30.11.25    Avyakt Bapdada     Kannada Murli    18.01.2008     Om Shanti     Madhuban


“ಸತ್ಯ ಸ್ನೇಹಿ ಆಗಿ, ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಮೋಜನ್ನು ಅನುಭವ ಮಾಡಿ, ಪರಿಶ್ರಮದಿಂದ ಮುಕ್ತರಾಗಿ”


ಇಂದು ಬಾಪ್ದಾದಾರವರು ತನ್ನ ಎಲ್ಲಾ ಕಡೆ ಇರುವಂತಹ ನಿಶ್ಚಿಂತ ಚಕ್ರವರ್ತಿಗಳ ಸಂಘಟನೆಯನ್ನು ನೋಡುತ್ತಿದ್ದಾರೆ. ಇಷ್ಟು ದೊಡ್ಡ ರಾಜರ ಸಭೆ ಪೂರ್ತಿ ಕಲ್ಪದಲ್ಲಿ ಈ ಸಂಗಮದ ಸಮಯದಲ್ಲಿ ಇರುತ್ತದೆ. ಸ್ವರ್ಗದಲ್ಲೂ ಸಹ ಇಷ್ಟು ದೊಡ್ಡ ರಾಜರ ಸಭೆ ಇರುವುದಿಲ್ಲ. ಆದರೆ ಈಗ ಬಾಪ್ದಾದಾರವರು ಸರ್ವ ರಾಜರ ಸಭೆಯನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ದೂರದಲ್ಲಿ ಇರುವವರು ಹೃದಯದ ಸಮೀಪ ಕಂಡು ಬರುತ್ತಿದ್ದಾರೆ. ತಾವೆಲ್ಲರು ನಯನಗಳಲ್ಲಿ ಸಮಾವೇಶ ಆಗಿದ್ದೀರಿ, ಅವರು ಹೃದಯದಲ್ಲಿ ಸಮಾವೇಶ ಆಗಿದ್ದಾರೆ. ಎಷ್ಟು ಸುಂದರ ಸಭೆಯಾಗಿದೆ, ಈ ವಿಶೇಷ ದಿನದಂದು ಎಲ್ಲರ ಚೆಹರೆಗಳ ಮೇಲೆ ಅವ್ಯಕ್ತ ಸ್ಥಿತಿಯ ಸ್ಮೃತಿಯ ಹೊಳಪು ಕಂಡು ಬರುತ್ತಿದೆ. ಎಲ್ಲರ ಹೃದಯದಲ್ಲಿ ಬ್ರಹ್ಮಾ ತಂದೆಯ ಸ್ಮೃತಿ ಸಮಾವೇಶವಾಗಿದೆ. ಆದಿ ದೇವ ಬ್ರಹ್ಮಾ ತಂದೆ ಹಾಗೂ ಶಿವ ತಂದೆ ಇಬ್ಬರೂ ಎಲ್ಲಾ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ.

ಈ ದಿನ ಬೆಳಗ್ಗೆ 2 ಗಂಟೆಯಿಂದ ಬಾಪ್ದಾದಾರವರ ಕೊರಳಿನಲ್ಲಿ ಭಿನ್ನ-ಭಿನ್ನ ಪ್ರಕಾರವಾದ ಮಾಲೆಗಳು ಇತ್ತು. ಈ ಹೂವಿನ ಮಾಲೆಗಳು ಸಹಜವಾಗಿರುತ್ತದೆ. ವಜ್ರಗಳ ಮಾಲೆಯೂ ಸಹ ದೊಡ್ಡದೇನಲ್ಲ ಆದರೆ ಸ್ನೇಹದ ಅಮೂಲ್ಯ ರತ್ನಗಳ ಮಾಲೆ ಅತೀ ಶ್ರೇಷ್ಠವಾಗಿದೆ. ಪ್ರತಿಯೊಂದು ಮಗುವಿನ ಹೃದಯದಲ್ಲಿ ಇಂದು ವಿಶೇಷವಾಗಿ ಸ್ನೇಹ ಇಮರ್ಜ್ ಆಯಿತು. ಬಾಪ್ದಾದಾರವರ ಬಳಿ ನಾಲ್ಕು ಪ್ರಕಾರದ ಮಾಲೆಗಳು ಇಮರ್ಜ್ ಆಗಿತ್ತು. ಮೊದಲನೇ ನಂಬರಿನವರು ತಂದೆಯ ಸಮಾನರಾಗುವ ಶ್ರೇಷ್ಠ ಪುರುಷಾರ್ಥ ಮಾಡುವಂತಹ ಮಕ್ಕಳಿದ್ದಾರೆ, ಅಂತಹ ಮಕ್ಕಳು ಮಾಲೆಯ ರೂಪದಲ್ಲಿ ತಂದೆಯ ಕೊರಳಿನಲ್ಲಿ ಪೋಣಿಸಲ್ಪಡುತ್ತಾರೆ. ಮೊದಲನೇ ಮಾಲೆ ಎಲ್ಲದಕ್ಕಿಂತ ಚಿಕ್ಕದಾಗಿತ್ತು. ಎರಡನೇ ಮಾಲೆ - ಹೃದಯದ ಸ್ನೇಹ, ಸಮೀಪ, ಸಮಾನರಾಗುವ ಪುರುಷಾರ್ಥಿ ಮಕ್ಕಳ ಮಾಲೆಯಾಗಿದೆ. ಮೊದಲನೇ ಮಾಲೆಯವರು ಶ್ರೇಷ್ಠ ಪುರುಷಾರ್ಥಿಗಳು, ಎರಡನೇ ಮಾಲೆಯವರು ಪುರುಷಾರ್ಥಿ ಆಗಿದ್ದಾರೆ. ಮೂರನೇ ಮಾಲೆ - ಯಾವುದು ದೊಡ್ಡದಾಗಿತ್ತು, ಅವರಲ್ಲಿ ಸ್ನೇಹವೂ ಇದೆ, ತಂದೆಯ ಸೇವೆಯಲ್ಲಿ ಜೊತೆಗಾರರೂ ಸಹ ಆಗಿದ್ದಾರೆ ಆದರೆ ಕೆಲವೊಮ್ಮೆ ತೀವ್ರ ಪುರುಷಾರ್ಥಿ, ಕೆಲವೊಮ್ಮೆ ಬಿರುಗಾಳಿಯನ್ನು ಹೆಚ್ಚು ಎದುರಿಸುವಂತಹವರು. ಆದರೆ, ಬಯಕೆಯು ಇದೆ, ಸಂಪನ್ನರಾಗುವ ಇಚ್ಛೆಯೂ ಸಹ ಚೆನ್ನಾಗಿರುತ್ತದೆ. ನಾಲ್ಕನೇ ಮಾಲೆಯಾಗಿದೆ ದೂರು ಕೊಡುವಂತಹವರದ್ದು. ಭಿನ್ನ-ಭಿನ್ನ ಪ್ರಕಾರದ ಮಕ್ಕಳ ಮಾಲೆಯು ಅವ್ಯಕ್ತ ಫರಿಸ್ಥಾ ಚೆಹರೆಯ ರೂಪದಲ್ಲಿ ಮಾಲೆಯಾಗಿತ್ತು. ಬಾಪ್ದಾದಾರವರು ಭಿನ್ನ-ಭಿನ್ನ ಮಾಲೆಗಳನ್ನು ನೋಡಿ ಖುಷಿ ಪಡುತ್ತಿದ್ದೇವೆ ಹಾಗೂ ಸ್ನೇಹ ಮತ್ತು ಸಕಾಶವನ್ನು ಜೊತೆ-ಜೊತೆಯಲ್ಲಿ ಕೊಡುತ್ತಿದ್ದೇವೆ. ಈಗ ನಾನು ಯಾರು ಎಂದು ಯೋಚನೆ ಮಾಡಿ. ಆದರೆ ಎಲ್ಲಾ ಕಡೆಯ ಮಕ್ಕಳಲ್ಲಿ ಈಗ ಏನಾದರೂ ಮಾಡಬೇಕು ಎನ್ನುವ ವಿಶೇಷ ಸಂಕಲ್ಪ ವರ್ತಮಾನ ಸಮಯದಲ್ಲಿ ಹೃದಯದಲ್ಲಿ ಇಮರ್ಜ್ ಆಗಿದೆ. ಈ ಉಮ್ಮಸ್ಸು-ಉತ್ಸಾಹ ಹೆಚ್ಚಿನ ಪ್ರಮಾಣದಲ್ಲಿ ಸಂಕಲ್ಪ ರೂಪದಲ್ಲಿ ಇದೆ. ಸ್ವರೂಪದಲ್ಲಿ ನಂಬರ್ವಾರಾಗಿ ಇದ್ದಾರೆ ಆದರೆ ಸಂಕಲ್ಪದಲ್ಲಿ ಇದೆ.

ಬಾಪ್ದಾದಾ ಸ್ನೇಹದ ದಿನದಂದು, ಸಮರ್ಥ ದಿನ ಎಲ್ಲಾ ಮಕ್ಕಳಿಗೆ ವಿಶೇಷ ಹೃದಯದ ಆಶೀರ್ವಾದಗಳನ್ನು ಹಾಗೂ ಹೃದಯದ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಇಂದು ವಿಶೇಷವಾಗಿ ಸ್ನೇಹದ ದಿನ ಆಗಿರುವ ಕಾರಣ ಹೆಚ್ಚು ಸ್ನೇಹದಲ್ಲಿ ಮುಳುಗಿ ಹೋಗಿದ್ದಾರೆ. ಇದೇ ರೀತಿ ಪುರುಷಾರ್ಥದಲ್ಲಿ ಸದಾ ಸ್ನೇಹದಲ್ಲಿ ಮುಳುಗಿ ಹೋಗಿ. ಲವಲೀನರಾಗಬೇಕೆಂದರೆ ಸಹಜ ಸಾಧನೆಯಾಗಿದೆ ಸ್ನೇಹ, ಹೃದಯದ ಸ್ನೇಹವಾಗಿದೆ. ತಂದೆಯ ಪರಿಚಯ ಸ್ಮೃತಿ ಸಹಿತವಾಗಿ ಸ್ನೇಹವಿದೆ. ತಂದೆಯ ಪ್ರಾಪ್ತಿಗಳ ಸ್ನೇಹ ಸಂಪನ್ನ ಸ್ನೇಹವಾಗಿದೆ. ಸ್ನೇಹ ಬಹಳ ಸಹಜ ಸಾಧನವಾಗಿದೆ ಏಕೆಂದರೆ ಸ್ನೇಹಿ ಆತ್ಮ ಪರಿಶ್ರಮದಿಂದ ಬಿಡುಗಡೆ ಆಗುತ್ತದೆ. ಸ್ನೇಹದಲ್ಲಿ ಲವಲೀನರಾಗಿರುವ ಕಾರಣ, ಸ್ನೇಹದಲ್ಲಿ ಮುಳುಗಿ ಇರುವ ಕಾರಣ ಯಾವುದೇ ಪ್ರಕಾರದ ಪರಿಶ್ರಮ ಮನೋರಂಜನೆಯ ರೂಪದಲ್ಲಿ ಅನುಭವ ಆಗುತ್ತದೆ. ಸ್ನೇಹಿ ಸ್ವತಃವಾಗಿಯೇ ದೇಹಬಾನ, ದೇಹ ಸಂಬಂಧ, ದೇಹ ಪ್ರಪಂಚಕ್ಕಿಂತ ಮೇಲೆ ಸ್ವತಃವಾಗಿಯೇ ಸ್ನೇಹದಲ್ಲಿ ಲೀನರಾಗಿರುತ್ತಾರೆ. ಹೃದಯದ ಸ್ನೇಹ ತಂದೆಗೆ ಸಮೀಪತೆಯನ್ನು, ಜೊತೆಯನ್ನು, ಸಮಾನತೆಯನ್ನು ಅನುಭವ ಮಾಡಿಸುತ್ತದೆ. ಸ್ನೇಹಿ ಸದಾ ತಂದೆಯ ಆಶೀರ್ವಾದಗಳಿಗೆ ಪಾತ್ರನಾಗಿದ್ದೇನೆಂದು ತಿಳಿಯುತ್ತಾರೆ. ಸ್ನೇಹ ಅಸಂಭವವನ್ನೂ ಸಹ ಸಂಭವ ಮಾಡಿ ಬಿಡುತ್ತದೆ. ಸದಾ ತಮ್ಮ ಮಸ್ತಕದಲ್ಲಿ ತಲೆಯ ಮೇಲೆ ತಂದೆಯ ಸಹಯೋಗದ, ಸ್ನೇಹದ ಕೈಯನ್ನು ಅನುಭವ ಮಾಡುತ್ತೀರಿ. ನಿಶ್ಚಯಬುದ್ಧಿ, ನಿಶ್ಚಿಂತವಾಗಿರುತ್ತೀರಿ. ತಾವೆಲ್ಲಾ ಆದಿ ಸ್ಥಾಪನೆಯ ಮಕ್ಕಳಿಗೆ ಆದಿ ಸಮಯದ ಅನುಭವ ಇದೆ. ಈಗಲೂ ಸಹ ಸೇವೆಗೆ ನಿಮಿತ್ತರಾದ ಆದಿ ರತ್ನ ಮಕ್ಕಳಿಗೆ ಅನುಭವವಿದೆ, ಆದಿಯಿಂದ ಎಲ್ಲಾ ಮಕ್ಕಳಿಗೆ ತಂದೆ ಸಿಕ್ಕಿದ್ದಾರೆ. ಈ ಸ್ಮೃತಿಯಿಂದ ಸ್ನೇಹದ ನಶೆ ಎಷ್ಟಿತ್ತು! ಜ್ಞಾನ ನಂತರ ಸಿಗುತ್ತದೆ ಆದರೆ ಅದಕ್ಕಿಂತಲೂ ಮೊಟ್ಟ ಮೊದಲನೇ ನಶೆ ಸ್ನೇಹದಲ್ಲಿ ಸಮಾವೇಶವಾಗಿದೆ. ತಂದೆ ಸ್ನೇಹದ ಸಾಗರರಾಗಿದ್ದಾರೆ ಅಂದಾಗ ಮೆಜಾರಿಟಿ ಮಕ್ಕಳು ಸ್ನೇಹದ ಸಾಗರನಲ್ಲಿ ಮುಳಿಗಿ ಹೋಗಿದ್ದೀರಿ ಅರ್ಥಾತ್ ಪುರುಷಾರ್ಥದ ಮಾರ್ಗದಲ್ಲಿ ಬಹಳ ತೀವ್ರವಾಗಿ ಮುಂದುವರೆದಿದ್ದೀರಿ. ಕೆಲವು ಮಕ್ಕಳು ಸ್ನೇಹದ ಸಾಗರದಲ್ಲಿ ಮುಳುಗಿ ಹೋಗಿ ಬಿಡುತ್ತಾರೆ. ಕೆಲವರು ಕೇವಲ ಮಿಂದು ಹೊರಗಡೆ ಬಂದು ಬಿಡುತ್ತಾರೆ, ಆದ್ದರಿಂದ ಸಾಗರದಲ್ಲಿ ಮುಳುಗಿಹೋದ ಮಕ್ಕಳಿಗೆ ಪರಿಶ್ರಮ ಎಷ್ಟು ಕಡಿಮೆ ಇರುತ್ತದೆಯೋ ಅಷ್ಟು ಇವರಿಗೆ ಇರುವುದಿಲ್ಲ. ಕೆಲವೊಮ್ಮೆ ಪರಿಶ್ರಮ, ಕೆಲವೊಮ್ಮೆ ಪ್ರೀತಿ ಎರಡರಲ್ಲಿ ಇರುತ್ತಾರೆ. ಯಾರು ಸ್ನೇಹದಲ್ಲಿ ಲವಲೀನರಾಗಿರುತ್ತಾರೆ ಅವರು ಸದಾ ತನ್ನನ್ನು ಚತ್ರಛಾಯೆಯ ಒಳಗಿರುವ ಅನುಭವ ಮಾಡುತ್ತಾರೆ. ಹೃದಯದ ಸ್ನೇಹಿ ಮಕ್ಕಳು ಕಷ್ಟವನ್ನೂ ಸಹ ಪ್ರೀತಿಯಲ್ಲಿ ಬದಲಾವಣೆ ಮಾಡುತ್ತಾರೆ. ಅವರ ಮುಂದೆ ಬೆಟ್ಟದಂತ ಸಮಸ್ಯೆಯೂ ಸಹ ಬೆಟ್ಟವಲ್ಲ, ಆದರೆ ಹತ್ತಿಯ ಸಮಾನ ಅನುಭವವಾಗುತ್ತದೆ. ಕಲ್ಲೂ ಸಹ ನೀರಿನ ಸಮಾನ ಅನುಭವ ಆಗುತ್ತದೆ. ಅಂದಾಗ ಈ ದಿನ ವಿಶೇಷ ಸ್ನೇಹದ ವಾಯುಮಂಡಲದಲ್ಲಿ ಇದ್ದು ಅನುಭವ ಮಾಡಿದ್ದೀರಿ. ಕಷ್ಟ ಅನಿಸುತ್ತದೆಯೋ, ಮನೋರಂಜನೆಯ ಅನುಭವ ಆಗಿದೆಯೋ!!

ಈ ದಿನ ಎಲ್ಲರಿಗೂ ಸ್ನೇಹದ ಅನುಭವ ಆಯಿತ್ತಲ್ಲವೇ! ಸ್ನೇಹದಲ್ಲಿ ಮುಳುಗಿ ಹೋಗಿದ್ದೀರಾ? ಎಲ್ಲರೂ ಮುಳುಗಿದ್ದೀರಾ! ಈ ದಿನ ಕಷ್ಟದ ಅನುಭವ ಆಯಿತೇ? ಯಾವುದೇ ಮಾತಿನ ಕಷ್ಟದ ಅನುಭವ ಆಯಿತೇ? ಏನು, ಏಕೆ, ಹೇಗೆ ಈ ಸಂಕಲ್ಪಗಳು ಬಂದವೇ? ಸ್ನೇಹ ಎಲ್ಲವನ್ನೂ ಮರೆಸುತ್ತದೆ. ಎಲ್ಲರೂ ಬಾಪ್ದಾದಾರವರ ಸ್ನೇಹವನ್ನು ಮರೆಯಬೇಡಿ ಎಂದು ಬಾಪ್ದಾದಾರವರು ಹೇಳುತ್ತೇವೆ. ಸ್ನೇಹದ ಸಾಗರ ಸಿಕ್ಕಿದ್ದಾರೆ. ಚೆನ್ನಾಗಿ ಸಾಗರದಲ್ಲಿ ಆಟ ಆಡಿ... ಯಾವಾಗಲಾದರೂ ಕಷ್ಟದ ಅನುಭವವಾಯಿತೇ ಏಕೆಂದರೆ ಮಾಯೆ ಮಧ್ಯ-ಮಧ್ಯದಲ್ಲಿ ಪೇಪರ್ನ್ನು ತರುತ್ತದೆ ಆದರೆ ಆ ಸಮಯದಲ್ಲಿ ಸ್ನೇಹದ ಅನುಭವವನ್ನು ನೆನಪು ಮಾಡಿಕೊಳ್ಳಿ ಆಗ ಕಷ್ಟ ಪ್ರೀತಿಯಲ್ಲಿ ಬದಲಾಗಿ ಬಿಡುತ್ತದೆ. ಅನುಭವವನ್ನು ಮಾಡಿ ನೋಡಿ. ತಪ್ಪೇನಾಗುತ್ತದೆ! ಆ ಸಮಯದಲ್ಲಿ ಏನು, ಏಕೆ...... ಇದರಲ್ಲಿ ಬಹಳಷ್ಟು ಹೊರಟು ಹೋಗಿ ಬಿಡುತ್ತೀರಿ. ಏನೆಲ್ಲಾ ಬರುತ್ತದೆ ಅದು ಹೋಗುತ್ತದೆ ಆದರೆ ಹೇಗೆ ಹೋಗುತ್ತದೆ? ಸ್ನೇಹವನ್ನು ನೆನಪು ಮಾಡುವುದರಿಂದ ಪರಿಶ್ರಮ ಹೋಗಿ ಬಿಡುತ್ತದೆ ಏಕೆಂದರೆ ಎಲ್ಲರಿಗೆ ಭಿನ್ನ-ಭಿನ್ನ ಸಮಯದಲ್ಲಿ ಬಾಪ್ದಾದಾರಿಬ್ಬರ ಸ್ನೇಹದ ಅನುಭವವಂತೂ ಇದೆಯಲ್ಲವೇ! ಅನುಭವ ಇದೆಯಲ್ಲವೇ! ಎಂದಾದರೂ ಮಾಡಿದ್ದೀರಲ್ಲವೇ? ಸದಾ ಇಲ್ಲದಿದ್ದರೂ ಕೆಲವೊಮ್ಮೆ ಆದರೂ ಮಾಡಿದ್ದೀರಲ್ಲವೇ ಆ ಸಮಯವನ್ನು ನೆನಪು ಮಾಡಿಕೊಳ್ಳಿ- ತಂದೆಯ ಸ್ನೇಹ ಏನಾಗಿದೆ! ತಂದೆಯ ಸ್ನೇಹದಿಂದ ಏನೇನು ಅನುಭವ ಮಾಡಿದ್ದೀರಿ! ಸ್ನೇಹದ ಸ್ಮೃತಿಯಿಂದ ಕಷ್ಟ ಬದಲಾವಣೆ ಆಗುತ್ತದೆ. ಏಕೆಂದರೆ ಬಾಪ್ದಾದಾರವರಿಗೆ ಯಾವುದೇ ಮಗುವಿನ ಕಷ್ಟದ ಸ್ಥಿತಿ ಇಷ್ಟವಾಗುವುದಿಲ್ಲ. ನನ್ನ ಮಕ್ಕಳು ಪರಿಶ್ರಮ ಪಡುವುದೇ! ಅಂದಾಗ ಪರಿಶ್ರಮದಿಂದ ಮುಕ್ತರು ಯಾವಾಗ ಆಗುತ್ತೀರಿ? ಸಂಗಮ ಯುಗ ಇರುವುದೇ ಎಲ್ಲಾ ಪರಿಶ್ರಮಗಳಿಂದ ಮುಕ್ತ, ಖುಷಿ-ಖುಷಿಯಲ್ಲಿ ಇರುವುದೇ ಆಗಿದೆ. ಖುಷಿ ಇಲ್ಲದಿದ್ದರೇ ಒಂದಲ್ಲ ಒಂದು ಹೊರೆ ಬುದ್ಧಿಯಲ್ಲಿ ಇದೆ. ಆ ಹೊರೆಯನ್ನು ನಮಗೆ ಕೊಟ್ಟು ಬಿಡಿ ಎಂದು ತಂದೆ ಹೇಳುತ್ತೇವೆ. ನನ್ನತನವನ್ನು ಬಿಟ್ಟು ಟ್ರಸ್ಟಿಯಾಗಿ ಬಿಡಿ. ಜವಾಬ್ದಾರಿಯನ್ನು ನನಗೆ ಕೊಟ್ಟಿ ಬಿಡಿ ಮತ್ತು ಸ್ವಯಂ ಹೃದಯದ ಸತ್ಯವಾದ ಮಕ್ಕಳಾಗಿ ತಿನ್ನಿರಿ, ಆಟ ಆಡಿ ಮತ್ತು ಖುಷಿಯನ್ನು ಆಚರಿಸಿ ಏಕೆಂದರೆ ಸಂಗಮಯುಗ ಎಲ್ಲಾ ಯುಗಗಳಿಗಿಂತಲೂ ಸಂತೋಷದಿಂದಿರುವ ಯುಗವಾಗಿದೆ. ಈ ಮೋಜಿನ ಯುಗದಲ್ಲಿಯೂ ಸಹ ಖುಷಿಯನ್ನು ಆಚರಿಸುವುದಿಲ್ಲವೆಂದರೆ ಮತ್ತೆ ಯಾವಾಗ ಖುಷಿಯಲ್ಲಿ ಇರುತ್ತೀರಿ! ಬಾಪ್ದಾದಾರವರು ಯಾವಾಗ ನೋಡುತ್ತೇವೋ ಮಕ್ಕಳು ಹೊರೆಯನ್ನು ಹೊತ್ತುಕೊಂಡು ಬಹಳಷ್ಟು ಶ್ರಮ ಪಡುತ್ತಿರುತ್ತಾರೆ. ಹೊರೆಯನ್ನು ಕೊಡುವುದಿಲ್ಲ, ತಾವೇ ಹೊತ್ತುಕೊಂಡಿರುತ್ತಾರೆ. ಆಗ ತಂದೆಗೆ ಕನಿಕರ ಬರುತ್ತದೆಯಲ್ಲವೇ, ದಯೆ ಬರುತ್ತದೆಯಲ್ಲವೇ, ಖುಷಿಯಲ್ಲಿ ಇರುವ ಸಮಯದಲ್ಲಿ ಪರಿಶ್ರಮ ಪಡುವುದೇ! ಸ್ನೇಹದಲ್ಲಿ ಮುಳುಗಿ ಹೋಗಿ. ಸ್ನೇಹದ ಸಮಯವನ್ನು ನೆನಪು ಮಾಡಿ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ವಿಶೇಷ ಸ್ನೇಹದ ಅನುಭವ ಆಗಿಯೇ ಆಗುತ್ತದೆ, ಆಗಿಯೇ ಇದೆ. ಮಕ್ಕಳಿಗೆ ಈ ರೀತಿಯ ಅನುಭವ ಆಗಿದೆ ಎಂದು ತಂದೆಗೆ ತಿಳಿದಿದೆ ಆದರೆ ಅದನ್ನು ನೆನಪು ಮಾಡುವುದಿಲ್ಲ. ಕಷ್ಟವನ್ನೇ ನೋಡುತ್ತಿರುತ್ತಾರೆ, ತಬ್ಬಿಬ್ಬಾಗುತ್ತಿರುತ್ತಾರೆ. ಒಂದುವೇಳೆ ಈ ದಿನವೂ ಸಹ ಅಮೃತವೇಳೆಯಿಂದ ಇದುವರೆಗೆ ಮನ ತುಂಬಿ ಬಾಪ್ದಾದಾ ಇಬ್ಬರ ಅಥಾರಿಟಿಯ ಸ್ನೇಹದ ಅನುಭವ ಮಾಡಿದ್ದೇ ಆದರೆ ಈ ದಿನವನ್ನೂ ಸಹ ನೆನಪು ಮಾಡುವುದರಿಂದ ಸ್ನೇಹದ ಮುಂದೆ ಪರಿಶ್ರಮ ಸಮಾಪ್ತಿ ಆಗಿ ಬಿಡುತ್ತದೆ.

ಈಗ ಬಾಪ್ದಾದಾ ಈ ವರ್ಷದಲ್ಲಿ ಪ್ರತಿಯೊಂದು ಮಗುವಿಗೆ ಸ್ನೇಹಯುಕ್ತ, ಪರಿಶ್ರಮದಿಂದ ಮುಕ್ತರಾಗಿ ಇರುವುದನ್ನು ಬಯಸುತ್ತೇವೆ. ಪರಿಶ್ರಮದ ಹೆಸರು-ಗುರುತು ನಿಮ್ಮ ಹೃದಯದಲ್ಲಿ ಇರಬಾರದು. ಜೀವನದಲ್ಲಿ ಇರಬಾರದು. ಸಾಧ್ಯ ವಿದೆಯೇ? ಸಾಧ್ಯವಿದೆಯೇ? ಯಾರು ಮಾಡಿಯೇ ಮಾಡುತ್ತೇವೆ ಎಂದು ತಿಳಿಯುತ್ತಾರೆ, ಸಾಹಸವಂತರಿದ್ದೀರಿ ಅವರು ಕೈ ಎತ್ತಿರಿ. ಈ ದಿನ ವಿಶೇಷವಾಗಿ ಇಂತಹ ಪ್ರತಿಯೊಬ್ಬ ಮಗುವಿಗೆ ಪರಿಶ್ರಮದಿಂದ ಮುಕ್ತರಾಗುವ ತಂದೆಯ ವಿಶೇಷ ವರದಾನವಿದೆ. ಒಪ್ಪಿಗೆಯೇ? ನಂತರ ಏನಾದರೂ ಆದರೆ ಏನು ಮಾಡುತ್ತೀರಿ! ಏನು, ಏಕೆ ಎಂದು ಹೇಳುವುದಿಲ್ಲ ತಾನೇ? ಪ್ರೀತಿಯ ಸಮಯವನ್ನು ನೆನಪು ಮಾಡಬೇಕು. ಅನುಭವವನ್ನು ನೆನಪು ಮಾಡಬೇಕು ಮತ್ತು ಅನುಭವದಲ್ಲಿ ಮುಳುಗಿ ಹೋಗಬೇಕು. ತಮ್ಮದು ಪ್ರತಿಜ್ಞೆ ಇದೆಯಲ್ಲವೇ. ತಂದೆಯೂ ಸಹ ಮಕ್ಕಳೊಂದಿಗೆ ಪ್ರಶ್ನೆಯನ್ನು ಕೇಳುತ್ತೇವೆ. ತಮ್ಮೆಲ್ಲರ ಪ್ರತಿಜ್ಞೆಯಾಗಿದೆ ನಾವು ತಂದೆಯ ಮೂಲಕ 21 ಜನ್ಮದವರೆಗೆ ಜೀವನ್ಮುಕ್ತಿ ಸ್ಥಿತಿಯ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ, ಮಾಡಿಯೇ ಬಿಡುತ್ತೇವೆ. ಆಗ ಜೀವನ್ಮುಕ್ತಿಯಲ್ಲಿ ಪರಿಶ್ರಮವಿರುತ್ತದೆಯೇನು? 21 ಜನ್ಮಗಳಲ್ಲಿ 1 ಜನ್ಮ ಸಂಗಮಯುಗದ್ದಾಗಿದೆ. ತನ್ನ ವಾಯಿದೆ 21 ಜನ್ಮಗಳದ್ದು, 20 ಜನ್ಮಗಳದ್ದಲ್ಲ. ಈಗಿನಿಂದ ಪರಿಶ್ರಮದಿಂದ ಮುಕ್ತ ಅರ್ಥಾತ್ ಜೀವನ್ಮುಕ್ತ, ನಿಶ್ಚಿಂತ ಚಕ್ರವರ್ತಿಗಳು. ಈಗಿನ ಸಂಸ್ಕಾರ ಆತ್ಮನಲ್ಲಿ 21 ಜನ್ಮದವರೆಗೂ ಪ್ರತ್ಯಕ್ಷವಾಗಿರುತ್ತದೆ ಅಂದಾಗ 21 ಜನ್ಮದವರೆಗೆ ಆಸ್ತಿಯನ್ನು ತೆಗೆದುಕೊಂಡಿದ್ದೀರಲ್ಲವೇ! ಅಥವಾ ಈಗ ತೆಗೆದುಕೊಳ್ಳಬೇಕೋ! ಅಟೇಂನ್ಷನ್ ಪ್ಲೀಸ್. ಪರಿಶ್ರಮದಿಂದ ಮುಕ್ತ ಸಂತುಷ್ಟರಾಗಿ ಮತ್ತು ಸಂತುಷ್ಟರನ್ನಾಗಿ ಮಾಡಿ. ಕೇವಲ ಇರುವುದಲ್ಲ ಮಾಡಲೂಬೇಕಾಗಿದೆ, ಆಗ ಪರಿಶ್ರಮದಿಂದ ಮುಕ್ತರಾಗುತ್ತೀರಿ. ಇಲ್ಲವೆಂದರೆ ನಿತ್ಯವೂ ಒಂದಲ್ಲ ಒಂದು ಹೊರೆಯ ಮಾತು ಪರಿಶ್ರಮದ ಮಾತು ಏನು, ಏಕೆ ಎಂಬ ಭಾವನೆಯಲ್ಲಿ ಬರುತ್ತದೆ. ಈಗ ಸಮಯದ ಸಮೀಪತೆಯನ್ನು ನೋಡುತ್ತಿದ್ದೀರಿ. ಹೇಗೆ ಸಮಯ ಸಮೀಪ ಬರುತ್ತಿದೆ ಹಾಗೆಯೇ ತಮಗೆಲ್ಲರಿಗೂ ಸಹ ತಂದೆಯ ಜೊತೆ ಸಮೀಪತೆಯ ಅನುಭವ ಹೆಚ್ಚಾಗುತ್ತಿರಬೇಕಲ್ಲವೇ. ತಂದೆಯೊಂದಿಗೆ ತಾವು ಸಮೀಪರಾಗುವುದರಿಂದ ಸಮಯದ ಸಮೀಪತೆಯನ್ನು ಸಮಾಪ್ತಿ ಮಾಡುತ್ತದೆ. ತಾವೆಲ್ಲಾ ಮಕ್ಕಳಿಗೆ, ಆತ್ಮಗಳ ದುಃಖ-ಅಶಾಂತಿಯ ಕೂಗು ಕಿವಿಗಳಿಗೆ ಕೇಳಿ ಬರುವುದಿಲ್ಲವೇ! ತಾವೇ ಪೂರ್ವಜರು ಆಗಿದ್ದೀರಿ, ಪೂಜ್ಯರೂ ಸಹ ಆಗಿದ್ದೀರಿ ಅಂದಾಗ ಹೇ ಪೂರ್ವಜ ಆತ್ಮರೇ, ಹೇ ಪೂಜ್ಯ ಆತ್ಮರೇ ಯಾವಾಗ ವಿಶ್ವ ಕಲ್ಯಾಣದ ಕಾರ್ಯವನ್ನು ಸಂಪನ್ನ ಮಾಡುತ್ತೀರಿ?

ಪ್ರತಿಯೊಂದು ವರ್ಗದವರು ತಮ್ಮ-ತಮ್ಮ ಮೀಟಿಂಗ್ ಮಾಡುತ್ತಾರೆ, ಪ್ಲಾನ್ ಮಾಡುತ್ತಾರೆ, ವಿಶ್ವ ಕಲ್ಯಾಣದ ಕಾರ್ಯವನ್ನು ತೀವ್ರವಾಗಿ ಹೇಗೆ ಮಾಡುವುದು ಎಂಬುದನ್ನು ಬಾಪ್ದಾದಾರವರು ನೋಡಿದ್ದೇವೆ. ಬಹಳ ಒಳ್ಳೊಳ್ಳೆಯ ಪ್ಲಾನ್ನ್ನು ಮಾಡುತ್ತೀರಿ ಆದರೆ ಬಾಪ್ದಾದಾ ಇದು ಎಲ್ಲಿಯವರೆಗೆ ಮಾಡುತ್ತೀರಿ ಎಂದು ಕೇಳುತ್ತೇವೆ. ಇದರ ಉತ್ತರವನ್ನು ದಾದಿಯವರು ಕೊಡುತ್ತಾರಾ - ಇದೆಲ್ಲವೂ ಎಲ್ಲಿಯತನಕ? ಪಾಂಡವರು ಉತ್ತರ ಕೊಡುತ್ತೀರಾ? ಇದೆಲ್ಲವೂ ಎಲ್ಲಿಯ ತನಕ? ತಂದೆಯ ಪ್ರತ್ಯಕ್ಷತೆ ಆಗಲಿ ಎಂಬುವ ಉದ್ದೇಶವನ್ನು ಕುರಿತು ಎಲ್ಲಾ ವರ್ಗದವರು ಪ್ಲಾನ್ ಮಾಡುತ್ತೀರಿ, ಆದರೆ ದೃಢ ಪ್ರತಿಜ್ಞೆಯಿಂದ ಪ್ರತ್ಯಕ್ಷತೆ ಆಗುತ್ತದೆ. ಪ್ರತಿಜ್ಞೆಯಲ್ಲಿ ದೃಢತೆ. ಯಾವುದೇ ಕಾರಣದಿಂದ ಅಥವಾ ಮಾತಿನಿಂದ ದೃಢತೆ ಕಡಿಮೆ ಆಗಿ ಬಿಡುತ್ತದೆ. ಬಹಳ ಒಳ್ಳೆಯ ಪ್ರತಿಜ್ಞೆ ಮಾಡುತ್ತೀರಿ. ಅಮೃತವೇಳೆ ಒಂದುವೇಳೆ ತಾವು ಸಹ ಕೇಳಬಹುದು. ತಂದೆಯಂತೂ ಕೇಳುತ್ತೇವೆ. ಈಗ ಹೃದಯದ ಮಾತನ್ನು ಕೇಳುವಂತಹ ಸಾಧನವನ್ನು ವಿಜ್ಞಾನದವರು ಕೊಟ್ಟಿಲ್ಲ. ಬಾಪ್ದಾದಾರವರು ಕೇಳುತ್ತೇವೆ - ಪ್ರತಿಜ್ಞೆಯ ಮಾಲೆ ಸಂಕಲ್ಪ ಮಾಡುವ ಮಾತುಗಳು ಎಷ್ಟು ಒಳ್ಳೊಳ್ಳೆಯ ಮಾತುಗಳು ಹೃದಯಕ್ಕೆ ಸಂತೋಷವನ್ನು ಉಂಟು ಮಾಡುವ ಮಾತುಗಳಾಗಿರುತ್ತವೆ. ಇದನ್ನು ಕೇಳಿ ಬಾಪ್ದಾದಾ ವಾಹ್! ಮಕ್ಕಳೇ ವಾಹ್! ಎನ್ನುತ್ತಾರೆ. ಏನೇನು ಮಾಡುತ್ತೀರಿ ಎಂದು ಹೇಳಲೇನು! ಯಾವಾಗ ಕರ್ಮದಲ್ಲಿ ಬರುತ್ತೀರಿ, ಮುರಳಿ ಕೇಳುವವರೆವಿಗೂ 75% ಸರಿಯಾಗಿರುತ್ತದೆ, ಆದರೆ ಯಾವಾಗ ಕರ್ಮ ಯೋಗದಲ್ಲಿ ಬರುತ್ತೀರೋ ಅದರಲ್ಲಿ ವ್ಯತ್ಯಾಸ ಆಗಿ ಬಿಡುತ್ತದೆ. ಕೆಲವು ಸಂಸ್ಕಾರ, ಕೆಲವು ಸ್ವಭಾವ ಮತ್ತು ಸಂಸ್ಕಾರ ಎದುರಾಗುತ್ತವೆ. ಅದರಲ್ಲಿ ಪ್ರತಿಜ್ಞೆಯ ದೃಢತೆಗೆ ಬದಲಾಗಿ ಸಾಧಾರಣವಾಗಿ ಬಿಡುತ್ತದೆ. ದೃಢತೆಯ ಪರ್ಸೆಂಟ್ ಕಡಿಮೆ ಆಗಿ ಬಿಡುತ್ತದೆ.

ಬಾಪ್ದಾದಾರವರು ಮಕ್ಕಳ ಒಂದು ಆಟವನ್ನು ನೋಡು ಮುಗುಳ್ನಗುತ್ತೇವೆ. ಯಾವ ಆಟ ಆಡುತ್ತೀರಿ? ಹೇಳಲೇನು? ಹೇಳುವುದಾ? ಯಾವಾಗ ಈ ಆಟವನ್ನು ಸಮಾಪ್ತಿ ಮಾಡುತ್ತೀರೋ ಆಗ ಹೇಳುತ್ತೇವೆ. ಮಾಡುತ್ತೀರಾ, ಮಾಡುತ್ತೀರಾ? ಈ ದಿನ ಸ್ನೇಹದ ಶಕ್ತಿ ಇದೆಯಲ್ಲವೇ. ಮಾಡುತ್ತೀರಾ? ಕೈ ಎತ್ತಿರಿ. ಕೇವಲ ಕೈ ಅಲ್ಲ, ಹೃದಯದ ಕೈಯನ್ನು ಎತ್ತಿ, ಮಾಡಲೇಬೇಕಾಗುತ್ತದೆ. ಸ್ವಲ್ಪ-ಸ್ವಲ್ಪ ಏನಾದರೂ ಮಾಡುತ್ತೇವೆ ಎನ್ನುತೀರಾ. ಹೇಳಿ? ಪಾಂಡವರು ಹೇಳಿ. ಹೇಳಿ? ಮೊದಲನೇ ಲೈನಿನವರು ಹೇಳುವುದೇ? ಹೇಳುವುದೇ. ನಂತರ ನೀವು ಮಾಡಬೇಕಾಗುತ್ತದೆ. ಹೇಳುವುದೇ? ಒಂದುವೇಳೆ ಹೌದು ಎನ್ನುವವರಿದ್ದರೇ, ಮೊದಲನೇ ಲೈನಿನವರು ಕೈ ಎತ್ತಿರಿ, 2ನೇ ಲೈನಿನವರು ಕೈ ಎತ್ತಿರಿ, ಮಧುಬನದವರೂ ಸಹ ಕೈ ಎತ್ತಿರಿ, ಹೃದಯದ ಕೈಯನ್ನು ಎತ್ತಿರಿ. ಬಾಪ್ದಾದಾರವರಿಗೆ ಆಟವನ್ನು ನೋಡಿದಾಗ ದಯೆ ಬರುತ್ತದೆ, ಖುಷಿ ಆಗುವುದಿಲ್ಲ. ಏಕೆಂದರೆ ಬಾಪ್ದಾದಾ ನೋಡುತ್ತೇವೆ - ಮಕ್ಕಳು ತನ್ನ ಮಾತನ್ನು ಬೇರೆಯವರ ಮೇಲೆ ಹಾಕುವುದರಲ್ಲಿ ಬಹಳ ಚತುರರಾಗಿದ್ದಾರೆ. ಯಾವ ಆಟವನ್ನು ಆಡುತ್ತಾರೆ? ಮಾತುಗಳನ್ನು ಆಡುತ್ತಾರೆ. ಯಾರು ನೋಡುವವರಿದ್ದಾರೆ! ನನಗೆ ಗೊತ್ತು, ನನ್ನ ಹೃದಯಕ್ಕೆ ಗೊತ್ತು ಎಂದು ಯೋಚಿಸುತ್ತಾರೆ. ತಂದೆ ಪರಮಧಾಮದಲ್ಲಿ, ಸೂಕ್ಷ್ಮವತನದಲ್ಲಿ ಕುಳಿತಿದ್ದಾರೆ. ಒಂದುವೇಳೆ ಯಾರಿಗಾದರೂ ಇದನ್ನು ಮಾಡಬಾರದು ಎಂದು ಹೇಳಿದರೆ ಯಾವ ಆಟ ಆಡುತ್ತಾರೆ ಗೊತ್ತಿದೆಯೇ? ಆಗಿದೆ, ಆದರೆ........... ಆದರೆ ಎಂಬ ಮಾತನ್ನು ಅವಶ್ಯವಾಗಿ ಹಾಕುತ್ತಾರೆ. ಆದರೆ ಏನು? ಈ ರೀತಿ ಇತ್ತಲ್ಲವೇ, ಈ ರೀತಿ ಮಾಡಿದರಲ್ಲವೇ, ಈ ರೀತಿ ಆಗುತ್ತದೆಯಲ್ಲವೇ, ಅದಕ್ಕೆ ಆಯಿತು ನಾನು ಮಾಡಲಿಲ್ಲ. ಅದಕ್ಕೆ ಆಯಿತು, ಈಗ ಇವರು ಮಾಡಿದ್ದಾರೆ ಅದಕ್ಕೆ ನಾನು ಮಾಡಿದೆ, ಇಲ್ಲದಿದ್ದರೇ ನಾನು ಮಾಡುತ್ತಿರಲಿಲ್ಲ. ಅಂದಾಗ ಇದು ಏನಾಯಿತು? ತನಗೆ ಮನಗಾಣುವುದು, ತನ್ನನ್ನು ಅರ್ಥ ಮಾಡಿಕೊಳ್ಳುವುದರ ಕೊರತೆ ಇದೆ. ಒಳ್ಳೆಯದು, ಅವರು ಹಾಗೆ ಮಾಡಿದರು ಎಂದು ತಿಳಿಯಿರಿ. ಅದಕ್ಕಾಗಿಯೇ ನೀವು ಮಾಡಿದಿರಿ, ಬಹಳ ಒಳ್ಳೆಯದು. ಮೊದಲ ನಂಬರ್ ಅವರಾದರು, ಎರಡನೇಯ ನಂಬರ್ ನೀವಾದಿರಿ, ಸರಿಯೇ. ಬಾಪ್ದಾದಾರವರು ಸಹ ಇದನ್ನು ಒಪ್ಪುತ್ತಾರೆ. ನೀವು ಮೊದಲನೆಯ ನಂಬರ್ ನವರು ಅಲ್ಲ. ಎರಡನೆಯ ನಂಬರ್ ನವರು ಆಗಿದ್ದೀರಿ, ಆದರೆ ಒಂದು ವೇಳೆ ನೀವು ಮೊದಲನೆಯ ನಂಬರ್ನವರು ಪರಿವರ್ತನೆ ಮಾಡಿಕೊಂಡರೆ ನಾನು ಸರಿ ಹೋಗುತ್ತೇನೆ ಎಂದು ಯೋಚಿಸಿದರೆ ಅದು ಸರಿಯೇ? ಆ ಸಮಯದಲ್ಲಿ ಹೀಗಿಯೇ ಯೋಚಿಸುತ್ತೀರಲ್ಲವೇ. ಮೊದಲನೆಯ ನಂಬರ್ನವರು ಪರಿವರ್ತನೆ ಆಗುತ್ತಾರೆಂದು ತಿಳಿಯಿರಿ ಬಾಪ್ದಾದಾರವರು ಎಲ್ಲಾ ಮೊದಲನೆಯ ನಂಬರ್ನವರಿಗೆ ಹೇಳುತ್ತಾರೆ. ತಮ್ಮದೇ ತಪ್ಪು, ನೀವು ಪರಿವರ್ತನೆ ಮಾಡಿಕೊಳ್ಳಬೇಕೆಂದು ಹೇಳುತ್ತಾರೆ, ಸರಿಯೇ. ಒಂದುವೇಳೆ ಮೊದಲನೆಯ ನಂಬರ್ನವರು ಪರಿವರ್ತನೆ ಮಾಡಿಕೊಂಡರೆ ಮೊದಲನೆಯ ನಂಬರ್ ಯಾರಿಗೆ ಸಿಗುತ್ತದೆ? ತಮಗಂತೂ ಮೊದಲನೆಯ ನಂಬರ್ ಸಿಗುವುದಿಲ್ಲ. ಪರಿವರ್ತನೆ ಶಕ್ತಿಯಲ್ಲಿ ತಮ್ಮದು ಮೊದಲನೆಯ ನಂಬರ್ ಇರುವುದಿಲ್ಲ. ನೀವೇ ಅವರಿಗೆ ಮೊದಲ ನಂಬರ್ ಅನ್ನು ನೀಡಿದಿರಿ. ಅಂದಮೇಲೆ ನಿಮ್ಮ ನಂಬರ್ ಯಾವುದು? ಎರಡನೆಯದಾಯಿತಲ್ಲವೇ. ಒಂದುವೇಳೆ ತಮಗೆ ಎರಡನೆಯ ನಂಬರ್ ಎಂದು ಹೇಳಿದರೆ ನಿಮಗೆ ಒಪ್ಪಿಗೆಯೇ. ಒಪ್ಪಿಗೆಯೇ? ಆಗ ಇಲ್ಲ ಹಾಗಿತ್ತು, ಹೀಗಿತ್ತು........ ಈ ಭಾವನೆ ಬಹಳ ಬರುತ್ತದೆ. ಹಾಗೆ, ಹೀಗೆ ಹೇಗೆ ಈ ಆಟವನ್ನು ಬಂದ್ ಮಾಡಿ ನಾನು ಪರಿವರ್ತನೆ ಆಗಬೇಕು. ನಾನು ಪರಿವರ್ತನೆ ಆಗಿ ಅನ್ಯರನ್ನು ಪರಿವರ್ತನೆ ಮಾಡಬೇಕು, ಒಂದುವೇಳೆ ಅನ್ಯರನ್ನು ಪರಿವರ್ತನೆ ಮಾಡಲಾಗದಿದ್ದರೆ ಶುಭ ಭಾವನೆ, ಶುಭ ಕಾಮನೆಯನ್ನಂತೂ ಇಡಬಹುದಲ್ಲ. ಇದಂತೂ ನಿಮ್ಮದೇ ವಸ್ತುವಾಗಿದೆಯಲ್ಲವೇ! ಅಂದಮೇಲೆ ಹೇ ಅರ್ಜುನ ನಾನೇ ಆಗಬೇಕು. ಮೊದಲ ವಿಶ್ವ ಮಹಾರಾಜನ್ ಲಕ್ಷ್ಮೀ-ನಾರಾಯಣರ ಸಮೀಪ ನೀವೇ ಬರಬೇಕೋ ಎರಡನೆಯ ನಂಬರ್ನವರೋ?

ಈ ವರ್ಷಕ್ಕಾಗಿ ಎಲ್ಲಾ ಬ್ರಾಹ್ಮಣ ಆತ್ಮಗಳು, ಬ್ರಹ್ಮಾಕುಮಾರ/ರಿಯರ ಪ್ರತಿ ಬಾಪ್-ದಾದಾರವರ ಆಸೆ ಏನಾಗಿದೆ ಎಂದರೆ, ಹೇಗೆ ಇಲ್ಲಿ ಬ್ಯಾಡ್ಜನ್ನು ಹಾಕಿಕೊಳ್ಳುತ್ತೀರಲ್ಲವೇ, ಎಲ್ಲರೂ ಹಾಕಿಕೊಳ್ಳುತ್ತೀರಲ್ಲವೇ! ಇಲ್ಲಿ ಬಂದಾಗಲೂ ಸಹ ಕಾಗದದ ಬ್ಯಾಡ್ಜ ಇರಬಹುದು ಭಲೇ ಚಿನ್ನದ ಅಥವಾ ಬೆಳ್ಳಿಯ ಬ್ಯಾಡ್ಜ ಇರಬಹುದು. ಹೇಗೆ ಇಲ್ಲಿ ಬ್ಯಾಡ್ಜನ್ನು ಹಾಕಿಕೊಳ್ಳುತ್ತೀರೋ ಅದೇ ರೀತಿ ಹೃದಯದಲ್ಲಿ, ಮನಸ್ಸಿನಲ್ಲಿ ನಾನು ಪರಿವರ್ತನೆ ಆಗಬೇಕೆಂಬ ಬ್ಯಾಡ್ಜನ್ನು ಹಾಕಿಕೊಳ್ಳಬೇಕು. ನಾನು ನಿಮಿತ್ತ ಆಗಬೇಕು. ಪರಿವರ್ತನೆಯ ಕಾರ್ಯದಲ್ಲಿ ಬ್ರಹ್ಮಾ ತಂದೆಯ ಸಮಾನ ಮೊದಲು ನಾನು. ವ್ಯರ್ಥ ಮಾತುಗಳಲ್ಲಿ, ಅನ್ಯ ಮಾತುಗಳಲ್ಲಿ ಭಲೇ ಹಿಂದಿರಿ, ಆದರೆ ಪರಿವರ್ತನೆಯಲ್ಲಿ ಮೊದಲು ನಾನು. ಸರಿ ತಾನೇ? ಅಂದಮೇಲೆ ನಾಳೆ ಅಮೃತವೇಳೆ ಬಾಪ್ದಾದಾ ನೋಡುತ್ತಾರೆ, ಬಾಪ್ದಾದಾರವರಿಗೆ ಸ್ವಿಚ್ ಅನ್ ಮಾಡಿದರೆ ಸಾಕು ಇಡೀ ವಿಶ್ವವು ಕಾಣಿಸುತ್ತದೆ. ನೋಡಲು ನಿಧಾನವೇನು ಆಗುವುದಿಲ್ಲ. ನಾಳೆ ಅಮೃತವೇಳೆ ಎಲ್ಲರೂ ತಂದೆಯನ್ನು ಮಿಲನ ಮಾಡುತ್ತೀರಲ್ಲವೇ? ಮಿಲನ ಮಾಡುತ್ತಾ ಈ ಬ್ಯಾಡ್ಜನ್ನು ಹಾಕಿಕೊಳ್ಳಿ. ಪ್ರಾಕ್ಟಿಕಲ್ ಆಗಿ ಯಾರು ಈ ಬ್ಯಾಡ್ಜನ್ನು ತೊಡುತ್ತಾರೆಂದು ನೋಡುತ್ತೇನೆ. ಶೋಕಿಗಾಗಿ ಹಾಕಿಕೊಳ್ಳುವುದಲ್ಲ, ಪರಿವರ್ತನೆ ಆಗಲೇಬೇಕು. ದೃಢತೆ ಇದೆಯಲ್ಲವೇ. ದೃಢವಾಗಿದ್ದರಲ್ಲವೇ! ಎಲ್ಲರೂ ಕೈ ಎತ್ತುತ್ತೀರಲ್ಲವೇ, ಆಗ ಬಾಪ್ದಾದಾರವರಿಗೆ ಮಾಡುತ್ತಾರೋ ಮಾಡುವುದಿಲ್ಲವೋ ಎಂದು ಸ್ವಲ್ಪ ಅನಿಸುತ್ತದೆ. ಇದು ಸಹ ಒಳ್ಳೆಯದೆ. ಕೈ ಎತ್ತುತ್ತೀರೆಂದರೆ ಒಂದು ಸೆಕೆಂಡಂತೂ ಒಳ್ಳೆಯ ಸಂಕಲ್ಪವನ್ನು ಮಾಡಿದಿರಿ. ಆದರೆ ಮಾಡಿಯೇ ಬಿಡಬೇಕು. ನಾನು ಬದಲಾಗಬೇಕು, ಬದಲಾಗಿ ಬದಲಾವಣೆ ಮಾಡಬೇಕು. ಇವರು ಬದಲಾಗಲಿ, ಈ ವಿಷಯ ಬದಲಾಗಲಿ, ಈ ವ್ಯಕ್ತಿಯು ಬದಲಾಗಲಿ, ಈ ಪರಿಸ್ಥಿಯು ಬದಲಾಗಲಿ ಎಂದಲ್ಲ. ನಾನು ಬದಲಾಗಬೇಕು. ಪರಿಸ್ಥಿತಿಗಳಂತೂ ಬರುತ್ತವೆ, ತಾವು ಶ್ರೇಷ್ಠರಾಗುತ್ತಿದ್ದೀರಿ, ಶ್ರೇಷ್ಠ ಸ್ಥಿತಿಯಲ್ಲಿ ಸಮಸ್ಯೆಗಳು ಸಹ ದೊಡ್ಡದಾಗಿ ಬರುತ್ತದೆಯಲ್ಲವೇ! ಆದರೆ ಹೇಗೆ ಇಂದು ನಂಬರ್ ವಾರ್ ಯಾಥಾಶಕ್ತಿ ಸ್ನೇಹದ ಸ್ಥಿತಿಯ ವಾಯುಮಂಡಲವಿತ್ತೋ ಹಾಗೆಯೇ ತಮ್ಮ ಮನಸ್ಸನ್ನು ಸಹ ಸ್ನೇಹದಲ್ಲಿ ಸದಾ ಲವಲೀನರಾಗಿರುವ ವಾಯುಮಂಡಲ ಸದಾ ಇಮರ್ಜ್ ಆಗಿ ಇಟ್ಟುಕೊಳ್ಳಿ.

ಬಾಪ್ದಾದಾರವರ ಬಳಿ ಬಹಳ ಒಳ್ಳೊಳ್ಳೆಯ ಸಮಾಚಾರ ಬರುತ್ತದೆ. ಸಂಕಲ್ಪದ ವರೆಗೂ ಬಹಳ ಚೆನ್ನಾಗಿದೆ. ಸ್ವರೂಪದಲ್ಲಿ ಬರುವಾಗ ಯಥಾ ಶಕ್ತಿಯಾಗಿ ಬಿಡುತ್ತಾರೆ. ಈಗ ಎರಡು ನಿಮಿಷಕ್ಕೋಸ್ಕರ ಎಲ್ಲರೂ ಪರಮಾತ್ಮ ಸ್ನೇಹ, ಸಂಗಮಯುಗದ ಆತ್ಮಿಕ ಮೌಜಿನ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. (ಡ್ರಿಲ್) ಒಳ್ಳೆಯದು ಇದೇ ಅನುಭವವನ್ನು ಮತ್ತೆ ಮತ್ತೆ ಪ್ರತಿ ದಿನವೂ ಸಮಯ ಪ್ರತಿ ಸಮಯ ಅನುಭವ ಮಾಡುತ್ತಾ ಇರಿ, ಸ್ನೇಹವನ್ನು ಬಿಡಬೇಡಿ. ಸ್ನೇಹದಲ್ಲಿ ಮುಳುಗಿ ಹೋಗುವುದನ್ನು ಕಲಿಯಿರಿ. ಒಳ್ಳೆಯದು.

ಎಲ್ಲಾ ಕಡೆಯ ಯೋಗಯುಕ್ತ, ಯುಕ್ತಿಯುಕ್ತ, ರಹಸ್ಯಯುಕ್ತ, ಸ್ವಯಂ ರಹಸ್ಯವನ್ನು ತಿಳಿದುಕೊಂಡು ಸದಾ ಸಂತುಷ್ಟರನ್ನಾಗಿ ಮಾಡುವಂತಹ ಮತ್ತು ಸಂತುಷ್ಟರಾಗಿರುವಂತಹ ಕೇವಲ ಸಂತುಷ್ಟರಾಗಿರುವಂತಹವರಲ್ಲ ಸಂತುಷ್ಟರನ್ನಾಗಿ ಮಾಡುವಂತಹವರು ಸಹ, ಇಂತಹ ಸ್ನೇಹದ ಸಾಗರದಲ್ಲಿ ಲವಲೀನರಿರುವಂತಹ ಮಕ್ಕಳಿಗೆ, ಸದಾ ತಂದೆಯ ಸಮಾನ ಆಗುವ ತೀವ್ರ ಪುರುಷಾರ್ಥಿ ಮಕ್ಕಳಿಗೆ ಸದಾ ಅಸಂಭವವನ್ನು ಸಹ ಸಹಜ ಸಂಭವ ಮಾಡುವಂತಹ ಶ್ರೇಷ್ಟ ಆತ್ಮರಿಗೆ, ಸದಾ ತಂದೆಯ ಜೊತೆಯಲ್ಲಿರುವ ಮತ್ತು ತಂದೆಯ ಸೇವೆಯಲ್ಲಿ ಜೊತೆಗಾರರಾಗಿರುವಂತಹ ಬಹಳ ಬಹಳ ಲವಲೀನ ಮತ್ತು ಲವಲೀ ಮಕ್ಕಳಿಗೆ ಇಂದು ಅವ್ಯಕ್ತ ದಿವಸದ, ಅವ್ಯಕ್ತ ಫರಿಸ್ಥೆ ಸ್ವರೂಪದ ನೆನಪು ಪ್ರೀತಿ ಮತ್ತು ಹೃದಯದ ಆಶೀರ್ವಾದಗಳು, ಒಳ್ಳೆಯದು.

ವರದಾನ:
ನೆನಪಿನ ಜಾಧೂ ಮಂತ್ರದ ಮುಖಾಂತರ ಸರ್ವ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸಿದ್ಧಿ ಸ್ವರೂಪ ಭವ.

ತಂದೆಯ ನೆನಪೇ ಜಾದೂವಿನ ಮಂತ್ರವಾಗಿದೆ, ಈ ಜಾದೂವಿನ ಮಂತ್ರದ ಮುಖಾಂತರ ಯಾವ ಸಿದ್ಧಿ ಬೇಕು ಆ ಪ್ರಾಪ್ತಿಯನ್ನು ಪಡೆಯಬಲ್ಲಿರಿ. ಹೇಗೆ ಸ್ಥೂಲದಲ್ಲಿಯೂ ಸಹಾ ಯಾವುದೇ ಕಾರ್ಯದ ಸಿದ್ಧಿಗಾಗಿ ಮಂತ್ರವನ್ನು ಜಪಿಸುತ್ತಾರೆ, ಅದೇ ರೀತಿ ಇಲ್ಲಿಯೂ ಸಹಾ ಒಂದುವೇಳೆ ಯಾವುದೇ ಕಾರ್ಯದಲ್ಲಿ ಸಿದ್ಧಿ ಪಡೆಯಬೇಕಾದರೆ ಈ ನೆನಪಿನ ಮಹಾ ಮಂತ್ರವೇ ವಿಧಿ ಸ್ವರೂಪವಾಗಿದೆ. ಈ ಜಾದೂ ಮಂತ್ರ ಸೆಕೆಂಡ್ ನಲ್ಲಿ ಪರಿವರ್ತನೆ ಮಾಡಿ ಬಿಡುವುದು. ಇದನ್ನು ಸದಾ ಸ್ಮತಿಯಲ್ಲಿಟ್ಟುಕೊಳ್ಳಿ ಆಗ ಸದಾ ಸಿದ್ಧಿ ಸ್ವರೂಪರಾಗಿ ಬಿಡುವಿರಿ ಏಕೆಂದರೆ ನೆನಪಿನಲ್ಲಿರುವುದು ದೊಡ್ಡ ಮಾತಲ್ಲಾ, ಸದಾ ನೆನಪಿನಲ್ಲಿರಬೇಕು-ಇದೇ ದೊಡ್ಡ ಮಾತಾಗಿದೆ, ಇದರಿಂದಲೇ ಸರ್ವ ಸಿದ್ಧಿಗಳು ಪ್ರಾಪ್ತಿಯಾಗುವುದು.

ಸ್ಲೋಗನ್:
ಸೆಕೆಂಡ್ನಲ್ಲಿ ವಿಸ್ತಾರವನ್ನು ಸಾರ ರೂಪದಲ್ಲಿ ಸಮಾವೇಶ ಮಾಡಿಕೊಳ್ಳುವುದು ಅರ್ಥಾತ್ ಅಂತಿಮ ಸರ್ಟಿಫಿಕೆಟ್ ತೆಗೆದುಕೊಳ್ಳುವುದು.

ಅವ್ಯಕ್ತ ಸೂಚನೆ:- ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.

ಹೇಗೆ ಶರೀರದ ವಸ್ತ್ರವನ್ನು ಸಹಜವಾಗಿ ತೆಗೆಯಬಹುದು ಅದೇ ರೀತಿ ಈ ಶರೀರ ರೂಪಿ ವಸ್ತ್ರವು ಸಹ ಸಹಜವಾಗಿ ತೆಗೆಯುವಂತಿರಬೇಕು, ಇದರ ಅಭ್ಯಾಸ ಬೇಕು. ಒಂದುವೇಳೆ ವಸ್ತ್ರ ಟೈಟ್ ಆಗಿ ಇದ್ದರೆ ಅಥವಾ ತೊಂದರೆ ಕೊಡುತ್ತಿದ್ದರೆ, ಸಹಜವಾಗಿ ತೆಗೆಯಲು ಸಾಧ್ಯವಾಗುವುದಿಲ್ಲ, ಇದೇ ರೀತಿ ಈ ದೇಹ ರೂಪ ವಸ್ತ್ರವು ಸಹ ಯಾವುದೇ ಸಂಸ್ಕಾರದಲ್ಲಿ ಅಂಟಿಕೊಂಡಿದ್ದರೆ ತೊಂದರೆ ಕೊಡುತ್ತಾ ಅಥವಾ ಟೈಟ್ ಆಗಿ ಇರಬಾರದು. ಇದಕ್ಕಾಗಿ ಎಲ್ಲಾ ಮಾತುಗಳಲ್ಲಿಯೂ ಸಹಜವಾಗಿರಿ. ಸಹಜವಾಗಿರುತ್ತೀರಿ ಎಂದರೆ ಎಲ್ಲಾ ಕಾರ್ಯಗಳು ಸಹಜವಾಗುವುದು. ಎಷ್ಟು ಹಳೆಯ ಸಂಸ್ಕಾರದಿಂದ ಬಿನ್ನರಾಗಿರುವಿರಿ ಅಷ್ಟು ಸ್ಥಿತಿಯು ಸಹ ಭಿನ್ನ ಅರ್ಥಾತ್ ವಿದೇಹಿ ಸಹಜವಾಗಿ ಆಗುವಿರಿ.