30.08.26    Avyakt Bapdada     Kannada Murli    13.04.2011     Om Shanti     Madhuban


“ಜ್ವಾಲಾಮುಖಿ ಅಗ್ನಿ ಸ್ವರೂಪ ಯೋಗದ ಶಕ್ತಿಯಿಂದ ಸಂಸ್ಕಾರಗಳ ಸಂಸ್ಕಾರ ಮಾಡಿ, ತಮ್ಮ ಚಲನೆ, ಚೆಹರೆ, ದೃಷ್ಟಿ, ವೃತ್ತಿ ಮತ್ತು ಸಂಕಲ್ಪದಿಂದ ತಂದೆಯನ್ನು ಪ್ರತ್ಯಕ್ಷ ಮಾಡಿ”


ಈ ದಿನ ಮಕ್ಕಳ ಪ್ರೀತಿಯಲ್ಲಿ ಪ್ರೀತಿಯ ಸಾಗರನನ್ನೂ ಸಹ ತಮ್ಮ ಬಳಿ ಕರೆದುಕೊಂಡು ಬಿಟ್ಟಿದ್ದೀರಿ. ಮಕ್ಕಳ ತಂದೆಯ ಜೊತೆ ಹೃದಯದ ಪ್ರೀತಿ ಚೆನ್ನಾಗಿದೆ ಮತ್ತು ಸದಾ ಈ ಪ್ರೀತಿಯ ಆಧಾರದಿಂದ ತಂದೆಯ ಸಮಾನ ಆಗಿಯೇ ಬಿಡುತ್ತೀರಿ ಎಂದು ಬಾಪ್ದಾದಾರವರಿಗೆ ಖುಷಿ ಇದೆ. ಬಾಪ್ದಾದಾರವರಂತೂ ಪ್ರೀತಿಯ ಸಬ್ಜೆಕ್ಟಿನಲ್ಲಿ ಮಕ್ಕಳನ್ನು ಮುಂದಿಟ್ಟಿದ್ದಾರೆ. ಅಂದಾಗ ಈ ದಿನ ಮಕ್ಕಳು ತಮ್ಮ ಪ್ರೀತಿಯ ದಾರದಲ್ಲಿ ಬಂಧಿಸಿ ಪ್ರೀತಿಯ ಸಾಗರನನ್ನು ಮಧುಬನದಲ್ಲಿ ವಿಶೇಷವಾಗಿ ಕರೆದುಕೊಂಡು ಬಿಟ್ಟಿದ್ದೀರಿ. ಈ ರೀತಿ ಪ್ರೀತಿ ಸದಾ ಇಮರ್ಜ್ ಆಗಿರಲಿ. ಹೃದಯರಾಮ ತಂದೆಗೂ ಸಹ ಮಕ್ಕಳ ಹೃದಯದ ಪ್ರೀತಿ ಸದಾ ತಲುಪುತ್ತಿರುತ್ತದೆ. ಆದರೆ ಖಂಡಿತ ನಂಬರ್ವಾರಾಗಿರುತ್ತೀರಿ. ಪ್ರೀತಿಯ ಚಿನ್ಹೆ ಸದಾ ಪ್ರತಿಯೊಬ್ಬರ ಹೃದಯದಲ್ಲಿ ಹೃದಯರಾಮ ಜೊತೆ ಇರಲಿ, ಯಾವುದೇ ಮಗು ಒಂಟಿ ಆಗಿರಬಾರದು, ಕಂಬೈನ್ಡ್ ಆಗಿರಬೇಕೆಂದು ತಂದೆ ಬಯಸುತ್ತಾರೆ. ಅಂದಾಗ ಚೆಕ್ ಮಾಡಿಕೊಳ್ಳಬೇಕು ಸದಾ ಕಂಬೈನ್ಡ್ ಆಗಿರುತ್ತೀರಾ? ಅಥವಾ ಕೆಲವೊಮ್ಮೆ ಒಂಟಿಯಾಗಿ ಬಿಡುತ್ತೀರಾ? ಒಂಟಿಯಾಗುವುದರಲ್ಲಿ ಮಾಯೆ ತನ್ನ ಅವಕಾಶ ತೆಗೆದುಕೊಂಡು ಬಿಡುತ್ತದೆ. ಆದ್ದರಿಂದ ಬಾಪ್ದಾದಾ ಸದಾ ಹೇಳುತ್ತಾರೆ – ಹೃದಯ ರಾಮನನ್ನು ಹೃದಯದಲ್ಲಿ ಇಟ್ಟುಕೊಳ್ಳಿ, ಇದಕ್ಕೆ ಸತ್ಯ ಮತ್ತು ಸದಾ ಪ್ರೀತಿ ಎಂದು ಹೇಳಲಾಗುತ್ತದೆ. ಅಂದಾಗ ಎಂದಾದರೂ ಒಂಟಿಯಾಗುತ್ತೀರಾ ಅಥವಾ ಸದಾ ಜೊತೆಯಲ್ಲಿರುತ್ತೀರೋ? ಪ್ರತಿಯೊಬ್ಬ ಮಗುವಿನ ಪ್ರತಿಜ್ಞೆ ಯಾವುದಾಗಿದೆ? ಮುಖ್ಯವಾಗಿ ಮಧುಬನ ನಿವಾಸಿಗಳಿಗೆ ಜೊತೆ ಇದ್ದೇವೆ, ಜೊತೆ ನಡೆಯುತ್ತೇವೆ, ಜೊತೆ ರಾಜ್ಯ ಮಾಡುತ್ತೇವೆ ಎಂದು ನಶೆ ಇದೆ. ಅದೇ ರೀತಿ ಯಾರು ವಿಶೇಷವಾಗಿ ಬಹಳ-ಬಹಳ ಮಧುರಾತಿ ಮಧುರ ನಿಮಿತ್ತ ಮಕ್ಕಳು ಕುಳಿತಿದ್ದೀರಿ, ತಮ್ಮದಂತೂ ತಂದೆಯ ಜೊತೆ ಹೃದಯದ ಪ್ರತಿಜ್ಞೆ ಇದೆ ಮತ್ತು ಮೆಜಾರಿಟಿ ಪ್ರಾಕ್ಟಿಕಲ್ ಆಗಿಯೂ ಮಾಡುತ್ತಿದ್ದಾರೆ, ಯಾರು ಸದಾ ಕಂಬೈನ್ಡ್ ರೂಪದಲ್ಲಿ ಇದ್ದಾರೆ ಆದರೆ ನಂಬರ್ವಾರಾಗಿ ಇದ್ದಾರೆ. ಪ್ರತಿಯೊಬ್ಬ ಮಗು ಮಹಾರಥಿ, ನಿಮಿತ್ತ ಮಕ್ಕಳಂತೂ ಅನ್ಯರನ್ನೂ ಸಹ ತಮ್ಮ ಚೆಹರೆಯ ಮೂಲಕ ತಂದೆಯ ಸಾಕ್ಷಾತ್ಕಾರ ಮಾಡಿಸುವವವರು, ಅವರ ಚಲನೆ ಮತ್ತು ಚೆಹರೆಯಿಂದ ತಂದೆಯ ಪ್ರಕಾಶಮಯ ಚೆಹರೆ ಮತ್ತು ಜೊತೆಯಲ್ಲಿ ತಂದೆಯ ಹಾಗೆ ಪ್ರೀತಿಯ ಮತ್ತು ನ್ಯಾರ ಚಲನೆ ಸಾಕ್ಷಾತ್ಕಾರ ಆಗುತ್ತಿರಲಿ ಎಂದು ತಂದೆ ಬಯಸುತ್ತಾರೆ.

ಬ್ರಹ್ಮಾ ತಂದೆಯನ್ನು ನೋಡಿದ್ದೀರಾ? ಬ್ರಹ್ಮಾ ತಂದೆ ಕೊನೆವರೆಗೆ ತಂದೆಯ ಶ್ರೀಮತದ ಪ್ರಮಾಣ ಪ್ರತಿಯೊಂದು ಮುರಳಿಯಲ್ಲಿ ಎಷ್ಟು ಬಾರಿ ಬಾಬಾ-ಬಾಬಾ ಎಂದು ಹೇಳಿದ್ದಾರೆ, ಲೆಕ್ಕ ಮಾಡಿ. ಪ್ರತಿಯೊಂದು ಮುರಳಿಯಲ್ಲಿ ಬಾಬಾ, ಬಾಬಾ ಎಂದು ಎಷ್ಟು ಬಾರು ಹೇಳಿದ್ದಾರೆ. ಮತ್ತು ತಂದೆಯ ಹಾಗೆ ಮುಖದಿಂದ, ಮೂರ್ತಿಯಿಂದ, ವಚನದಿಂದ, ವಿಶೇಷವಾಗಿ ನಯನಗಳು ಮತ್ತು ಮಸ್ತಕದಿಂದ ತಂದೆಯನ್ನು ಪ್ರತ್ಯಕ್ಷ ಮಾಡಿದರು. ತಾವು ಮಕ್ಕಳಂತೂ ಅನುಭವಿ ಆಗಿದ್ದೀರಿ. ಬ್ರಹ್ಮಾ ತಂದೆಯನ್ನು ನೋಡಿ ಯಾವ ಅನುಭವ ಆಗುತ್ತದೆ? ಬಾಪ್ದಾದಾರವರ ಅನುಭವ ಆಗುತ್ತದೆ. ಕೇವಲ ತಂದೆ ಎಂಬ ಶಬ್ದ ಯಾರೂ ಹೇಳುವುದಿಲ್ಲ. ಸದಾ ಪ್ರತಿಯೊಬ್ಬರ ಮುಖದಿಂದ ಬಾಪ್ದಾದಾ ಎಂದು ಒಟ್ಟಿಗೆ ಬರುತ್ತದೆ ಮತ್ತು ಅನುಭವ ಆಗುತ್ತದೆ. ಆ ರೀತಿ ತಂದೆಯನ್ನು ಅನುಕರಣೆ ಮಾಡಿ. ತಮ್ಮ ಚೆಹರೆಯಿಂದ, ಮಾತಿನಿಂದ, ಚಲನೆಯಿಂದ, ದೃಷ್ಟಿಯಿಂದ ತಂದೆಯ ನೆನಪು ಸ್ವತಃವಾಗಿ ನೋಡುವವರಿಗೆ ಅನುಭವ ಆಗಲಿ. ತಮ್ಮೆಲ್ಲರದು ಈಗ ತಂದೆ ನೋಡಿದರು - ನಾವು ನಮ್ಮ ಚೆಹರೆ ಅಥವಾ ಮಾತು ಅಥವಾ ಕರ್ಮದ ಮೂಲಕ ತಂದೆಯ ಪ್ರತ್ಯಕ್ಷ ಮಾಡೋಣ ಎಂದು ಮೆಜಾರಿಟಿಯವರದು ಸಂಕಲ್ಪವಿದೆ. ಅಂದಾಗ ಫಾಲೋ ಫಾದರ್ ಮಾಡಿ. ಹೇಗೆ ಬ್ರಹ್ಮಾ ತಂದೆಯವರು ತನ್ನ ಚಲನೆ, ಚೆಹರೆಯಿಂದ, ದೃಷ್ಟಿಯಿಂದ, ವೃತ್ತಿಯಿಂದ, ಸಂಕಲ್ಪದಿಂದ ಸದಾ ತಂದೆಯನ್ನು ಪ್ರತ್ಯಕ್ಷ ಮಾಡಿದ್ದಾರೆ. ತಮ್ಮೆಲ್ಲರಿಗಂತೂ ಅನುಭವವಿದೆಯಲ್ಲವೇ. ಒಂಟಿಯಾಗಿ ಬ್ರಹ್ಮಾ ತಂದೆಯನ್ನು ನೋಡುತ್ತಿರಲಿಲ್ಲ, ಬಾಪ್ದಾದಾರವರನ್ನೇ ನೋಡುತ್ತಿದ್ದರು. ಅದಕ್ಕೆ ಕಾರಣ ಬ್ರಹ್ಮಾತಂದೆ ಸದಾ ತನ್ನ ನಯನಗಳಲ್ಲಿ, ಮಸ್ತಕದಲ್ಲಿ ತಂದೆಯನ್ನು ಸಮಾವೇಶ ಮಾಡಿಕೊಂಡರು. ಅಂದಾಗ ವಿಶೇಷವಾಗಿ ತಮ್ಮ ನಯನಗಳು, ಮುಖ, ಚಲನೆ ಬಾಪ್ದಾದಾರವರು ಸಮಾವೇಶ ಆಗಿರುವುದು ಪ್ರತ್ಯಕ್ಷ ಮಾಡುತ್ತೀರಾ? ಪ್ರತಿಯೊಂದು ಮಾತಿನಲ್ಲಿ ಕಲಿಸುವವರ ಅನುಭವ ಆಗಬೇಕು. ಇವರು ಯಾವುದೆಲ್ಲಾ ಮಾತನಾಡುತ್ತಿದ್ದಾರೆ, ಇವರಿಗೆ ಕಲಿಸುವವರು, ಇವರಲ್ಲಿ ಶಕ್ತಿ ತುಂಬುಸುವವರು ಸರ್ವಶಕ್ತಿವಂತ ತಂದೆಯಾಗಿದ್ದಾರೆ, ಭಗವಂತ ಆಗಿದ್ದಾರೆ. ಇವರು ಭಗವಂತನ ಮಕ್ಕಳಾಗಿದ್ದಾರೆ, ಭಗವಂತನ ವಿದ್ಯಾರ್ಥಿಗಳಾಗಿದ್ದಾರೆ. ಭಗವಂತನನ್ನು ಫಾಲೋ ಮಾಡುವ ಶಿಷ್ಯರಲ್ಲ ಆದರೆ ಹೆಜ್ಜೆಯಲ್ಲಿ ಪದಮದಷ್ಟು ಸಂಪಾದನೆ ಮಾಡಿಕೊಳ್ಳುವವರಾಗಿದ್ದೇವೆ. ಈಗ ಸಮಯವೂ ಸಹ ತಮ್ಮ ಸಹಯೋಗಿ ಆಗಲು ತಯಾರಾಗಿದೆ. ಪರಿಸ್ಥಿಗಳು ಬದಲಾವಣೆ ಆಗುತ್ತಿದೆ. ಪರಿಸ್ಥಿತಿಗಳು ಬಯಸಿಲಿಲ್ಲವೆಂದರೂ ಭಗವಂತನ ನೆನಪು ತರಿಸುತ್ತದೆ. ಒಂದು ಸಮಯ ಮತ್ತು ಇನ್ನೊಂದು ತಾವು ನಿಮಿತ್ತ ಆಗಿರುವ ಎರಡು ಗ್ರೂಪಿನ ವಿಶೇಷತೆಯಾಗಿದೆ, ಒಂದು ವಿಶೇಷವಾಗಿ ನಿಮಿತ್ತರಾಗಿ ಮಾಡಿ-ಮಾಡಲ್ಪಟ್ಟಂತಹ ಗ್ರೂಪ್ ಮೀಟಿಂಗಿನಲ್ಲಿ ಬಂದಿದ್ದೀರಿ.

ಬಾಪ್ದಾದಾ ನೋಡಿದರು ಮೆಜಾರಿಟಿ ಬರುವ ಮಕ್ಕಳ ಹೃದಯದಲ್ಲಿ ನಾವು ತಂದೆಯನ್ನು ಪ್ರತ್ಯಕ್ಷ ಮಾಡಲೇಬೇಕು ಎಂದು ಉಮ್ಮಂಗ-ಉತ್ಸಾಹ ಇದೆ. ಮುಖದಿಂದ ಆಗಿರಲಿ, ಬುದ್ಧಿಯಿಂದ ಆಗಿರಲಿ, ವಾಣಿಯಿಂದ ಆಗಿರಲಿ, ಯಾವುದೇ ಆತ್ಮರು ಸಂಬಂಧ-ಸಂಪರ್ಕದಲ್ಲಿ ಇರಲಿ, ಈಗಿನ ಸಮಯದಲ್ಲಿ ತಮ್ಮ ಮನಸ್ಸಿನಲ್ಲಿ ಆತ್ಮಗಳ ಕಲ್ಯಾಣದ ಭಾವನೆಯಿಂದ ತಮ್ಮ ಸಂಬಂಧದಲ್ಲಿ ಬರುತ್ತಿದ್ದಾರೆ ಮತ್ತು ಬರಲು ಬಯಸುತ್ತಾರೆ. ಮತ್ತೆ ಬಾಪ್ದಾದಾ ಯಾವುದು ಮನಸಾ ಸೇವೆಯ ಕಾರ್ಯವನ್ನು ಕೊಟ್ಟಿದ್ದಾರೆ ಅದರಲ್ಲೂ ನೋಡಿದರು ಯಾರು ಯೋಗಯುಕ್ತರಾಗಿ ಮನಸಾ ಸೇವೆಯ ಅಭ್ಯಾಸ ಮಾಡುತ್ತಾರೆ ಅಂದಾಗ ಈಗ ಈ ವೈಬ್ರೇಷನ್ ನಾಲ್ಕಾರು ಕಡೆ ಯಾರಿಗಾದರೂ ತಲುಪುತ್ತಿದೆ. ಎಲ್ಲಿಂದಲೋ ನಮಗೆ ಬೆಳಕಿನ ಕಿರಣಗಳು, ಸುಖ-ಶಾಂತಿಯ ಅಲೆಗಳು ಬರುತ್ತಿವೆ ಆದರೆ ಎಲ್ಲಿಂದ ಬರುತ್ತಿದೆ ಎಂದು ಸ್ಪಷ್ಟವಾಗಿಲ್ಲ. ಬರುತ್ತಿದೆ ಆದರೆ ಭಾರತದ ಬಾಪ್ದಾದಾರವರ ಮಕ್ಕಳಿಂದ ಬರುತ್ತಿದೆ ಎಂದು ಸ್ಪಷ್ಟವಾಗಿಲ್ಲ ಇಲ್ಲವೆಂದರೆ ಓಡಿ ಬರುತ್ತಿದ್ದರು. ಈಗ ಇನ್ನೂ ಶಕ್ತಿಶಾಲಿ ಕಿರಣಗಳನ್ನು ಅಂತಹ ಆತ್ಮರಿಗೆ ಕೊಡಿ ಯಾವುದರಿಂದ ಅವರಿಗೆ ಎಲ್ಲಿಂದ ಕಿರಣಗಳು ಬರುತ್ತಿದೆ ಎಂದು ಸ್ಪಷ್ಟ ಆಗಲಿ. ತಲುಪುತ್ತಿದೆ, ಶುರು ಆಗಿದೆ, ಆದರೆ ಸ್ವಲ್ಪ-ಸ್ವಲ್ಪ ಕೆಲವರ ಕಿರಣಗಳು ತಲುಪುತ್ತಿದೆ, ಈಗ ಇದನ್ನು ಇನ್ನೂ ಶಕ್ತಿಶಾಲಿಯನ್ನಾಗಿ ಮಾಡಿ. ಇದಕ್ಕಾಗಿ ಯಾವ ವಿಘ್ನ ಬರುತ್ತದೆ, ತಲುಪುವುದರಲ್ಲಿ, ಸ್ಪಷ್ಟ ಆಗುವುದರಲ್ಲಿ ಕಾರಣ ಆಗುತ್ತಿದೆ. ಯೋಗ ಮಾಡುತ್ತೀರಿ, ಅಮೃತವೇಳೆ ಕುಳಿತುಕೊಳ್ಳುತ್ತೀರಿ ಆದರೆ ಜ್ವಾಲಾಮುಖಿ ಯೋಗದ ಕೊರತೆ ಇದೆ. ಇದಕ್ಕೆ ಕಾರಣ ಒಂದು ಯಾವ ಭಕ್ತರಿಗೆ ಅಥವಾ ಆತ್ಮರಿಗೆ ತಾವು ಕಿರಣಗಳನ್ನು ಕಳುಹಿಸುತ್ತೀರಿ ಅದು ಸ್ಪಷ್ಟವಾಗಿಲ್ಲ. ಮತ್ತೆ ಇನ್ನೂ ಜ್ವಾಲಾಮುಖಿ ಅಗ್ನಿ ಸ್ವರೂಪದ ಯೋಗ ಶಕ್ತಿ ಇಲ್ಲದೆ ಇರುವ ಕಾರಣ ಅಥವಾ ಕಡಿಮೆ ಇರುವ ಕಾರಣ ಸಂಸ್ಕಾರ ಯಾವುದು ಮಧ್ಯದಲ್ಲಿ ವಿಘ್ನ ಹಾಕುತ್ತದೆ ಆ ಸಂಸ್ಕಾರವೂ ಸಹ ಸಮಾಪ್ತಿ ಆಗುವುದಿಲ್ಲ. ಸಂಸ್ಕಾರ ಪರಿವರ್ತನೆಗಾಗಿ ಪುರುಷಾರ್ಥ ಮಾಡುತ್ತೀರಿ. ಸಂಸ್ಕಾರ ಸಾಯುತ್ತದೆ ಆದರೆ ಸುಡುವುದಿಲ್ಲ. ಹೇಗೆ ರಾವಣನನ್ನು ಕೇವಲ ಸಾಯುಸುವುದಿಲ್ಲ, ಸಾಯಿಸಿದ ನಂತರ ಸುಟ್ಟು ಹಾಕುತ್ತಾರೆ ಏಕೆಂದರೆ ಸಾಯಿಸಿದ ನಂತರ ಶರೀರವಂತೂ ಉಳಿದುಕೊಳ್ಳುತ್ತದೆಯಲ್ಲವೇ. ಅದೇ ರೀತಿ ತಾವು ಅಮೃತವೇಳೆ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ ಆದರೆ ಅಗ್ನಿ ರೂಪದ ಜ್ವಾಲೆಯ ರೂಪದ ಯೋಗದ ಕೊರತೆ ಇದೆ. ಮಿಲನ ಮಾಡುತ್ತೀರಿ, ಆತ್ಮಿಕ ವಾರ್ತಾಲಾಪವನ್ನು ಮಾಡುತ್ತೀರಿ, ತಮ್ಮ ಜೀವನದ ಮಾತುಗಳನ್ನೂ ಮಾತನಾಡುತ್ತೀರಿ, ನಿರಂತರವಾಗಿ ಯೋಗ ಅಗ್ನಿರೂಪ ಆಗಿರಲಿ. ಸಂಸ್ಕಾರಗಳನ್ನು ಖಂಡಿತ ಸಾಯಿಸುತ್ತೀರಿ ಆದರೆ ಅದು ಸಾಯುತ್ತದೆ ಮತ್ತೆ ಮಧ್ಯದಲ್ಲಿ ಏಳುತ್ತದೆ. ಸುಟ್ಟು ಹಾಕಿದರೆ ಹೆಸರು-ರೂಪ ಸಮಾಪ್ತಿ ಆಗಿ ಬಿಡುತ್ತದೆ. ಈಗ ಎಲ್ಲಾ ಮಕಕ್ಳು ಆತ್ಮಿಕ ವಾರ್ತಾಲಾಪದಲ್ಲೂ ಹೇಳುತ್ತಾರೆ - ಎಷ್ಟು ಬಯಸುತ್ತೇವೋ ಅಷ್ಟು ಇಲ್ಲ.

ಅಂದಾಗ ಈ ದಿನ ಬಾಪ್ದಾದಾ ಸೂಚನೆ ಕೊಡುತ್ತಿದ್ದಾರೆ - ಏಕೆಂದರೆ ವಿಶೇಷ ಮಹಾವೀರ ಮಕ್ಕಳು ಮೀಟಿಂಗಿನಲ್ಲಿ ಬಂದಿದ್ದಾರೆ. ಮತ್ತು ಮಧುಬನ ನಿವಾಸಿ ಅರ್ಥಾತ್ ಮಧುಬನದಲ್ಲಿ ಇದ್ದಾರೇನು ಮಧುಬನ ಅರ್ಥಾತ್ ಬಾಬಾ, ಮಧುಬನ ಎಂದು ಹೇಳುವುದರಿಂದ ಯಾರ ನೆನಪು ಬರುತ್ತದೆ? ಮಧುಬನದ ಬಾಬಾರವರ ನೆನಪು ಬರುತ್ತದೆ. ಅಂದಾಗ ಮಧುಬನದವರು ವಿಶೇಷವಾಗಿ ಅಟೆನ್ಷನ್ ಕೊಡಬೇಕು - ಮಧುಬನ ಎಂದು ಹೇಳುವುದರಿಂದ ಮಧುಬನದ ಬಾಬಾ ನೆನಪು ಬರುತ್ತಾರೆ. ಮಧುಬನದಲ್ಲಿ ಇರುವವರನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ? ಮಧುಬನದವರು ಕೈ ಎತ್ತಿ. ಬಹಳ ಇದ್ದಾರೆ, ಕೆಳಗಿನವರಾಗಲಿ, ಮೇಲಿನವರಾಗಲಿ ಆದರೆ ಇಂದಿನ ಸಭೆಯಲ್ಲಿ ಎಲ್ಲರಿಗಿಂತ ಹೆಚ್ಚು ಮಧುಬನ ನಿವಾಸಿಯರಿದ್ದಾರೆ. ಮಧುಬನ ನಿವಾಸಿಯರು ಅವಶ್ಯವಾಗಿ ಮುಖ ಮತ್ತು ಮೂರ್ತಿಯಿಂದ ಬಾಬಾನೇ ಕಣಿಸುವ ಅದ್ಭುತವನ್ನು ತೋರಿಸುತ್ತಾರೆ ಎಂದು ಬಾಪ್ದಾದಾರವರು ಖುಷಿ ಆಗಿದ್ದಾರೆ. ಮಾತಿನಿಂದ ತಂದೆ ಕಾಣಿಸಲಿ ಏಕೆಂದರೆ ಮಧುಬನದಲ್ಲಿ ಯಜ್ಞ ಸೇವೆಯ ಫಲ ಮತ್ತು ಬಲ ಬಹಳ ಸಿಗುತ್ತದೆ. ತೆಗೆದುಕೊಳ್ಳುವವರು ತೆಗೆದುಕೊಳ್ಳಲಿ ಆದರೆ ಸದಾ ಸಿಗುತ್ತದೆ. ಸಂಸ್ಕಾರವನ್ನು ನೋಡುವುದರಲ್ಲಿ ಮತ್ತು ಸಂಸ್ಕಾರ ಮಿಲನ ಮಾಡುವುದರಲ್ಲಿ ಸದಾ ಅಟೆನ್ಷನ್ ಕೊಡುವ ಅವಶ್ಯಕತೆ ಇದೆ. ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಗುವಿನ ಜೊತೆ ವಿಶೇಷ ಪ್ರೀತಿ ಇದೆ ಏಕೆ? ಏಕೆಂದರೆ ತಂದೆ ಸ್ಥಾಪನೆ ಮಾಡಿರುವ ಯಜ್ಞ ಸೇವೆಯಲ್ಲಿ ಸ್ವಯಂನ್ನು ಸಮರ್ಪಣೆ ಮಾಡಿದ್ದಾರೆ. ಮಧುಬನ ನಿವಾಸಿಯರಿಗೆ ಒಂದು ತಮ್ಮ ಪುರುಷಾರ್ಥದ ಫಲ ಸಿಗುತ್ತಿದೆ ಮತ್ತೆ ಇನ್ನೊಂದು ಮಧುಬನದಲ್ಲಿ ಬರುವವರು ಬ್ರಾಹ್ಮಣರಾಗಲಿ, ಹೊಸ ಆತ್ಮಗಳು ಆಗಲಿ ಅವರ ಸೇವೆಯ ಯಜ್ಞ ಸೇವೆಯಾಗಿದೆ, ಸಾಧಾರಣ ಸೇವೆ ಅಲ್ಲ. ಯಜ್ಞ ಸೇವೆಯ ಹೆಚ್ಚು ಪುಣ್ಯವೂ ಸಿಗುತ್ತದೆ. ಒಂದುವೇಳೆ ಯಾವುದಾದರೂ ಮಧುಬನ ನಿವಾಸಿ ತಮ್ಮ ಬಾಪ್ದಾದಾರವರ ಶ್ರೀಮತದದನುಸಾರ ಅಮೃತವೇಳೆಯಿಂದ ರಾತ್ರಿಯವರೆಗೆ ಶ್ರೀಮತ ಪ್ರಮಾಣ ನಡೆದರೆ ಅವರಿಗೆ ಹೆಚ್ಚು ಮಧುಬನದವರು ಸ್ವಯಂ ತಿಳಿಯಲಿ, ತಿಳಿಯದೆ ಇರಲಿ, ಹುಡುಗಾಟಿಕೆ ಇದ್ದರೂ ಮಧುಬನ ಸೇವೆಯ ಪುಣ್ಯ ಖಂಡಿತ ಸಿಗುತ್ತದೆ. ಮಧುಬನನಿವಾಸಿ ಆಗುವುದು ಸಾಧಾರಣ ಮಾತು ಅಲ್ಲ. ಯಾವುದೇ ಸೇವೆ ಮಾಡುತ್ತಿರಲಿ, ಸ್ವಚ್ಛ ಮಾಡುವ ಕಾರ್ಯ ಆಗಲಿ ಆದರೆ ಅಂತಹ ಸಾಧಾರಣ ಕಾರ್ಯದ ಪುಣ್ಯ ಬಹಳ ಇದೆ ಏಕೆಂದರೆ ತಂದೆಯ ಮೂಲಕ ರಚಿಸಿರುವ ಯಜ್ಞ ಆಗಿದೆ. ಈ ಯಜ್ಞದಿಂದಲೇ ಎಲ್ಲರಿಗೆ ಪರಮಾತ್ಮನ ಪ್ರೀತಿ ಪ್ರಾಪ್ತಿ ಆಗುತ್ತದೆ, ಆದ್ದರಿಂದ ಮಧುಬನದ ವಿನಃ ತಂದೆ ಎಲ್ಲೂ ಬರುವುದಿಲ್ಲ. ಇದು ಮಧುಬನ ತಂದೆ ಬರುವ, ಮಿಲನ ಮಾಡುವ, ಮಿಲನ ಮಾಡಿಸುವ ಪಾರ್ಟ್ ಫಿಕ್ಸ್ ಆಗಿ ಬಿಟ್ಟಿದೆ. ಅಂದಾಗ ಪ್ರತಿಯೊಬ್ಬ ಮಧುಬನ ನಿವಾಸಿ ತಮ್ಮ ಪುಣ್ಯದ ಖಾತೆಯನ್ನು ತಿಳಿಯಿರಿ, ಅರಿಯಿರಿ ಮತ್ತು ಅದರ ಮಹಾನ್ ಪ್ರಾಪ್ತಿಯ ಸ್ವರೂಪರಾಗಿರಿ. ಏನೇ ಆಗಲಿ ತಮ್ಮ ಕಾರ್ಯವಾಗಿದೆ ದೊಡ್ಡವರಿಗೆ ತಲುಪಿಸುವುದು. ತಲುಪಿಸುವುದು ಅರ್ಥಾತ್ ಹೃದಯದಿಂದ ತೆಗೆಯುವುದು, ತಮ್ಮ ಜವಾಬ್ದಾರಿ ಪೂರ್ತಿ ಆಗಿ ಬಿಟ್ಟಿದೆ. ಒಂದುವೇಳೆ ತಾವು ಏನಾದರೂ ಆಗುತ್ತಿಲ್ಲವೆಂದು ತಿಳಿದುಕೊಂಡರೆ ತಮ್ಮದು ಇದರಲ್ಲಿ ಪಾಪ ಇರುವುದಿಲ್ಲ ಯಾರು ಜವಾಬ್ದಾರರಿರುತ್ತಾರೆ ಅವರದು ಪಾಪ ಆಗುತ್ತದೆ, ತಾವು ನಿಶ್ಚಿಂತರಾಗಿರಿ. ಕೊಡುವುದು ತಮ್ಮ ಕಾರ್ಯವಾಗಿದೆ ಆದರೆ ಏನಾಗಿದೆ, ಏನಾಗಲಿಲ್ಲ, ಇದು ಏಕೆ ಆಗಿಲ್ಲ, ಅದು ಏಕೆ ಆಗಿಒಲ್ಲ ಎಂದು ಯೋಚನೆ ಮಾಡುವುದರ ಅವಶ್ಯಕತೆ ಇಲ್ಲ, ಇನ್ನೂ ವ್ಯರ್ಥ ಸಂಕಲ್ಪ ನಡೆಯುತ್ತದೆ. ತಮ್ಮ ಜವಾಬ್ದಾರಿ ಯಾವುದಿದೆ ಅದನ್ನು ಮಾಡಿ, ದೊಡ್ಡವರಿಗೆ ತಿಳಿಸಿ ಆದರೆ ತಿಳಿಸಿದ ನಂತರ ತಲುಪಿಸುವುದೂ ಸಹ ರೀತಿ ಅನುಸಾರವಾಗಿರಬೇಕು. ಮದುಭನನಿವಾಸಿ ಬ್ರಾಹ್ಮಣರು ಶ್ರೇಷ್ಠರಾಗಿದ್ದೀರಿ. ತಮ್ಮ ಪದವಿಯನ್ನು ತಿಳಿದು ಅಂತಹ ಕರ್ತವ್ಯವನ್ನು ಮಾಡಿ, ಅದನ್ನು ನೋಡಿ ಅನ್ಯರು ಕಲಿಯಬೇಕು. ಮಧುಬನ ನಿವಾಸಿಯರ ಮೇಲೆ ಎಲ್ಲರಿಗೆ ಭಾವನೆ ಇದೆ - ಅಂತಹ ಭಾವನೆವುಳ್ಳವರಿಗೆ ಭಾವನೆಯ ಫಲವನ್ನು ತೋರಿಸಿ. ಮಧುನದವರಲ್ಲಿ ಬಾಪ್ದಾದಾರವರಿಗೆ ಗೊತ್ತಿದೆ - ಕೆಲವು ಮಕ್ಕಳು ಬಹಳ ಮರ್ಯಾದಾಪೂರ್ವಕವಾಗಿ ಸ್ವ ಪುರುಷಾರ್ಥಿ, ತಂದೆಗೆ ಸ್ನೇಹಿಯಾಗಿ ಸಹಯೋಗ ಕೊಡುವವರೂ ಇದ್ದಾರೆ. ಆದರೆ ಬಾಪ್ದಾದಾ ಇದನ್ನೇ ಬಯಸುತ್ತಾರೆ - ಮಧುಬನ ನಿವಾಸಿಯರ ಪ್ರತಿ ಬಾಪ್ದಾದಾ ಏನು ಬಯಸುತ್ತಾರೆ? ಮಧುಬನ ನಿವಾಸಿ ಪ್ರತಿಯೊಬ್ಬ ತಂದೆಯ ಮಗು ಯಜ್ಞ ಸ್ನೇಹಿ, ಸಹಯೋಗಿ ಆಗಿ ತಮ್ಮ ಚಲನೆ ಮೂಲಕ ಎಲ್ಲರಿಗೆ ತಂದೆಯ ಪರಿಚಯ ಕೊಡಲಿ - ತಾವು ಮಧುಬನ ನಿವಾಸಿಯರದು ಎಷ್ಟು ದೊಡ್ಡ ಭಾಗ್ಯವಿದೆ, ಭಾಗ್ಯವನ್ನು ಪ್ರಸಿದ್ಧ ಮಾಡಿ ಏಕೆಂದರೆ ಯಜ್ಞ ನಿವಾಸಿ ಆಗಿದ್ದೀರಿ. ಪರಮಾತ್ಮ ಮೊದಲು ಏನು ರಚನೆ ಮಾಡಿದರು? ಮತ್ತು ಯಜ್ಞದ ಧರಣಿ ನಿಮಿತ್ತ ಮಧುಬನ ಆಗಿದೆ. ಮಧುಬನದ ಮಹಿಮೆ ಗೊತ್ತಿದೆಯಲ್ಲವೇ? ಯಾರಿಗೆ ಮಧುಬನದ ಮಹಿಮೆ ಗೊತ್ತಿದೆ ಅವರು ಕೈ ಎತ್ತಿ. ಬಾಪ್ದಾದಾ ನೋಡುತ್ತಿದ್ದಾರೆ, ಒಳ್ಳೆಯದು ಬಹಳ ಒಳ್ಳೆಯದು.

ಯಾರು ನಿಮಿತ್ತರಾಗಿದ್ದಾರೆ ಅವರನ್ನು ಬಾಪ್ದಾದಾ ಖುಷಿ ಆಗಿದ್ದಾರೆ. ಎಲ್ಲರೂ ಅಟೆನ್ಷನ್ ಕೊಡುತ್ತಾರೆ ಆದರೆ ಇನ್ನೂ ಅಟೆನ್ಷನ್ ಕೊಟ್ಟು ಸಂತುಷ್ಟರನ್ನಾಗಿ ಮಾಡಿ ಮತ್ತು ವಿಶ್ವಕ್ಕೆ ಸಂತುಷ್ಟತೆಯ ಕಿರಣಗಳನ್ನು ತಲುಪಿಸಿ. ಈ ಕಾರ್ಯವೂ ನಿಮಿತ್ತ ಆಗಿರುವವರು ಮಾಡಬೇಕಾಗಿದೆ. ಅದರ ಕಾರಣ ಯಾರು ನಿಮಿತ್ತ ಆಗಿದ್ದಾರೆ, ಅವರಿಗೆ ತಮ್ಮ-ತಮ್ಮ ಹ್ಯಾಂಡ್ಸಿನ ಸಂಸ್ಕಾರ ಪರಿವರ್ತನೆ ಮಾಡಿಸುವುದರಲ್ಲಿ ಸ್ವಲ್ಪ ಪರಿಶ್ರಮ ಮಾಡಬೇಕಾಗಿದೆ. ಸೇವೆ ಮಾಡಿಸುತ್ತೀರಿ, ವಾಸ ಮಾಡುವುದರ, ತಿನ್ನುವುದರ ಪ್ರಬಂಧವನ್ನು ಹೆಚ್ಚು ಸೇವಾಕೇಂದ್ರಗಳು ಮಾಡುತ್ತಾರೆ ಆದರೆ ಅವರಲ್ಲಿ ಶಕ್ತಿಯನ್ನು ತುಂಬಿಸಿ ಯಾವುದರಿಂದ ಅವರು ತಂದೆಯಿಂದ ಶಕ್ತಿಯನ್ನು ಪಡೆದು ತಮ್ಮ ಸೇವಾಕೇಂದ್ರದ ವಾಯುಮಂಡಲವನ್ನು ಪರಿವರ್ತನೆ ಮಾಡಲಿ. ಯಾರೆಲ್ಲಾ ಬರುತ್ತಾರೆ ಅವರು ಮೊದಲು ವಾಯುಮಂಡಲದ ಆಕರ್ಷಣೆಯಲ್ಲಿ ಬರುವ ಹಾಗೆ ಮಾಡಬೇಕು. ಈಗಿನ ಸಮಯದಲ್ಲಿ ಎಲ್ಲರೂ ಇದನ್ನೇ ಬಯಸುತ್ತಾರೆ, ಈ ರೀತಿ ಯಾವುದಾದರೂ ಕಾರ್ಯ ಆಗಲಿ ಯಾವುದರಿಂದ ಬರುತ್ತಿದ್ದಾಗಲೇ ಅನುಭವ ಆಗಬೇಕು ಎಂದು ಬಯಸುತ್ತಾರೆ, ನೋಡುತ್ತಿದ್ದಾಗಲೇ ಅನುಭವ ಆಗಬೇಕು, ಕೇಳುವ ಅನುಭವ ಆಗುತ್ತದೆ, ಯೋಗದ ಅನುಭವ ಆಗುತ್ತದೆ ಆದರೆ ವಾಯುಮಂಡಲದ ಅನುಭವವೂ ಆಗಬೇಕು. ನಿಮಿತ್ತ ಆಗಿರುವ ಆತ್ಮರಿಗೆ ಈ ಅಟೆನ್ಷನ್ ಇಟ್ಟುಕೊಳ್ಳುವುದು ವಿಶೇಷ ಸೇವೆಯಾಗಿದೆ. ಸ್ವಯಂ ಒಂದುವೇಳೆ ಯೋಗಯುಕ್ತರಾಗಿ ವಾಯುಮಂಡಲದಲ್ಲಿ ಸರಿಯಾದ ಸ್ಥಿತಿಯಲ್ಲಿ ಇದ್ದರೆ ಅದರ ಪ್ರಭಾವ ಸೇವಾಕೇಂದ್ರದ ಮೇಲೆ ಸ್ವತಃವಾಗಿಯೇ ಬೀಳುತ್ತದೆ. ಹೇಗೆ ಬಾಪ್ದಾದಾ ಮತ್ತು ದೊಡ್ಡ ನಿಮಿತ್ತ ಆಗಿರುವ ಆತ್ಮರ ವಾಯುಮಂಡಲ, ವೈಬ್ರೇಷನ್ ಪ್ರಭಾವ ಇರುತ್ತದಲ್ಲವೇ, ಬಾಪ್ದಾದಾರವರ ವಾಯುಮಂಡಲ ಬದಲಾವಣೆ ಆಗುತ್ತದೆಯಲ್ಲವೇ. ಅಂದಾಗ ಪ್ರತಿಯೊಬ್ಬ ಮಗು ವಾಯುಮಂಡಲವನ್ನು ಮಾಡಬೇಕೆ ಏಕೆಂದರೆ ಈಗ ತಮ್ಮ ಸೇವಾಕೇಂದ್ರದ ವಾಯುಮಂಡಲ ಬದಲಾವಣೆ ಆಗುತ್ತದೆ ಆಗ ಸಂಸಾರದ ವಾಯುಮಂಡಲ ಬದಲಾವಣೆ ಆಗುತ್ತದೆ. ತಮ್ಮ ಸೇವಾಸ್ಥಾನ ನಿಮಿತ್ತ ಆಗಿದೆ. ಪುರುಷಾರ್ಥ ಇದೆ, ಲಕ್ಷ್ಯ ಇದೆ, ಆದರೆ ಈ ಲಕ್ಷ್ಯವನ್ನು ಇನ್ನೂ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ. ಯಾವುದನ್ನು ನೋಡಿ ಮನುಷ್ಯರು ಮುಖದಿಂದ, ವೈಬ್ರೇಷನ್ಯಿಂದ ತಿಳಿದುಕೊಳ್ಳಲಿ ಏಕೆಂದರೆ ಈ ಸಮಯದಲ್ಲಿ ಆಸುರಿ ಶಕ್ತಿಯ ಪ್ರಭಾವವೂ ಅವರ ಬುದ್ಧಿ ಮೇಲಿದೆ, ಜ್ಞಾನದ ಪ್ರಭಾವವೂ ಇದೆ. ಆದ್ದರಿಂದ ಯಾರೆಲ್ಲಾ ಮೀಟಿಂಗಿನಲ್ಲಿ ಬಂದಿದ್ದೀರಿ ಅವರೆಲ್ಲರದೂ ಜವಾಬ್ದಾರಿ ಆಗಿದೆ. ಇಲ್ಲವೆಂದರೆ ಮೀಟಿಂಗಿನಲ್ಲಿ ಏಕೆ ಹೆಸರು ಕೊಟ್ಟಿದ್ದೀರಿ, ಸಾಹಸ ಇದೆಯಲ್ಲವೇ, ಆಗ ತಮ್ಮ ಹೆಸರು ಇದೆಯಲ್ಲವೇ, ಆದ್ದರಿಂದ ತಮ್ಮ ಕರ್ತವ್ಯವನ್ನು ಪ್ರತ್ಯಕ್ಷ ಮಾಡಿ. ಮಾಡಲು ಬಯಸುತ್ತೀರಿ ಬಾಪ್ದಾದಾರವರಿಗೆ ಗೊತ್ತಿದೆ, ಮಾಡುವ ಪ್ರಯತ್ನವೂ ಸಹ ಮಾಡುತ್ತೀರಿ ಆದರೆ ಸ್ವಲ್ಪ ಪ್ರಯತ್ನವನ್ನು ಹೆಚ್ಚಿಸಿಕೊಳ್ಳಿ. ತಿಳಿಯಿತೇ?

ಈಗ ಬಾಪ್ದಾದಾ ಎಲ್ಲರ ರಿಜಲ್ಟ್ನ್ನು ನೋಡಲು ಬಯಸುತ್ತಾರೆ. ಮಧುಬನದವರಾಗಲಿ, ಮೀಟಿಂಗ್ನವರಾಗಲಿ ಇಬ್ಬರ ರಿಜಲ್ಟ್ನ್ನು ನೋಡಲು ಬಯಸುತ್ತಾರೆ. ಮಧುಬದವರಾಗಲಿ, ಮೀಟಿಂಗ್ನವರು ಆಗಲಿ ಇಬ್ಬರ ರಿಜಲ್ಟ್ ನೋಡಲು ಬಯಸುತ್ತಾರೆ. ಜಗದಾಂಬಾರವರದು ಯಾವ ವಿಶೇಷ ಪುರುಷಾರ್ಥ ಇತ್ತು, ತಂದೆ ಹೇಳುವುದು ಮತ್ತು ಜಗದಾಂಬಾರವರು ಮಾಡುವುದು. ತಮ್ಮ ದೀದಿಯವರದು ಈಗ ಮನೆಗೆ ಹೋಗಬೇಕು, ಈಗ ಮನೆಗೆ ಹೋಗಬೇಕೆಂದು ಎಂಬ ಇದೇ ಶಬ್ದ ಇತ್ತು, ತಮ್ಮ ದಾದಿಯವರದು ಇದೇ ಸಂಕಲ್ಪ ಇತ್ತು - ಈಗ ಕರ್ಮಾತೀತ ಆಗಬೇಕು, ಕರ್ಮಾತೀತರಾಗುವ ಕ್ಲಾಸ್ ಮಾಡಬೇಕು, ಕರ್ಮಾತೀತರಾಗುವ ಉಮ್ಮಂಗ ಕೊಡಬೇಕೆಂದು. ತಮ್ಮ ಪಾಂಡವರು ಯಾರು ಹೋದರು ಅವರ ಹೃದಯದಲ್ಲಿ ಇದೇ ಸಂಕಲ್ಪ ಇತ್ತು - ನಾವು ಯಾರು ಪಾಂಡವರು, ಪಾಂಡವರಿಗೆ ವಿಜಯಿ ಎಂದು ಹೇಳಲಾಗುತ್ತದೆ, ಅಂದಾಗ ಪಾಂಡವರದು ಯಾವ ಲಕ್ಷ್ಯ ಇತ್ತು ಮತ್ತು ವಿಜಯಿ ಪಾಂಡವರು ಎಂದು ಗಾಯನವಿದೆ. ಪಾಂಡವರು ಎಂದರೆ ಯಾವ ನೆನಪು ಬರುತ್ತದೆ? ವಿಜಯ ನೆನಪು ಬರುತ್ತದೆ. ಅಕ್ಷೋಹಿನಿ ಸೇನೆ ಇತ್ತು ಆದರೂ ಸಹ ಪಾಂಡವ ಶಬ್ದ ಹೇಳುವುದರಿಂದ ವಿಜಯಿ ನೆನಪು ಬರುತ್ತದೆ. ಪಂಚ ಪಾಂಡವರು ಆದರೂ ಸಹ ವಿಜಯಿ ಆಗಿದ್ದರೆ. ಎಂತಹದ್ದೇ ವಾಯುಮಂಡಲ ಆಗಿರಲಿ, ಅಕ್ಷೋಹಿನಿ ಸೇನೆಯ ವಾಯುಮಂಡಲ ಇದ್ದರೂ ಪಾಂಡವರು ಪಾಂಡವಪತಿಯ ಶ್ರೀಮತದಿಂದ ವಿಜಯಿ ಆದರು ಮತ್ತು ವಿಜಯದ ಹೆಸರು ಪ್ರಸಿದ್ಧ ಮಾಡಿದರು. ಈಗ ಅದೇ ಪಾಂಡವರು ವಿಜಯಿ ಆಗಿ ಅನ್ಯರಿಗೂ ವಿಜಯವನ್ನು ತರಿಸುವವರು. ಅಂದಾಗ ಪಾಂಡವರನ್ನು ನೋಡಿ ಬಾಪ್ದಾದಾ ಖುಷಿ ಆಗುತ್ತಾರೆ. ಯಾವ ಮಾತಿನಲ್ಲಿ ಖುಷಿ ಆಗುತ್ತಾರೆ? ಶಕ್ತಿಯರ ಜೊತೆಗಾರರಾಗಿದ್ದಾರೆ. ಶಕ್ತಿಯರಿಗೆ ಸಹಯೋಗ ಕೊಟ್ಟು ಮುಂದುವರೆಸುವುದರಲ್ಲಿ ಜೊತೆಗಾರರಾಗಿದ್ದಾರೆ. ಹೇಗೆ ತಂದೆ ಶಕ್ತಿಯರನ್ನು ಶಿವ ಶಕ್ತಿಯ ಮಂತ್ರವನ್ನು ಕೊಟ್ಟು ಕಂಬೈನ್ಡ್ ಮಾಡಿದ್ದಾರೆ ಅದೇ ರೀತಿ ಪಾಂಡವರು ಶಕ್ತಿಯರನ್ನು, ಪಾಂಡವರಲ್ಲಿ ಯಾವ ವಿಶೇಷತೆ ಇದೆ ಆ ವಿಶೇಷತೆಯಿಂದ ಶಕ್ತಿಯರಿಗೆ ಸಹಯೋಗ ಕೊಟ್ಟು ಮುಂದುವರೆಸುವವರು ಒಳ್ಳೆಯವರಾಗಿದ್ದಾರೆ. ಮತ್ತೆ ಸದಾ ಬಹಳ ಒಳ್ಳೆಯವರಾಗಿ ಮುಂದುವರೆಯುವವರಾಗಿದ್ದಾರೆ. ಒಳ್ಳೆಯದು.

ಬಾಪ್ದಾದಾ ಈ ದಿನ ತಮ್ಮ ಸ್ನೇಹವನ್ನು ನೋಡಿ ತಮ್ಮೆಲ್ಲರಿಗೆ ಸ್ನೇಹದ ಹಾರವನ್ನು ಹಾಕುತ್ತಾರೆ. ತಾವೂ ಸಹ ಪ್ರತಿಯೊಬ್ಬರಿಗೆ ಸ್ನೇಹ-ಸಹಯೋಗದ ಹಾರವನ್ನು ಹಾಕಿ. ಬಾಹುಗಳ ಹಾರವಲ್ಲ, ಹೃದಯದಲ್ಲಿ ಸಹಯೋಗದ ಹಾರವನ್ನು ಹಾಕಿ. ಬಾಪ್ದಾದಾರವರು ಮೊದಲೂ ಸಹ ತಿಳಿಸಿದರು ಪ್ರತಿಯೊಬ್ಬ ಮಗುವಿನ ಜೇಬಿನಲ್ಲಿ ಸಹಯೋಗದ ನೋಟ್ ಇರಬೇಕು ಅಂದಾಗ ತಪ್ಪುಗಳ ನೋಟ್ ಅಲ್ಲ ಆದರೆ ಸಹಯೋಗದ ನೋಟ್ಯಿಂದ ಜೇಬು ತುಂಬಿರಬೇಕು. ಎಲ್ಲಾದರೂ ನೋಡಿ ಸಹಯೋಗದ ನೋಟ್ ಕೊಡಿ, ಜೇಬುನಲ್ಲಿ ಇದೆಯೇ? ಸಹಯೋಗದ ನೋಟ್ ಇದೆಯೇ? ತುಂಬಿಸಿಕೊಂಡಿದ್ದೀರಾ? ಜೇಬು ತುಂಬಿದೆಯೇ? ಖಾಲಿ ಇಲ್ಲ ತಾನೇ? ತಾವು ಸಹಯೋಗದ ನೋಟ್ ಕೊಡಿ ಮತ್ತೆ ಅವರು ತಮಗೆ ಅಶೀರ್ವಾದದ ಹಾರ ಹಾಕುತ್ತಾರೆ.

ತಮ್ಮ ಅಡ್ವಾನ್ಸ್ ಪಾರ್ಟಿಯ ವಿಶೇಷ ಆತ್ಮರು ಮತ್ತು ತಂದೆ ಸೂಕ್ಷ್ಮವತನವಾಸಿ ಕಾಯುತ್ತಿದ್ದಾರೆ. ತಮಗೆ ಅವರ ಸಂಕಲ್ಪ ತಲುಪುತ್ತಿದೆಯೇ? ಅವರು ಡೇಟ್ (ತಾರೀಖು) ಕೇಳುತ್ತಿದ್ದಾರೆ. ತಮ್ಮ ದೊಡ್ಡ-ದೊಡ್ಡ ದಾದಿಯರು ಮತು ದಾದಾರವರು ಇಬ್ಬರು ಡೇಟ್ಗಾಗಿ ಕಾಯುತ್ತಿದ್ದಾರೆ. ಅಂದಾಗ ಅವರಿಗೆ ಡೇಟ್ ಕೊಡುತ್ತೀರಾ? ಕೊಡುತ್ತೀರಾ? ಮೊದಲನೇ ಲೈನ್ನವರು ಡೇಟ್ ಕೊಡುತ್ತೀರೋ ಅಥವಾ ವೇಟ್ ಅಂಡ್ ಸೀ ಎಂದು ಹೇಳುತ್ತೀರೋ? ಪ್ರತಿಯೊಬ್ಬರು ಇದರಲ್ಲಿ ಏನು ಮಾಡಬೇಕು? ಪ್ರತಿಯೊಬ್ಬರು ಉಳಿದಿರುವ ಸಂಸ್ಕಾರಗಳನ್ನು ಸಂಸ್ಕಾರ ಮಾಡಿ. ಸಮಯ ಸಮೀಪ ಬಂದು ಬಿಡುತ್ತದೆ. ಸಮಯವನ್ನು ಸಮೀಪ ತರಲು ಇದೇ ಯುಕ್ತಿಯಾಗಿದೆ. ಉಳಿದಿರುವ ಸಂಸ್ಕಾರಗಳು ವಿಘ್ನಗಳು ಹಾಕುತ್ತಿದೆ. ಇನ್ನೊಂದು ಸೀಜನ್ ಶುರು ಆಗಲು ಬಹಳ ದಿನಗಳಿವೆ ಅಂದಾಗ ಈಗ ಪ್ರತಿದಿನ ಯಾವುದಾದರೂ ಸಂಸ್ಕಾರದ ಸಂಸ್ಕಾರ ಮಾಡುತ್ತಾ ಹೋಗಿ. ಒಂದೊಂದು ಮಾಡುತ್ತಾ ಹೋಗುವಷ್ಟು ದಿನಗಳಿವೆ. ಇನ್ನೊಮ್ಮೆ ಬಾಬಾ ಬಂದಾಗ ನಾವು ಸಂಸ್ಕಾರದ ಸಂಸ್ಕಾರ ಆಗಿಬಿಟ್ಟಿದೆ ಎಂದು ಕೈ ಎತ್ತುವವರು ಕೈ ಎತ್ತಿರಿ. ಕೈಯಂತೂ ಎತ್ತುತ್ತೀರಿ, ಬಾಪ್ದಾದಾ ಎಡ್ವಾನ್ಸ್ನಲ್ಲಿ ಬಹಳ-ಬಹಳ ಶುಭಶಯಗಳನ್ನು ಕೊಡುತ್ತಿದ್ದಾರೆ. ಒಳ್ಳೆಯದು.

ವರದಾನ:
ಆಲಸ್ಯದ ಭಿನ್ನ-ಭಿನ್ನ ರೂಪಗಳನ್ನು ಸಮಾಪ್ತಿ ಮಾಡುತ್ತಾ ಸದಾ ಉಲ್ಲಾಸದಲ್ಲಿ ಇರುವಂತಹ ತೀವ್ರ ಪುರುಷಾರ್ಥಿ ಭವ.

ವರ್ತಮಾನ ಸಮಯದಲ್ಲಿ ಮಾಯೆಯ ಯುದ್ಧವು ಆಲಸ್ಯದ ರೂಪದಲ್ಲಿ, ಭಿನ್ನ-ಭಿನ್ನ ವಿಧಿಯಿಂದ ಆಗುತ್ತದೆ. ಈ ಆಲಸ್ಯವೂ ಸಹ ವಿಶೇಷ ವಿಕಾರವಾಗಿದೆ, ಇದನ್ನು ಸಮಾಪ್ತಿ ಮಾಡುವುದಕ್ಕಾಗಿ ಸದಾ ಉಲ್ಲಾಸದಲ್ಲಿರಿ. ಯಾವಾಗ ಸಂಪಾದನೆ ಮಾಡುವ ಉಲ್ಲಾಸವು ಇರುತ್ತದೆಯೋ ಆಗ ಆಲಸ್ಯವು ಸಮಾಪ್ತಿ ಆಗಿ ಬಿಡುತ್ತದೆ. ಆದ್ದರಿಂದ ಉಲ್ಲಾಸವನ್ನೆಂದಿಗೂ ಕಡಿಮೆ ಮಾಡಿಕೊಳ್ಳಬಾರದು. ಯೋಚಿಸುವೆವು, ಮಾಡುವೆವು, ಮಾಡಿ ಬಿಡುತ್ತೇವೆ, ಆಗಿ ಬಿಡುತ್ತದೆ.... ಇವೆಲ್ಲವೂ ಆಲಸ್ಯದ ಗುರುತಾಗಿದೆ. ಈ ಆಲಸ್ಯವಿರುವ ನಿರ್ಬಲ ಸಂಕಲ್ಪಗಳನ್ನು ಸಮಾಪ್ತಿಗೊಳಿಸುತ್ತಾ, ಇದನ್ನೇ ಯೋಚಿಸಿರಿ - ಏನು ಮಾಡಬೇಕು, ಎಷ್ಟು ಮಾಡಬೇಕು ಎಂದು ಯೋಚಿಸಿದಾಗ ತೀವ್ರ ಪುರುಷಾರ್ಥಿ ಎಂದು ಹೇಳುತ್ತಾರೆ.

ಸ್ಲೋಗನ್:
ಯಾರ ಚಿಂತನೆ ಮತ್ತು ಹೇಳುವುದು ಸಮಾನವಿರುತ್ತದೆಯೋ ಅವರೇ ಸತ್ಯ ಸೇವಾಧಾರಿ ಆಗಿದ್ದಾರೆ.

ಅವ್ಯಕ್ತ ಸೂಚನೆಗಳು:- ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.

ಪವಿತ್ರತೆಯ ಪರಂ ಜ್ಯೋತಿ ಸದಾ ಶ್ರೇಷ್ಠವಾಗಿ ಉರಿಯುತ್ತಾ ಇರಲಿ, ಸ್ವಲ್ಪವೂ ಏರುಪೇರಿನಲ್ಲಿ ಬರದಿರಲಿ, ಅಚಲವಾಗಿರಲಿ. ಎಷ್ಟು ಅಚಲ ಪವಿತ್ರತೆಯ ಪರಂ ಜ್ಯೋತಿ ಇರುವುದು ಅಷ್ಟು ಸಹಜವಾಗಿ ಎಲ್ಲರೂ ತಂದೆಯನ್ನು ಗುರುತಿಸುತ್ತಾರೆ ಹಾಗೂ ಪವಿತ್ರತೆಯ ಜಯ ಜಯಕಾರ ಆಗುವುದು. ಪವಿತ್ರತೆಯ ಪರ್ಸನಾಲಿಟಿ ಸದಾ ಇಮರ್ಜ್ ರೂಪದಲ್ಲಿ ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಸ್ಮೃತಿಯೇ ಸಮರ್ಥತೆಯ ಆಧಾರವಾಗಿದೆ ಹಾಗೂ ಎಲ್ಲಿ ಸಮರ್ಥತೆ ಇರುತ್ತದೆ ಅಲ್ಲಿ ಮಾಯೆ ಬರಲು ಸಾಧ್ಯವಿಲ್ಲ. ಸಮರ್ಥ ಆತ್ಮನ ಬಳಿ ಮಾಯೆ ಬರುವುದು ಇದು ಅಸಾಧ್ಯವಾಗಿದೆ.