಂತೂ ಸಿಕ್ಕಿದೆ ಆದರೆ ಈಗ ಕೇವಲ ವರ್ಣನೆ ಮಾಡುವ ಸಮಯವಲ್ಲ. ಆದರೆ ತಮ್ಮ ಚೆಹರೆ ಮತ್ತು ಚಲನೆಯು ಈ ಆತ್ಮರು ವಿಶೇಷವಾಗಿದ್ದಾರೆ, ಅಲಿಪ್ತರಾಗಿದ್ದಾರೆ ಮತ್ತು ಪರಮಾತ್ಮನಿಗೆ ಪ್ರಿಯರಾಗಿದ್ದಾರೆ ಎಂಬ ಪ್ರತ್ಯಕ್ಷ ಅನುಭವವನ್ನು ಮಾಡಿಸಲಿ. ಏಕೆಂದರೆ ಮುಂದೆ ಹೋದಂತೆ ಸಮಯ ಪರಿವರ್ತನೆ ಆಗುವುದರಿಂದ ತಮ್ಮ ಸೇವೆ ಕೇವಲ ವರ್ಣನೆ ಮಾಡುವುದರಿಂದಲ್ಲ ಸಮಯ ನಾಜೂಕು ಆಗುವುದರಿಂದ ಇಷ್ಟು ಸಮಯವನ್ನು ಯಾರೂ ತೆಗೆಯಲು ಸಾಧ್ಯವಿಲ್ಲ, ಆದರೆ ತಮ್ಮ ಖಜಾನೆ ಸಂಪನ್ನ ಚೆಹರೆಯಿಂದ, ಚಲನೆಯಿಂದ ತಮ್ಮ ಅಲೌಕಿಕತೆಯು ದೂರದಿಂದಲೇ ಸಾಕ್ಷಾತ್ಕಾರವಾಗುತ್ತದೆ. ಅಂದಾಗ ಇಂತಹ ಪುರುಷಾರ್ಥವನ್ನು ಈಗ ಪ್ರತ್ಯಕ್ಷ ಮಾಡಿರಿ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ ಸಂಘಟನೆಯ ಮಧ್ಯದಲ್ಲಿ ಇದ್ದರೂ ದೂರದಿಂದ ಅವರ ಹೊಳೆಯುವಂತಹ ವ್ಯಕ್ತಿತ್ವದ ಅನುಭವ ಆಗುತ್ತಿತ್ತು. ಈಗ ವಿಶೇಷ ಡಬಲ್ವಿದೇಷಿಗಳಿಗೆ ಬಾಪ್ದಾದಾ ಡಬಲ್ ಪುರುಷಾರ್ಥಿ ಎಂದು ಹೇಳುತ್ತೇವೆ ಅಂದಾಗ ಬಾಪ್ದಾದಾ ಡಬಲ್ ವಿದೇಶಿ ಮಕ್ಕಳನ್ನು ನೋಡಿ ಸಂತೋಷ ಪಡುತ್ತಿದ್ದೇವೆ. ಪುರುಷಾರ್ಥವನ್ನು ಬಹಳ ಚೆನ್ನಾಗಿ ವೃದ್ಧಿ ಮಾಡಿಕೊಳ್ಳುತ್ತಿದ್ದೀರಿ. ಎಲ್ಲರಿಗೂ ಪಾಲನೆಯೂ ಸಹ ಬಹಳ ಚೆನ್ನಾಗಿ ಸಿಗುತ್ತಿದೆ. ನಿಮಿತ್ತರಾಗಿರುವ ಮಕ್ಕಳೊಂದಿಗೆ, ಬಾಪ್ದಾದಾರವರಿಗೆ ಎಲ್ಲರದು ಒಂದು ಮಾತು ಬಹಳ ಇಷ್ಟವಾಗುತ್ತದೆ. ಎಲ್ಲಾ ಆತ್ಮರು ಪ್ರತಿವರ್ಷ ತಮ್ಮ ಸಂಘಟನೆಯ ಮಿಲನವನ್ನು ಮಧುಬನದಲ್ಲಿ ವಿಶೇಷವಾಗಿ ಮಾಡುತ್ತೀರಿ ಏಕೆಂದರೆ ಮಧುಬನದ ವಾಯುಮಂಡಲ ರಿಫ್ರೆಷ್ಮೆಂಟ್ನಲ್ಲಿ ಬಹಳ ಸಹಯೋಗವನ್ನು ನೀಡುತ್ತದೆ. ಮತ್ತು ಒಂದೇ ಜವಾಬ್ದಾರಿ ಸ್ವ ಪರಿವರ್ತನೆ, ಮನಸಾ ಸೇವೆ, ಪರಸ್ಪರ ಅನುಭವ ಮಾಡುವ ಒಳ್ಳೆಯ ಅವಕಾಶ ಸಿಗುತ್ತದೆ. ಬಾಪ್ದಾದಾ ಈ ಮಾತಿನಲ್ಲಿ ಶುಭಾಶಯಗಳನ್ನು ನೀಡುತ್ತೇವೆ.

ಈಗ ಏನಾದರೂ ಅದ್ಭುತವನ್ನು ತಮ್ಮ-ತಮ್ಮ ಸ್ಥಾನದಲ್ಲಿ ಹೋಗಿ ಮಾಡಬೇಕು. ಏನಾದರೂ ಭಿನ್ನವಾದದ್ದು ಯಾವುದು ತಂದೆಗೆ ಪ್ರಿಯವಾದದ್ದಾಗಿದೆ ಅದನ್ನು ಪ್ರತ್ಯಕ್ಷದಲ್ಲಿ ಅನುಭವ ಮಾಡಿಸುವುದು ಇದರಿಂದ ಮಧುಬನದ ರಿಫ್ರೆಷ್ಮೆಂಟ್ನ ಸಹಯೋಗವನ್ನು ಅಲ್ಲೂ ಸಹ ಅನುಭವ ಮಾಡುತ್ತಿರುತ್ತೀರಿ. ಈಗ ವಿಶೇಷವಾಗಿ ಡಬಲ್ ಪುರುಷಾರ್ಥಿ ಗುಂಪಿನ ಮಿಲನವಾಗಿದೆ. ತಮ್ಮೆಲರೊಂದಿಗೆ ಭಾರತವಾಸಿ ಮಕ್ಕಳ ಪ್ರೀತಿ ಎಷ್ಟಿದೆ ಎಂದು ನೋಡಿರಿ. ಮೊದಲನೇ ಅವಕಾಶವನ್ನು ತಮಗೇ ಕೊಟ್ಟು ಬಿಟ್ಟಿದ್ದಾರೆ. ಮೊದಲನೇ ಅವಕಾಶದ ಫಲಿತಾಂಶ ಮೊದಲನೇ ನಂಬರನ್ನು ತೆಗೆದುಕೊಳ್ಳಬೇಕು. ಚೆನ್ನಾಗಿದೆ, ಬಾಪ್ದಾದಾರವರು ಈ ಮೊದಲೂ ಸಹ ತಿಳಿಸಿದ್ದೇವೆ ಡಬಲ್ ವಿದೇಶಿಗಳು ಅಥವಾ ಡಬಲ್ ಪುರುಷಾರ್ಥಿಗಳು, ತಂದೆ ಒಂದು ವಿಶೇಷ ಟೈಟಲ್ನ್ನು ಪ್ರತ್ಯಕ್ಷ ಮಾಡಿದ್ದಾರೆ. ವಿದೇಶದಲ್ಲಿ ಮೆಜಾರಿಟಿಗಳ ಕಡೆಯಿಂದ ತಂದೆಯ ಮಕ್ಕಳನ್ನು ಹುಡುಕಿ ಅವರ ಅದೃಷ್ಟದ ಭಾವಚಿತ್ರವನ್ನು ರೂಪಿಸಿದ್ದಾರೆ. ಆದ್ದರಿಂದ ಲಗನ್ನಿಂದ ನಾಲ್ಕೂ ಕಡೆ ಪರಿಶ್ರಮ ಪಡುತ್ತಿದ್ದಾರೆ. ಇದರಿಂದ ತಂದೆಯ ವಿಶ್ವ ಕಲ್ಯಾಣಕಾರಿ ಕರ್ತವ್ಯವನ್ನು ಪ್ರಸಿದ್ಧ ಮಾಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಗುವಿಗೆ ವಾಹ್! ಮಗು ವಾಹ್! ಎಂಬ ಶುಭಾಶಯವನ್ನು ನೀಡುತ್ತೇವೆ. ಈಗಲೂ ಸಹ ಭಾರತದಲ್ಲಿ ಮೂಲೆ-ಮೂಲೆಯಲ್ಲಿ ಸಂದೇಶವನ್ನು ಕೊಡುವ ಸೇವೆ ನಡೆಯುತ್ತಿರುತ್ತದೆ. ಹಾಗೆಯೇ ಅಲ್ಲೂ ಸಹ ಉಳಿದಿರುವಂತಹ ದೇಶಕ್ಕೆ ಸಂದೇಶವನ್ನು ನೀಡಬೇಕೆಂಬ ಒಲವು-ಉತ್ಸಾಹವಿದೆ ಏಕೆಂದರೆ ಸಮಯದ ಮೇಲೆ ಯಾವುದೇ ಭರವಸೆ ಇಲ್ಲ. ಬಾಪ್ದಾದಾ ಈ ಮೊದಲೂ ಸಹ ಹೇಳಿದ್ದೇವೆ ಅಚಾನಕ್ ಆಗಿ ಏನು ಬೇಕಾದರೂ ಆಗಲು ಸಾಧ್ಯತೆ ಇದೆ ಆದ್ದರಿಂದ ಸಂದೇಶವನ್ನು ಕೊಡುವಂತಹ ತಮ್ಮ ಕಾರ್ಯ ಈಗೀಗ ಇರಲಿ ಯಾವಾಗಲೋ ಅಲ್ಲ. ಕೆಲವೊಮ್ಮೆ ಎಂಬ ಶಬ್ದ ಶೋಭಿಸುವುದಿಲ್ಲ. ಈಗಲೇ ಮಾಡಬೇಕು ಎಂಬ ಸಂಕಲ್ಪವನ್ನು ಮಾಡಿರಿ. ನೋಡುತ್ತೇವೆ, ಮಾಡುತ್ತೇವೆ, ಈ ಗೆ-ಗೆ ಶಬ್ದ ಇರಬಾರದು. ಇದರಿಂದ ತಮ್ಮ ಮಮ್ಮಾರವರೂ ಸಹ ಇದೇ ಲಕ್ಷ್ಯವನ್ನು ಇಟ್ಟುಕೊಂಡರು. ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬ ಸ್ಮೃತಿ ತರಿಸಿದರು.

ಅಂದಾಗ ಡಬಲ್ ವಿದೇಶಿ ಮಕ್ಕಳು ಈಗೀಗ ಮಾಡುವವರೋ ಅಥವಾ ಯಾವಾಗಲೋ ಮಾಡುವವರೋ? ಯಾರು ಈಗಲೇ ಮಾಡಿ ತೋರಿಸುತ್ತೇವೆ ಎಂಬುವಂತಹವರು ಕೈ ಎತ್ತಿರಿ. ಮಾಡಲೇಬೇಕು, ಮಾಡಲೇಬೇಕು. ಮಾಡುತ್ತೇವೆ ಅಲ್ಲ, ಮಾಡಲೇಬೇಕು, ಮಾಡಲೇಬೇಕು. ನೆನಪಿಟ್ಟುಕೊಳ್ಳಿ - ತಮಗೆ ತಾವೇ ತಮ್ಮ ಚಾರ್ಟ್ನ್ನು ಇಟ್ಟುಕೊಳ್ಳಿ ಮತ್ತು ಬಾಪ್ದಾದಾರವರೂ ಸಹ ಮೊದಲೇ ತಿಳಿಸಿದ್ದೇವೆ - ಪ್ರತಿನಿತ್ಯ ರಾತ್ರಿಯಲ್ಲಿ ಬಾಪ್ದಾದಾರವರಿಗೆ ತಮ್ಮ ಇಡೀ ದಿನದ ಚಾರ್ಟ್ನ್ನು ತಿಳಿಸಿದ ನಂತರ ತಮ್ಮ ಬುದ್ಧಿಯನ್ನು ಖಾಲಿ ಮಾಡಿಕೊಂಡು ಮಲಗಿಕೊಳ್ಳುವುದರಿಂದ ನಿದ್ರೆಯೂ ಸಹ ಚೆನ್ನಾಗಿ ಬರುತ್ತದೆ ಮತ್ತು ಜೊತೆಯಲ್ಲಿ ಪ್ರತಿನಿತ್ಯದ ಸಮಾಚಾರವೆಲ್ಲವನ್ನು ಹೇಳುವುದರಿಂದ ಮರು ದಿನ ನಾನು ಬಾಬಾರವರಿಗೆ ಎಲ್ಲವನ್ನು ಹೇಳಿ ಬಿಟ್ಟಿದ್ದೇನೆ ಎಂದು ನೆನಪಿರುತ್ತದೆ ಆ ಸ್ಮೃತಿ ಸಹಯೋಗವನ್ನು ಕೊಡುತ್ತದೆ. ಧರ್ಮ ರಾಜ ಪುರಿಯಲ್ಲಿ ಹೋಗಬೇಕಾಗಿಲ್ಲ. ಕೊಟ್ಟು ಬಿಟ್ಟಿರಿ ಮತ್ತು ಪರಿವರ್ತನೆಯನ್ನು ಮಾಡಿಕೊಂಡಿದ್ದೇ ಆದರೆ ಧರ್ಮರಾಜ ಪುರಿಯಿಂದ ಬಚಾವ್ ಆಗಿ ಬಿಡುತ್ತೀರಿ. ಈಗ ಮುಂದಿನ ವರ್ಷ ಯಾರೂ ನೋಡಿಲ್ಲ ಆದರೆ ಲಕ್ಷ್ಯವನ್ನು ಇಟ್ಟುಕೊಳ್ಳಿ, ವರ್ಷವನ್ನು ಬಿಡಿ, ಕೊನೆ ಪಕ್ಷ ಎಷ್ಟು ಕಡಿಮೆ ಸಮಯದಲ್ಲಿ ತನ್ನನ್ನು ಚೆಹರೆ ಕಂಡು ಬರಲಿ, ಚಲನೆಯಿಂದ ಕಂಡು ಬರಲಿ ಎಂಬ ಯಾವ ಆಸೆ ತಂದೆಯದು ಇದೆಯೋ ಅದನ್ನು ಆದಷ್ಟು ಬೇಗ ಪ್ರತ್ಯಕ್ಷದಲ್ಲಿ ತಂದು ತೋರಿಸಿ. ಸಾಹಸವಿದ್ದರೆ ಕೈ ಎತ್ತಿ. ಸಾಹಸವಿದೆಯೇ? ಸಾಹಸವಿದೆಯೇ? ಒಳ್ಳೆಯದು. ಶುಭಾಶಯಗಳು. ಬಾಪ್ದಾದಾ ಪ್ರತಿಯೊಬ್ಬ ಮಗುವಿನಲ್ಲಿ ನಿಶ್ಚಯ ಮತ್ತು ಸಾಹಸ ಒಲವು-ಉತ್ಸಾಹ ಈಗಲೇ ಮೂಡುತ್ತಿದ್ದೇವೆ ಆದರೆ ಹೋಗುತ್ತಾ-ಹೋಗುತ್ತಾ ವಿಮಾನದಲ್ಲೇ ಉತ್ಸಾಹ ಸ್ವಲ್ಪವೂ ಕಡಿಮೆ ಆಗಬಾರದು. ಉತ್ಸಾಹವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು. ದೃಢ ಸಂಕಲ್ಪದ ಬೀಗದ ಕೈ ಯಾವುದನ್ನು ಬಾಪ್ದಾದಾರವರು ಕೊಟ್ಟಿದ್ದೇವೆ ಅದನ್ನು ಕಾಯಂ ಆಗಿ ಇಟ್ಟುಕೊಳ್ಳಬೇಕು. ಮಾಡಲೇಬೇಕು, ಈಗಲೇ ಯಾವಾಗಲೋ ಅಲ್ಲ. ಆ ಸಮಯ ಹೊರಟು ಹೋಯಿತು. ಆಗಲೇಬೇಕು. ಆಗುತ್ತದೆ ಅಲ್ಲ, ಆಗಲೇಬೇಕು. ಡಬಲ್ ಪುರುಷಾರ್ಥಿಗಳ ಟೈಟಲ್ ಯಾವುದನ್ನು ಬಾಪ್ದಾದಾರವರು ಕೊಟ್ಟಿದ್ದಾರೆ ಅದನ್ನು ಸದಾ ನೆನಪಿಟ್ಟುಕೊಳ್ಳಬೇಕು.

ಬಾಪ್ದಾದಾರವರು ಫಲಿತಾಂಶವನ್ನು ಕೇಳಿದೆವು. ಬಾಪ್ದಾದಾರವರು ಯಾವ ಸೇವೆಯ ಪ್ಲಾನನ್ನು ಕೊಟ್ಟಿದ್ದೇವೋ ಅದರಲ್ಲಿ ಭಾರತವೂ ಸಹ ಕಡಿಮೆ ಮಾಡಲಿಲ್ಲ ಮತ್ತು ವಿದೇಶದವರೂ ಕಡಿಮೆ ಮಾಡಲಿಲ್ಲ. ಈ ವರದಾನವನ್ನು ಮೆಜಾರಿಟಿ ಸ್ಥಾನಗಳಲ್ಲಿ ಒಲವು-ಉತ್ಸಾಹದಿಂದ ಮಾಡಿದರು ಮತ್ತು ಫಲಿತಾಂಶವೂ ಸಹ ಬೇರೆ-ಬೇರೆ ಸ್ಥಾನಗಳಿಂದ ಬರುತ್ತಿದೆ. ಅಂದಾಗ ಬಾಪ್ದಾದಾ ಭಾರತವಾಸಿ ಮಕ್ಕಳು ಇರಲಿ, ವಿದೇಶಿ ಮಕ್ಕಳು ಇರಲಿ ಪದಮ-ಪದಮಾಗುಣದಷ್ಟು ಪ್ರತ್ಯಕ್ಷದಲ್ಲಿ ತಂದಿರುವುದಕ್ಕೆ ಶುಭಾಶಯಗಳನ್ನು ನೀಡುತ್ತಿದ್ದೇವೆ.

ಈಗ ಈ ವರ್ಷದಲ್ಲಿ ವಿಶೇಷವಾಗಿ ಯಾವ ಮಾತನ್ನು ಪ್ರತ್ಯಕ್ಷದಲ್ಲಿ ಮಾಡಬೇಕಾಗಿದೆ ಅದನ್ನು ತಿಳಿಸಿದ್ದೇವೆ ಏನೆಂದರೆ ಈಗ ಚೆಹರೆಯಲ್ಲಿ ಹೊಳಪು ಕಂಡು ಬರಲಿ. ಯಾರೇ ನೋಡಲಿ ಪ್ರತ್ಯಕ್ಷತೆಗೆ ನಿಮಿತ್ತರಾಗಬೇಕು. ತಂದೆಯನ್ನು ಪ್ರತ್ಯಕ್ಷ ಮಾಡಿಸಬೇಕೆಂದರೆ ಏನು ಮಾಡಬೇಕು? ಸದಾ ಮುಗುಳ್ನಗೆ ಇರುವ ಚೆಹರೆ, ಯಾವುದೇ ಚಿಂತೆಯಲ್ಲಿ, ಯಾವುದೇ ತಬ್ಬಿಬ್ಬಾಗುವುದಲ್ಲ. ಬಾಪ್ದಾದಾರವರು ಈಗ ಎರಡು ಶಬ್ದಗಳನ್ನು ನೆನಪು ಇಟ್ಟುಕೊಳ್ಳಿ ಎಂದು ತಿಳಿಸಿದ್ದೆವು, ಮಾಯೆಗೆ ಗೆಟ್ ಔಟ್ ಎಂದು ಸೂಚನೆ ಕೊಡಿ ಮತ್ತು ತನ್ನನ್ನು ಗೆಸ್ಟ್ ಹೌಸ್ನಲ್ಲಿರುವ ಅನುಭವ ಮಾಡಿ. ಈ ಪ್ರಪಂಚ ನಿಮ್ಮದಲ್ಲ. ಗೆಸ್ಟ್ ಹೌಸ್ ಆಗಿದೆ. ಈಗ ಮನೆಗೆ ಹೋಗಬೇಕಾಗಿದೆ. ಈಗ ಮನೆಗೆ ಹೋಗಲೇಬೇಕಾಗಿದೆ. ಮನೆಯ ದೃಶ್ಯ ಮನಸ್ಸು-ಬುದ್ಧಿಯಲ್ಲಿ ಕಂಡು ಬರಲಿ. ಮನೆ ಬಂದೇ ಬಿಟ್ಟಿತು, ಈಗ ಮನೆಗೆ ಹೋಗಬೇಕು ಎಂದು ನಿಮ್ಮದು ಒಂದು ಹಾಡಿದೆ. ಈಗ ಮನೆಗೆ ಹೋಗಬೇಕಾಗಿದೆ ಎಂದು ಈ ಅಲೆ ಪ್ರತಿಯೊಬ್ಬರಿಗೆ, ಭಾರತದವರಾಗಿರಲಿ, ವಿದೇಶದವರಾಗಿರಲಿ, ಈಗ ಈ ಅನುಭವವನ್ನು ಪ್ರತ್ಯಕ್ಷದಲ್ಲಿ ಮಾಡಿ ತೋರಿಸಿ. ಬೇಹದ್ದಿನ ವೈರಾಗ್ಯ, ಗೆಸ್ಟ್ಹೌಸಿನಲ್ಲಿ ಇರಲಿ ಮನಸ್ಸಾಗುವುದಿಲ್ಲ, ಹೋಗಬೇಕು, ಹೋಗಬೇಕು ಇದೇ ನೆನಪಿರುತ್ತದೆ ಅಂದಾಗ ಬೇಹದ್ದಿನ ವೈರಾಗ್ಯ ಇದು ಯಾವುದೇ ಪ್ರಕಾರದ ಮನಸ್ಸಿನ ಸಂಕಲ್ಪವನ್ನು ಪರಸ್ಪರ ಸಂಘಟನೆಯಲ್ಲಿ ಮಾಯೆಯ ವಿಘ್ನವನ್ನು ಏಕ್ದಮ್ ಸಮಾಪ್ತಿ ಮಾಡುತ್ತದೆ. ಈ ಮಾಯೆಯ ಬಿರುಗಾಳಿ ನಿಮ್ಮ ಪಾಲಿಗೆ ಉಡುಗೊರೆಯಾಗಿ ಬಿಡುತ್ತದೆ. ಯಾವುದೆಲ್ಲಾ ಸಣ್ಣ-ಪುಟ್ಟ ಪರೀಕ್ಷೆಗಳು ಬರುತ್ತದೆ, ಇದು ಪೇಪರ್ ಎಂದು ಎನಿಸುವುದಿಲ್ಲ ಆದರೆ ಒಂದು ಅನುಭವವನ್ನು ಹೆಚ್ಚಿಸುವಂತಹ ಆಧಾರವೆನಿಸುತ್ತದೆ. ಗಿಫ್ಟ್ ಮತ್ತು ಲಿಫ್ಟ್ (ಉಡುಗೊರೆ ಮತ್ತು ಆಧಾರ). ತಿಳಿಯಿತೇ. ಈಗ ಲಕ್ಷ್ಯ ಇಟ್ಟುಕೊಳ್ಳಿ, ಬೇಹದ್ದಿನ ವೈರಾಗಿ ಮತ್ತು ಸಾಹಸ ಮತ್ತು ಒಲವು-ಉತ್ಸಾಹದ ರೆಕ್ಕೆಯಿಂದ ಹಾರುತ್ತಿರಿ ಮತ್ತು ಹಾರಿಸುತ್ತಿರಿ. ಈಗ ಹಾರುವಂತಹ ಸಮಯವಾಗಿದೆ. ರೆಕ್ಕೆಗಳನ್ನೂ ಸಹ ಸದಾ ನಿರ್ಬಲವಾಗಿಲ್ಲವೇ! ಎಂದು ಪರಿಶೀಲನೆ ಮಾಡಿಕೊಳ್ಳಿ.

ಬಾಪ್ದಾದಾ ಡಬಲ್ ವಿದೇಶದವರ ವಿಸ್ತಾರವನ್ನು ನೋಡಿ ಸಂತೋಷ ಪಡುತ್ತೇವೆ. ಈಗ ಮತ್ತೇನನ್ನು ನೋಡಲು ಬಯಸುತ್ತೇವೆ? ಪ್ರತಿಯೊಬ್ಬ ಮಗು ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಸರ್ವ ಖಜಾನೆಯಿಂದ ಸಂಪನ್ನ ಮತ್ತು ಪ್ರತಿಯೊಂದು ಶ್ರೀಮತ ಏನು ಸಿಗುತ್ತಿದೆ ಅದರಲ್ಲಿ ಸಂಪೂರ್ಣರಾಗುವುದು. ಒಪ್ಪಿಗೆಯೇ? ಒಪ್ಪಿಗೆ ಇದ್ದರೆ ಚಪ್ಪಾಳೆ ಹಾಕಿ, ಒಳ್ಳೆಯದು. ಈ ಚಪ್ಪಾಳೆಯನ್ನು ಪ್ರತಿದಿನ ನೆನಪಿಸಿಕೊಳ್ಳಬೇಕು. ತಮಗೆ ತಾವೇ ತಮ್ಮ ಮನಸ್ಸಿನಲ್ಲಿ ಚಪ್ಪಾಳೆ ಹಾಕಬೇಕು. ಹೊರಗಿನಿಂದ ಅಲ್ಲ ಹೃದಯದಲ್ಲಿ ಹೊಡೆಯಬೇಕು. ಇದು ಹೋಂವರ್ಕ್ ಆಗಿದೆ. ಒಳ್ಳೆಯದು.

90 ದೇಶದಿಂದ 2300 ಸಹೋದರ-ಸಹೋದರಿಯರು ಬಂದಿದ್ದಾರೆ: (5 ಖಂಡಗಳ ಸಹೋದರ-ಸಹೋದರಿಯರನ್ನು ಬೇರೆ-ಬೇರೆ ಗುಂಪಿನಲ್ಲಿ ನಿಲ್ಲಿಸಲಾಯಿತು) ಅಮೆರಿಕಾ, ಕೆನಡ ಮತ್ತು ಕೆರಿಬಿಯನ್ನ ಸಹೋದರ-ಸಹೋದರಿಯರು ಒಂದನೇ ಗ್ರೂಪ್. ಆಸ್ಟ್ರೇಲಿಯಾ, ಏಷ್ಯಾ, ನ್ಯೂಜಿಲ್ಯಾಂಡ್, ಫಿಜಿ, 3. ಯು.ಕೆ, ಯೂರೋಪ್, ಮಿಡಲ್ ಈಸ್ಟ್, 4. ಆಫ್ರಿಕಾ, ಸೌತ್ ಆಫ್ರಿಕಾ, ಮೊರೆಶಿಯಸ್, 5. ರಷ್ಯಾ, ಚಿ.ಐ.ಎಸ್, ಬಾಲ್ಟಿಕ್ ಪ್ರದೇಶದವರು.

ಎಲ್ಲಾ ಕಡೆ ಮುಂದುವರೆಯುವಂತಹ ಸಂಕಲ್ಪ ಮತ್ತು ಆತ್ಮಿಕ ವಾರ್ತಾಲಾಪವನ್ನೂ ಸಹ ಮಾಡಿದ್ದೀರಿ. ಬಾಪ್ದಾದಾರವರ ಬಳಿ ಸಮಾಚಾರ ಬರುತ್ತಿರುತ್ತದೆ. ಈಗ ಎವರ್ರೆಡಿ ಗ್ರೂಪ್ನ್ನು ತಯಾರು ಮಾಡಿರಿ, ಯಾವುದೇ ದೇಶದವರು ಎಷ್ಟೇ ಬರಲಿ ಆ ದೇಶದವರಿಗೆ ಬಾಪ್ದಾದಾ ಬಹುಮಾನವನ್ನು ಕೊಡುತ್ತೇವೆ, ಯಾವ ಬಹುಮಾನವೆಂದು ಆ ಸಮಯದಲ್ಲಿ ನೋಡಿರುವಿರಿ ಆದರೆ ಬಾಪ್ದಾದಾ ಡಬಲ್ ಪುರುಷಾರ್ಥಿ ಮಕ್ಕಳಿಗೆ ಪ್ರತಿಯೊಂದು ಸ್ಥಳದ ಗುಂಪಿಗೆ, ಯಾವುದೇ ಗ್ರೂಪ್ ನಂಬರ್ವನ್ ಒಂದೇ ದೇಶದಲ್ಲಿ, ಒಂದೇ ಊರಿನಲ್ಲಿ ಎಷ್ಟೇ ಸೆಂಟರ್ ಇರಲಿ, ಅಮೆರಿಕಾ ಇದೆ ಎಂದು ತಿಳಿಯಿರಿ, ಅಮೆರಿಕಾಗೆ ಸಂಬಂಧಪಟ್ಟ ಯಾವುದೆಲ್ಲಾ ದೇಶಗಳಿಗೆ ಆ ಎಲ್ಲಾ ದೇಶಗಳು ಪರಸ್ಪರ ಸಲಹೆಯನ್ನು ನೀಡಿ ಸಮಾರಂಭಗಳನ್ನು ಮಾಡಿ. ಇಲ್ಲಿ ಎಲ್ಲರೂ ನಿರ್ವಿಘ್ನರಾಗಿರುತ್ತಾರೆ. ಎವರ್ರೆಡಿ ಆಗಿರುತ್ತೇವೆ, ಮಾಯಾಜೀತರಾಗಿರುತ್ತೇವೆ. ಸ್ನೇಹ ಮತ್ತು ಸೇವೆಯಲ್ಲಿ ಸಹಯೋಗಿಗಳು ಆಗಿರುತ್ತೇವೆ. ಯಾರು ನಂಬರ್ವನ್ ಆಗಿರುತ್ತೀರಿ ಅವರಿಗೆ ಬಾಪ್ದಾದಾ ಬಹುಮಾನವನ್ನು ಕೊಡುತ್ತೇವೆ. ಒಬ್ಬರಿಗಲ್ಲದಿದ್ದರೆ ಮೂವರಿಗೆ ಕೊಡುತ್ತೇವೆ. 1-2-3, ಮೂರು ನಂಬರ್ಗಳು ಇರುತ್ತವೆ. ಹಾಗೆ ನೋಡಿದರೆ ಒಬ್ಬರಿಗೆ ಕೊಡಲಾಗುತ್ತದೆ ಆದರೆ ಡಬಲ್ ಪುರುಷಾರ್ಥಿಗಳಾಗಿರುವುದರಿಂದ ಮೂವರಿಗೆ ಅವಕಾಶವನ್ನು ಕೊಡುತ್ತೇವೆ. ಒಪ್ಪಿಗೆಯೇ? ಕೈ ಅಲುಗಾಡಿಸಿ. ಒಪ್ಪಿಗೆಯೇ? ಎಷ್ಟು ಸಮಯ ಬೇಕು? ಶಿಕ್ಷಕಿಯರು ತಿಳಿಸಿ ಬಹುಮಾನ ತೆಗೆದುಕೊಳ್ಳಲಿ ಎಷ್ಟು ಸಮಯ ಬೇಕು ಎಂಬುದು ನಿಮಿತ್ತ ಶಿಕ್ಷಿಕಿಯರು ಹೇಳಿ? ಹೇಳಿ? (ಫೆಬ್ರವರಿಯವರೆಗೆ) ಎಲ್ಲಾ ದೇಶದ ಶಿಕ್ಷಿಕಿಯರು ಕೈ ಎತ್ತಿ. ಸರಿಯೇ? ತಯಾರಾಗುತ್ತೀರಲ್ಲವೇ! ಬಾಪ್ದಾದಾ ಆ ನಂತರ ಬಹುಮಾನವನ್ನು ಕೊಡುತ್ತೇವೆ. ಬಹಳ ಒಳ್ಳೆಯದು. ಇದಕ್ಕೆ ಚಪ್ಪಾಳೆಯನ್ನು ತಟ್ಟಿ. ಭಾರತದ ಅವಧಿಯೂ ಬರುತ್ತದೆ, ಈಗ ತಮ್ಮ ಅವಧಿಯಾಗಿದೆ. ಬಾಪ್ದಾದಾ ಸಂತೋಷ ಪಡುತ್ತೇವೆ. ವಾಹ್! ತೀವ್ರ ಪುರುಷಾರ್ಥಿ ಮಕ್ಕಳೇ ವಾಹ್! ಒಳ್ಳೆಯದು.

ಎಲ್ಲಾ ಕಡೆಯ ತೀವ್ರ ಪುರುಷಾರ್ಥಿ ಸಾಹಸ ಮತ್ತು ಒಲವು-ಉತ್ಸಾಹದಿಂದ ಹಾರುವಂತಹವರು, ನಡೆಯುವಂತಹವರಲ್ಲ, ಹಾರುವಂತಹವರು, ನಾಲ್ಕೂ ಕಡೆಯ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣರಾಗುವಂತಹ ಬಾಪ್ದಾದಾರವರ ಹೃದಯ ಸಿಂಹಾಸನಾಧೀಶರು, ಸದಾ ತಂದೆಯ ಕಂಬೈನ್ಡ್ ರೂಪದ ಅನುಭವ ಮತ್ತು ಸಹಯೋಗವನ್ನು ತೆಗೆದುಕೊಳ್ಳುವ, ಪ್ರತಿಯೊಬ್ಬ ತಂದೆಯ ಪ್ರಿಯ ಮಕ್ಕಳು, ಸ್ನೇಹಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ದಾದಿಯವರೊಂದಿಗೆ: ತಂದೆಯ ಜೊತೆ ತಮ್ಮೆಲ್ಲರದೂ ಸಹ ಸಹಯೋಗವಿದೆಯಲ್ಲವೇ. ತಂದೆ ಮತ್ತು ಮಕ್ಕಳ ಇಬ್ಬರ ಸಹಯೋಗದಿಂದ ಈ ಯಜ್ಞ ನಡೆದಿದೆ. ನಡೆಯುತ್ತಿರುತ್ತದೆ. ನಿಮಿತ್ತರು ತಾವೂ ಸಹ ಆಗಿದ್ದೀರಲ್ಲವೇ. ಸಾಕಾರದಲ್ಲಿ ಒಬ್ಬರು ಹೇಳಿದರು ಮತ್ತೊಬ್ಬರು ಅದನ್ನು ಮಾಡಿದರು. ಒಬ್ಬರಿಗೊಬ್ಬರ ಸಹಯೋಗಿ ಆಗಿ ಹಾರುತ್ತಿದ್ದೀರಿ. ತಂದೆ ಹಾರುತ್ತಿರುವುದನ್ನು ನೋಡಿ ಸಂತೋಷ ಪಡುತ್ತೇವೆ (ಗುಲ್ಜಾರ್ ದಾದಿಜಿಯವರುದು ಕಮಾಲ್ ಆಗಿದೆ ಎಂದು ಜಾನಕಿ ದಾದಿಯವರು ಹೇಳಿದರು) ಅವರಂತೂ ಜೊತೆಯಲ್ಲಿ ಇದ್ದಾರೆ, ಬಾಪ್ದಾದಾರವರಿಗೆ ಇದೇ ಶುಭ ಇಚ್ಛೆ ಇದೆ ತಾವೆಲ್ಲರೂ ಯಾರು ನಿಮಿತ್ತರಿದ್ದೀರಿ, ಸದಾ ಒಂದಾಗಿ ಕಂಡುಬರಬೇಕು. ಬೇರೆ-ಬೇರೆ ಅಲ್ಲ. ಒಂದೇ ಕಂಡುಬರಲಿ. ಒಬ್ಬರು ಹೇಳಿದರು ಮತ್ತೊಬ್ಬರು ಸಲಹೆ ಕೊಟ್ಟರು, ಒಂದೇ ಆಯಿತು. ಆದ್ದರಿಂದಲೇ ಯಜ್ಞ ನಡೆಯುತ್ತಿದೆ. ತಮ್ಮೆಲ್ಲರ ಏಕತೆಯಿಂದಲೇ ನಡೆಯುತ್ತಿದೆ. ಭಲೆ, ಹೊರ ನೋಟಕ್ಕೆ ಕಾಣದೆ ಇರಬಹುದು, ಹೊರಗೆ ಕಾಣದಿದ್ದರೂ ಸಂಕಲ್ಪದಲ್ಲಿ, ವಿಚಾರದಲ್ಲಿ ಒಂದಾಗಿದ್ದುಕೊಂಡು ಮುಂದುವರೆಸುವಂತಹದ್ದು ಏಕೆಂದರೆ ಈಗ ತಮ್ಮೆಲ್ಲರ ಮೇಲೆ ದೃಷ್ಟಿ ಇದೆ. ಒಳ್ಳೆಯದು.

ವರದಾನ:
ತಮ್ಮ ಶ್ರೇಷ್ಠ ವೃತ್ತಿಯ ಮೂಲಕ ಶುದ್ಧ ವಾಯುಮಂಡಲವನ್ನಾಗಿ ತಯಾರು ಮಾಡುವಂತಹ ಸದಾ ಶಕ್ತಿಶಾಲಿ ಆತ್ಮ ಭವ.

ಯಾರು ಸದಾ ತನ್ನ ಶ್ರೇಷ್ಠ ವೃತ್ತಿಯಲ್ಲಿ ಸ್ಥಿತರಾಗಿರುತ್ತಾರೆಯೋ ಅವರೆಂದಿಗೂ ವಾಯುಮಂಡಲ, ಪ್ರಕಂಪನಗಳಲ್ಲಿ ಏರುಪೇರಾಗಲು ಸಾಧ್ಯವಿಲ್ಲ. ವೃತ್ತಿಯಿಂದಲೇ ವಾಯುಮಂಡಲವಾಗುತ್ತದೆ, ಒಂದುವೇಳೆ ತಮ್ಮ ವೃತ್ತಿಯು ಶ್ರೇಷ್ಠವಾಗಿದ್ದರೆ ವಾಯುಮಂಡಲವು ಶುದ್ಧವಾಗಿ ಬಿಡುತ್ತದೆ. ಕೆಲವರು ವರ್ಣನೆ ಮಾಡುತ್ತಾರೆ - ಏನು ಮಾಡಲಿ ವಾಯುಮಂಡಲವೇ ಹಾಗಿತ್ತು, ವಾಯುಮಂಡಲದ ಕಾರಣದಿಂದ ವೃತ್ತಿ ಚಂಚಲವಾಯಿತು. ಹಾಗಾದರೆ ಅಂತಹ ಸಮಯದಲ್ಲಿ ಶಕ್ತಿಶಾಲಿ ಆತ್ಮನಿಗೆ ಬದಲು ಬಲಹೀನ ಆತ್ಮನಾಗಿ ಬಿಡುತ್ತೀರಿ. ಆದರೆ ವ್ರತ(ಪ್ರತಿಜ್ಞೆ)ದ ಸ್ಮೃತಿಯಿಂದ ವೃತ್ತಿಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಶಕ್ತಿಶಾಲಿ ಆಗಿ ಬಿಡುತ್ತೀರಿ.

ಸ್ಲೋಗನ್:
ಗುಣಮೂರ್ತಿ ಆಗಿದ್ದು ಸರ್ವರನ್ನೂ ಗುಣಮೂರ್ತಿಯನ್ನಾಗಿ ಮಾಡುವುದೇ ಮಹಾದಾನಿ ಆಗುವುದಾಗಿದೆ.

ಅವ್ಯಕ್ತ ಸೂಚನೆ:- “ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”

ಪರಸ್ಪರದಲ್ಲಿ ಒಬ್ಬರಿನ್ನೊಬ್ಬರ ಪ್ರತಿ ಸತ್ಯ ಸ್ನೇಹವಿರಲಿ, ಸ್ನೇಹಿ ಆತ್ಮದ ಪ್ರತಿ ಎಂದೂ ಅನುಮಾನ ಬರುವುದಿಲ್ಲ. ಅವರ ಸ್ನೇಹದ ಮಾತು, ಸಧಾರಣವಾಗಿದ್ದರೂ ಫೀಲ್ ಇರುವುದಿಲ್ಲ. ಅವರ ಹಗುರ ಮಾತು ಸಹ ಈ ರೀತಿಯೆನಿಸುತ್ತದೆ ಇವರು ಅವಶ್ಯ ಯಾವುದೇ ಅರ್ಥದಿಂದ ಹೇಳಿರಬೇಕು. ಅರ್ಥ ಹೀನ, ವ್ಯರ್ಥವೆನಿಸುವುದಿಲ್ಲ. ಎಲ್ಲಿ ಸ್ನೇಹವಿರುತ್ತದೆ, ಅಲ್ಲಿ ವಿಶ್ವಾಸ ಅವಶ್ಯವಿರುತ್ತದೆ. ಬ್ರಾಹ್ಮಣ ಪರಿವಾರದಲ್ಲಿ ಒಬ್ಬರಿನ್ನೊಬ್ಬರ ಪ್ರತಿ ಸ್ನೇಹ ಅಥವಾ ವಿಶ್ವಾಸವಿಟ್ಟು, ಸಂಪೂರ್ಣ ನಿಶ್ಚಯ ಬುದ್ಧಿಯವರಾಗಿ ಆಗ ಬ್ರಹ್ಮಾ ತಂದೆಯ ಆಸೆಗಳನ್ನು ಪೂರ್ಣ ಮಾಡಲು ಸಾಧ್ಯ.